Advertisement
ಈ ಬಗ್ಗೆ ಖಚಿತಪಡಿಸಿಕೊಳ್ಳಲು ಲೋಕಲ್ ಸರ್ಕಲ್ ಹೆಸರಿನ ಸಂಸ್ಥೆ ಮೂಡ್ ಆಫ್ ಕನ್ಸೂಮರ್ ಸರ್ವೆ (ಗ್ರಾಹಕ ಸಮೀಕ್ಷೆ) ನಡೆಸಿದ್ದು ಜನರ ವ್ಯಾಪಾರ ಮನಸ್ಥಿತಿಯನ್ನು ತೆರೆದಿಟ್ಟಿದೆ.
ಮುಂದಿನ 2 ತಿಂಗಳ ಖರ್ಚು ವೆಚ್ಚಗಳ ಕುರಿತು ವಿಶೇಷವಾಗಿ ಹಬ್ಬದ ವೇಳೆ ಖರೀದಿ ನಡೆಸಲಿದ್ದೀರಾ? ಏನು ಮಾಡುತ್ತಿರಿ ಎಂದು ಗ್ರಾಹಕರಿಗೆ ಪ್ರಶ್ನೆಗಳನ್ನು ಕೇಳಲಾಗಿತ್ತು. ಇದರಲ್ಲಿ ಗ್ರಾಹಕರು ಅವರದ್ದೇ ಆದ ಬಜೆಟ್ ಬಗ್ಗೆ ತಮ್ಮ ಉತ್ತರವನ್ನು ನೀಡಿದ್ದಾರೆ. ಜನರ ಮನಸ್ಥಿತಿ ಏನು?
ಮುಂದಿನ 2 ತಿಂಗಳು ಹಬ್ಬದ ಸೀಸನ್ ಆಗಿದ್ದು ಶೇ. 43ರಷ್ಟು ಜನ ನಾವು ಹಬ್ಬಕ್ಕಾಗಿ 10 ಸಾವಿರ ರೂ. ಖರ್ಚು ಮಾಡುತ್ತೇವೆ ಎಂದಿದ್ದಾರೆ. ಇನ್ನು 10 ಸಾವಿರದಿಂದ 50,000 ಸಾವಿರ ರೂ.ಗಳನ್ನು ನಿರ್ದಿಷ್ಟ ಕ್ಷೇತ್ರಕ್ಕೆ ವ್ಯಯಮಾಡುತ್ತೇವೆ ಎಂದು
Related Articles
ಹಬ್ಬದ ವೇಳೆ 50 ಸಾವಿರಕ್ಕಿಂತ ಮೇಲ್ಪಟ್ಟು ಖರ್ಚು ಮಾಡುವವರು ಕೇವಲ 4 ಶೇ. ಜನ ಮಾತ್ರ ಎಂದು ಸರ್ವೇ ಹೇಳಿದೆ.
Advertisement
ಜನರ ಹಣ ಎಲ್ಲೆಲ್ಲಿದೆ?ಸದ್ಯದ ಪರಿಸ್ಥಿತಿಯಲ್ಲಿ ಜನರ ಹಣದ ಶೇ. 44ರಷ್ಟು ಫಿಕ್ಸೆಡ್ ಡಿಪಾಸಿಟ್ (ಎಫ್ ಡಿ) ರೂಪದಲ್ಲಿದೆ. ಮ್ಯೂಚುವಲ್ ಫಂಡ್‌ನಲ್ಲಿ ಶೇ. 36ರಷ್ಟು ಮಂದಿ ಹಣ ಹೂಡಿದ್ದಾರೆ. ಉಳಿತಾಯ ಖಾತೆಯಲ್ಲಿ ಶೇ. 13ರಷ್ಟು ಹಣ ಇದ್ದರೆ, ರಿಯಲ್‌ಎಸ್ಟೇಟ್‌ನಲ್ಲಿ ಶೇ. 7 ಮಂದಿ ಹಣ ಹೂಡಿದ್ದಾರೆ. ಚಿನ್ನದ ಮೇಲೆ ಹೂಡಿಕೆ ಮಾಡಿದವರ್ಯಾರೂ ಸಮೀಕ್ಷೆಗೆ ಸಿಗಲಿಲ್ಲ ಎಂದು ಸಂಸ್ಥೆ ಹೇಳಿದೆ. ಲಭಿಸಿಲ್ಲ. ಹಣ ಚಲಾವಣೆ ಕುಸಿತ ಕಾರಣ?
ಪ್ರಸ್ತುತ ಮಾರುಕಟ್ಟೆಯಲ್ಲಿ ಹಣ ಓಡಾಡದೇ ಇರಲು ಹಲವು ಕಾರಣಗಳಿವೆ. ಈ ಅಧ್ಯಯನದ ಪ್ರಕಾರ ಶೇ. 11ರಷ್ಟು ಜನರು ಮಾತ್ರ ಹೆಚ್ಚು ವ್ಯವಹಾರದಲ್ಲಿ ತೊಡಗಿದ್ದಾರೆ. ಈ ಹಿಂದಿನ ನಮ್ಮ ವ್ಯವಹಾರಗಳಿಗೂ, ಈಗಿನ ವ್ಯವಹಾರಗಳಿಗೆ ಯಾವುದೇ ಕೊರತೆ ಇಲ್ಲ ಎಂದು ಶೇ. 41 ಮಂದಿ ಹೇಳಿದ್ದಾರೆ. ಇಲ್ಲ ನಾವೀಗ ವ್ಯವಹಾರ ಕಡಿಮೆ ಮಾಡಿದ್ದೇವೆ ಎಂದು ಶೇ.32 ಮಂದಿ ಹೇಳಿದ್ದು, 14 ಮಂದಿ ನಾವು ಏನೂ ಖರ್ಚು ಮಾಡಿಲ್ಲ ಎಂದಿದ್ದಾರೆ. ಶೇ. 2ರಷ್ಟು ಮಂದಿ ಖರ್ಚಿನ ಬಗ್ಗೆ ಏನೊಂದೂ ಉತ್ತರವನ್ನು ಕೊಟ್ಟಿಲ್ಲ. 60 ದಿನಗಳ ಹೂಡಿಕೆ ಎಲ್ಲೆಲ್ಲಿ?
ಮುಂದಿನ 2 ತಿಂಗಳು ಜನ ಎಲ್ಲೆಲ್ಲಿ ಹೂಡಿಕೆ ಮಾಡಲಿದ್ದಾರೆ ಎಂಬ ಕುತೂಹಲಕ್ಕೆ ಉತ್ತರ ಲಭಿದ್ದು, ಮನೆ ನವೀಕರಣಕ್ಕೆ ಶೇ. 29ರಷ್ಟು ಜನ ಆಸಕ್ತಿ ಹೊಂದಿದ್ದಾರೆ. ವಾಹನ ಖರೀದಿಗೆ ಶೇ. 12, ಒಡವೆ ಖರೀದಿಗೆ ಶೇ. 6, ಎಲೆಕ್ಟ್ರಾನಿಕ್ ಉಪಕರಣ ಖರೀದಿಗೆ ಶೇ. 20, ಪ್ರಾಪರ್ಟಿ ಖರೀದಿಗೆ ಶೇ. 3 ಮತ್ತು ಇತರ ಕ್ಷೇತ್ರದಲ್ಲಿ ಶೇ. 20 ಜನ ಹಣ ಹೂಡಲಿದ್ದಾರೆ. ಇವರಲ್ಲಿ ಶೇ. 62ರಷ್ಟು ಜನ ರಿಟೇಲ್ ಶಾಪ್ ಮೂಲಕ ಎಲೆಕ್ಟ್ರಾನಿಕ್ಸ್ ಉಪಕರಣ ಖರೀದಿ ಮಾಡಲಿದ್ದು, ಶೇ. 27ರಷ್ಟು ಜನ ಇ-ಕಾಮರ್ಸ್ ಮೊರೆ ಹೋಗಲಿದ್ದಾರೆ. ಶೇ.11ರಷ್ಟು ಮಂದಿ ಮಾತ್ರ ಇನ್ನೂ ಗೊಂದ ಲದಲ್ಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ಪರಿಸ್ಥಿತಿ ಸುಧಾರಿಸಲ್ಲ?
ಮುಂದಿನ 6 ತಿಂಗಳಲ್ಲಿ ನಮ್ಮ ವಿತ್ತೀಯ ಪರಿಸ್ಥಿತಿ ಸುಧಾರಿಸಬಹುದೇ ಎಂಬ ಪ್ರಶ್ನೆಗೆ ಶೇ. 31 ಜನ ಪರಿಸ್ಥಿತಿ ಸುಧಾರಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ಶೇ. 31ರಷ್ಟು ಜನ ಅಭಿಮತ ವ್ಯಕ್ತಪಡಿಸಿದರೆ, ಈಗಿನ ಪರಿಸ್ಥಿತಿಗಿಂತ ಕಳಪೆಯಾಗಲಿದೆ ಎಂದು ಶೇ. 31 ಜನ ಅಭಿಪ್ರಾಯಿಸಿದ್ದಾರೆ. ನಾವೇನೂ ಹೇಳಲು ಬರುವುದಿಲ್ಲ ಎಂದು ಶೇ. 7ರಷ್ಟು ಮಂದಿ ಹೇಳಿದ್ದಾರೆ.