Advertisement
ಸೋಮವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಜನಸ್ಪಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರಿ ಯೋಜನೆ, ಕಾರ್ಯಕ್ರಮಗಳ ದುರುಪಯೋಗದ ಬಗ್ಗೆ ಜಿಲ್ಲಾ ಧಿಕಾರಿ ಮತ್ತು ಇತರೆ ಇಲಾಖೆಗಳ ತಂಡಗಳ ಮೂಲಕ ಪರಿಶೀಲನೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
Related Articles
Advertisement
ಸ್ಥಳ ಪರಿಶೀಲನೆ ನಡಿಸಿ ಸೂಕ್ತ ಕ್ರಮ ಜರುಗಿಸುವಂತೆ ಉಪವಿಭಾಗಾಧಿಕಾರಿಗೆ ಸೂಚಿಸಿದರು. ಹರಿಹರ ತಾಲೂಕಿನ ಬಿಳಸನೂರು ಗ್ರಾಮದ ತಿಪ್ಪೇಶ್, ಬಿಳಸನೂರು ಗ್ರಾಮದ ನಾಗಪ್ಪ, ಜಮೀನು ಸರ್ವೇ ಮತ್ತು ಹದ್ದು ಬಸ್ತು ಮಾಡಿಕೊಡುತ್ತಿಲ್ಲ. ಸರ್ಕಾರಿ ಕಚೇರಿಗಳಲ್ಲಿ ಜಿಲ್ಲಾಧಿ ಕಾರಿ ಕಚೇರಿಯ ದೂರವಾಣಿ ಸಂಖ್ಯೆ ಬರೆಸುವಂತೆ ಮನವಿ ಮಾಡಿದರು. ಜಮೀನು ಸರ್ವೇ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನ್ಯಾಮತಿಯಲ್ಲಿ ನಾಡ ಕಚೇರಿ, ಅಟಲ್ ಜೀ ಜನಸ್ನೇಹಿ ಕೇಂದ್ರ, ಉಪ ತಹಶೀಲ್ದಾರ್ ಕಚೇರಿ, ರಾಜಸ್ವ ನಿರೀಕ್ಷಕರ, ಗ್ರಾಮ ಲೆಕ್ಕಾಧಿಕಾರಿ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು, ಸರ್ಕಾರಿ ಕಟ್ಟಡ ನಿರ್ಮಿಸಿಕೊಡಬೇಕು ಹಾಗೂ ಸರ್ವೇ ನಂ 34 ರಲ್ಲಿ ಸುಮಾರು 8 ಎಕರೆ ಜಾಗದಲ್ಲಿ ರುದ್ರಭೂಮಿ ನಿರ್ಮಿಸಿದರೆ ಎಲ್ಲಾ ಸಮಾಜದವರಿಗೂ ಅಂತ್ಯ ಸಂಸ್ಕಾರಕ್ಕೆ ಅನುಕೂಲವಾಗುತ್ತದೆ ಎಂದು ಗೋವಿನಕೋವಿ ಗ್ರಾಮದ ನಿವಾಸಿ ಜಿ.ಬಿ. ಸುರೇಶ್ ಮನವಿ ಸಲ್ಲಿಸಿದರು. ತಹಶೀಲ್ದಾರ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ರುದ್ರಭೂಮಿ ಒದಗಿಸುವಂತೆ ಸೂಚಿಸಿದರು.
ದಾವಣಗೆರೆಯ 45 ನೇ ವಾರ್ಡ್‌ನ ಎಸ್.ಜೆ.ಎಂ ನಗರದಲ್ಲಿ ಚರಂಡಿಯ ಮಧ್ಯಭಾಗದಲ್ಲಿ ವಿದ್ಯುತ್ ಕಂಬ ಹಾಕಿರುವುದರಿಂದ ಯಾವುದೇ ಸಮಯದಲ್ಲಾದರೂ ಅವಘಡ ಸಂಭವಿಸುವ ಸಾಧ್ಯತೆಯಿರುವುದರಿಂದ ತೆರವುಗೊಳಿಸಬೇಕು ಎಂದು ತಿಪ್ಪೇಶ್ ಮನವಿ ಮಾಡಿದರು. ದೊಂಬಿದಾಸರ 20 ಕುಟುಂಬದವರು ತರಳಬಾಳು ನಗರ(6ನೇ ಮೈಲಿಕಲ್ಲು)ದಲ್ಲಿ ಸುಮಾರು 20 ವರ್ಷಗಳಿಂದ ವಾಸವಾಗಿದ್ದು, ವಿದ್ಯುತ್ ವ್ಯವಸ್ಥೆ ಇಲ್ಲ. ವಸತಿ ಮತ್ತು ನಿವೇಶನ ಯೋಜನೆಯಡಿ ಮನೆ ಒದಗಿಸಿ ಕೊಡಬೇಕು ಎಂದು ಮನವಿ ಮಾಡಿದರು.
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಉದ್ಯಾನವನಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡಿ, ಪಟಾಕಿ ಸಿಡಿಸಿ ಪರಿಸರ ಮಲಿನ ಮಾಡುತ್ತಾರೆ. ಪರಿಸರ ಕಾಪಾಡುವ ಉದ್ದೇಶದಿಂದ ಹೊಸ ವರ್ಷಾಚರಣೆ ಸಮಯದಲ್ಲಿ ಪಾರ್ಕ್ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಿ, ಬೀಟ್ ವ್ಯವಸ್ಥೆಯ ಮೂಲಕ ಕಠಿಣ ಕ್ರಮ ಕೈಗೊಂಡು ಪರಿಸರ ಕಾಪಾಡಬೇಕು ಎಂದು ಪರಿಸರ ಸಂರಕ್ಷಣಾ ವೇದಿಕೆಯ ಗಿರೀಶ್ ದೇವರಮನೆ ಮನವಿ ಮಾಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಪದ್ಮಾ ಬಸವಂತಪ್ಪ, ಪ್ರಭಾರ ಅಪರ ಜಿಲ್ಲಾಧಿಕಾರಿ ಜಿ. ನಜ್ಮಾ, ಉಪವಿಭಾಗಾಧಿ ಕಾರಿ ಡಾ| ಮಮತಾ ಹೊಸಗೌಡರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಂ.ಎಸ್. ರಾಘವೇಂದ್ರ ಇತರರು ಇದ್ದರು.