Advertisement

ಮುದ್ರಣ ಮಾಧ್ಯಮದ ಮೇಲೆ ಜನರ ನಂಬಿಕೆ ಅಚಲ

05:40 PM Jul 31, 2021 | Team Udayavani |

ಸೇಡಂ: ಸಾಮಾಜಿಕ ಜಾಲತಾಣಗಳ ಸುದ್ದಿಗಳಲ್ಲಿ ಸತ್ಯ ಮತ್ತು ಸುಳ್ಳು ಸುದ್ದಿ ಅರಿಯುವುದು ಕಷ್ಟಕರವಾಗುತ್ತಿದ್ದು, ಪರಿವರ್ತನೆ ಹೊಡೆತಕ್ಕೆ ಪತ್ರಿಕೆಗಳು ಜೀವ ಕಳೆದುಕೊಳ್ಳುತ್ತಿವೆ. ಆದರೆ ಮುದ್ರಣ ಮಾಧ್ಯಮದ ಮೇಲೆ ಇನ್ನೂ ಜನರ ನಂಬಿಕೆ ಅಚಲವಾಗಿದೆ ಎಂದು ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಡಾ| ಶರಣಪ್ರಕಾಶ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಪಟ್ಟಣದ ಸುವರ್ಣ ಕರ್ನಾಟಕ ಭವನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು. ಪ್ರಜಾಪ್ರಭುತ್ವದ ಕಟ್ಟಕಡೆಯ ಆಶಯ ಮಾಧ್ಯಮವಾಗಿದೆ. ದೇಶದ ಸ್ವಾತಂತ್ರ್ಯ, ಮಾಧ್ಯಮದ ಸ್ವಾತಂತ್ರ್ಯ ಎರಡೂ ಒಂದೇ ಆಗಿದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತೇಲ್ಕೂರ ಫೌಂಡೇಶನ್‌ ಮುಖ್ಯಸ್ಥೆ ಸಂತೋಷಿರಾಣಿ ತೇಲ್ಕೂರ, ಸಮಾಜದಲ್ಲಿನ ಲೋಪದೋಷಗಳ ಮೇಲೆ ಬೆಳಕು ಚೆಲ್ಲಿ ಅವುಗಳನ್ನು ಪರಿಹರಿಸುವ ಮತ್ತು ಅಂಕುಡೊಂಕು ಸರಿಪಡಿಸಿ ಸ್ವಾಸ್ಥ್ಯ ಸಮಾಜ ನಿರ್ಮಿಸುವಲ್ಲಿ ಮಾಧ್ಯಮದ ಕೊಡುಗೆ ಅಪಾರವಾಗಿದೆ ಎಂದರು. ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಭವಾನಿಸಿಂಗ್‌ ಠಾಕೂರ ಮಾತನಾಡಿ, ಪತ್ರಕರ್ತರು ಸಮಾಜದ ಏಳ್ಗೆಯ ತುಡಿತ ಮತ್ತು ಬದ್ಧತೆ ಹೊಂದಿರುತ್ತಾರೆ. ಕೋವಿಡ್‌ದಿಂದ ನಿಧನರಾದ ಪತ್ರಕರ್ತರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಸಿಗುವಂತೆ ಮಾಡಲಾಗಿದೆ ಎಂದರು.

ಕೊತ್ತಲಬಸವೇಶ್ವರ ದೇವಾಲಯದ ಪೂಜ್ಯ ಸದಾಶಿವ ಮಹಾ ಸ್ವಾಮೀಜಿ ಆಶೀರ್ವಚನ ನೀಡಿದರು. ತಹಶೀಲ್ದಾರ್‌ ಬಸವರಾಜ ಬೆಣ್ಣೆಶಿರೂರ, ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವಿಂದ್ರಪ್ಪ ಅವಂಟಿ, ತಾಲೂಕು ಅಧ್ಯಕ್ಷ ಶಿವಕುಮಾರ ನಿಡಗುಂದಾ ಮಾತನಾಡಿದರು.

ಪುರಸಭೆ ಅಧ್ಯಕ್ಷೆ ಚನ್ನಮ್ಮಪಾಟೀಲ, ಸಂಘದ ಕೋಶಾಧ್ಯಕ್ಷ ರಾಜು ದೇಶಮುಖ, ಸಿಪಿಐ ರಾಜಶೇಖರ ಹಳಗೋದಿ ವೇದಿಕೆಯಲ್ಲಿದ್ದರು. ಶರಣು ಮಹಾಗಾಂವ ಸ್ವಾಗತಿಸಿದರು. ಪತ್ರಕರ್ತ ಸಿದ್ದಯ್ಯಸ್ವಾಮಿ ಆಡಕಿ ನಿರೂಪಿಸಿದರು, ಶರಣಪ್ಪ ಎಳ್ಳಿ ಪ್ರಾರ್ಥಿಸಿದರು, ರಮೇಶ ಇಂಜಳ್ಳಿಕರ್‌ ವಂದಿಸಿದರು. ವಿರೇಶ ಭಂಟನಳ್ಳಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ನಾಗಯ್ಯಸ್ವಾಮಿ ಬೊಮ್ನಳ್ಳಿ, ಶರಣಯ್ಯಸ್ವಾಮಿ ಬೊಮ್ನಳ್ಳಿ, ಸುಧೀರ ಬಿರಾದಾರ, ಸಿದ್ದಲಿಂಗಯ್ಯಸ್ವಾಮಿ ಮಲಕೂಡ, ಅಬ್ದುಲ್‌ ಗಫೂರ್‌, ಪಂಢರಿನಾಥ ಬಸುದೆ, ಸುರೇಶ ಬಿಜನಳ್ಳಿ ಇತರರಿದ್ದರು.

Advertisement

ವಿಶೇಷ ಸನ್ಮಾನ: ಮಾಧ್ಯಮ ಅಕಾಡೆಮಿ ನೂತನ ಸದಸ್ಯ ದೇವಿಂದ್ರಪ್ಪ ಕಪನೂರ್‌, ಪತ್ರಿಕಾ ವಿತರಕ ಕಿರಣ ಬಸೂತಕರ್‌, ಜಿಲ್ಲಾ ಮಟ್ಟದ ಉತ್ತಮ ಗ್ರಾಮೀಣ ವರದಿಗಾರ ಪ್ರಶಸ್ತಿ ಪಡೆದ ಅವಿನಾಶ ಬೊರಂಚಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next