Advertisement
ಲೋಕಸಮರದ ಹೊಸ್ತಿಲಲ್ಲಿದ್ದರೂ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರವು ನಿದ್ರಿಸುತ್ತಿರುವಂತೆ ಕಂಡು ಬರು ತ್ತಿದೆ. ಬಿಜೆಪಿಯವರು ಮಾತ್ರ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಹಿಂದೆ ಸ್ಥಳೀಯ ಚುನಾವಣೆಗಳಿಂದಿಡಿದು ವಿಧಾನಸಭೆ – ಲೋಕಸಭೆಯಲ್ಲಿ ರಾಜಕಾರಣಿಗಳಿಗಿಂತ ಕಾರ್ಯಕರ್ತರು ಹೆಚ್ಚಾಗಿ ತಮ್ಮ ನಾಯಕನ ಗೆಲುವಿಗಾಗಿಅವಿಶ್ರಾಂತ ವಾಗಿ ಅಹೋರಾತ್ರಿ ಕೆಲಸ ಮಾಡುತ್ತಿದ್ದರು. ಆಗಾಗ ಮುಖಂಡರು ಬಂದು ಕಾರ್ಯಕರ್ತರ ಪರಾಮರ್ಶಿಸುತ್ತಿ ದ್ದರು. ಆದರೆ, ಇಂದಿನ ಲೋಕಸಭಾ ಚುನಾವಣೆಯಲ್ಲಿ ಜನತೆ ನಿರಾಸಕ್ತಿ ತೋರಿದರೆ, ಮತ್ತೂಂದು ಕಡೆಯ ಮುಖಂಡರ ಸ್ವ-ಹಿತಾಸಕ್ತಿಯಿಂದ ಹಾಗೂ ಮುಂದಿನ ಚುನಾವಣೆಯ ಗುರಿಯಿಂದ ಓಡಾಡುತ್ತಿದ್ದಾರೆ.
ದಲ್ಲಿ ಕೇಳಿ ಬರುತ್ತಿದೆ. ಆದರೂ ಯಾರು ಏನೇ ಮಾಡಿದರೂ ತಾನು ಗೆಲ್ಲುತ್ತೇನೆಂಬ ಭಾವನೆ ವ್ಯಕ್ತಪಡಿಸುತ್ತಿರುವುದು ಸಭೆಗಳಲ್ಲಿ ಕಂಡು ಬರುತ್ತಿದೆ. ಲೆಕ್ಕಾಚಾರ ಕಾದು ನೋಡಿ: ಪ್ರತಿ ಚುನಾವಣೆಯಲ್ಲೂ ಶ್ರೀನಿವಾಸಪುರ ಕ್ಷೇತ್ರದಲ್ಲಿ ಹೆಚ್ಚಾಗಿ ಕೆಎಚ್‌ಎಂ ಪರ ಮತಯಾಚನೆ ಮಾಡುತ್ತಿದ್ದು, ಈ ಬಾರಿ ಇನ್ನಷ್ಟು ಮತ ಹೆಚ್ಚಿಸಿಕೊಳ್ಳುತ್ತೇನೆ ಎಂದು ಹೇಳಿಕೊಳ್ಳುತ್ತಾ ನನ್ನ ಲೆಕ್ಕಾ ಚಾರಗಳು ನನಗಿವೆ ಎಂದು ಸಭೆಗಳಲ್ಲಿ ಹೇಳಿಕೊಳ್ಳು ತ್ತಿದ್ದಾರೆ. ಇತ್ತ ರಾಜನಾಗಿಸುವ ಮತದಾರನ ಇಂಗಿತ ಎಲ್ಲಿಯವರೆಗೆ ಅವರ ಲೆಕ್ಕಾಚಾರಗಳನ್ನು
ಸರಿದೂಗಿ ಸುತ್ತವೆ ಎಂಬುದು ಕಾದು ನೋಡಬೇಕಿದೆ.
Related Articles
ಕಾಂಗ್ರೆಸ್ ಪಕ್ಷದ ಕೆಲ ಮುಖಂಡರು ಸಭೆಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಪರೂಪಕ್ಕೆ ಕಂಡು ಬರುತ್ತಿದೆ. ಇನ್ನು ವಿಧಾನಸಭಾಧ್ಯಕ್ಷರು ಮೈತ್ರಿ ಪಕ್ಷದ ಯಾವ ಕಡೆಯೂ ವಾಲದೆ ತನ್ನ ಹುದ್ದೆಗೆ ಅಂಟಿಕೊಂಡಿದ್ದು, ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿಲ್ಲ ಮತ್ತು ಕಾರ್ಯಕರ್ತರ ಪ್ರಶ್ನೆಗಳಿಗೆ ನಾನು ನಿಮ್ಮನ್ನು ಈ ಚುನಾವಣೆಯಲ್ಲಿ ನಿರ್ದೇಶಿಸುವುದಿಲ್ಲ ಮತ್ತು ನನ್ನ ಕಾಂಗ್ರೆಸ್ ನಿಷ್ಠೆಯನ್ನು ಬಿಡುವುದಿಲ್ಲ.
Advertisement
ಖಂಡಿತವಾಗಿ ನಾನು ಕೆ. ಎಚ್.ಮುನಿಯಪ್ಪಗೆ ಮತ ನೀಡಿ ಎಂದು ಹೇಳುವುದಿಲ್ಲ ಹಾಗೂ ಅವರಿಗೆ ನನ್ನ ಬೆಂಬಲವಿಲ್ಲ. ಹಾಗೆಂದು ಬಿಜೆಪಿ ಮತ ನೀಡಿ ಎಂದು ಹೇಳುವುದಕ್ಕಾಗುವುದಿಲ್ಲ, ಮತದಾರರಾದ ನೀವು ಪ್ರಬು ದ್ಧರು ಅರಿತು ಮತದಾನ ಮಾಡಿ ಎಂದು ಹೇಳಿರುವುದು ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ. ಇಂದಿನ ಸ್ಥಿತಿ ಹಿಂಬಾಗಿಲಿನಿಂದ ನುಣುಚಿಕೊಳ್ಳುವಂತೆ ಹೊಸ ಭಾಷ್ಯವನ್ನು ಬರೆಯುವುದಕ್ಕೆ ಮೈತ್ರಿ ಧರ್ಮ ಮುಂದಿಟ್ಟುಕೊಂಡು ಕೆಲ ಪಕ್ಷಾಂತರರ ಮತಯಾಚನೆ ಮಾಡುತ್ತಿದ್ದಾರೆ. ಇಲ್ಲಿನ ಮತದಾರ ಪ್ರಭುಗಳು ಎತ್ತ ವಾಲುವರೋ ಫಲಿತಾಂಶ ಬಂದ
ಮೇಲೆಯೇ ತಿಳಿಯುವುದು. ಮನದಾಳದಲ್ಲಿ ಕಿಚ್ಚು: ಮತ್ತೂಂದಡೆ ಕಾಂಗ್ರೆಸ್ ಮತ್ತು ಜೆಡಿಎಸ್ ಅನ್ನುವುದಕ್ಕಿಂತ ಹೆಚ್ಚಾಗಿ ವ್ಯಕ್ತಿ ರಾಜಕಾರಣಕ್ಕೇ ಒತ್ತು ಕೊಟ್ಟಿದ್ದ ಶ್ರೀನಿವಾಸಪುರ ಕ್ಷೇತ್ರದ ಜನತೆ ಸ್ವಾಮಿ-ರೆಡ್ಡಿ ಎನ್ನುತ್ತಾ ವ್ಯಕ್ತಿ ರಾಜಕಾರಣಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹಲವು ನಿದರ್ಶನಗಳಿವೆ. ಕೆ. ಆರ್.ರಮೇಶ್‌ಕುಮಾರ್ ಹೇಳಿಕೆಯಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ. ಮೇಲ್ಮಟ್ಟದಲ್ಲಿ ಮೈತ್ರಿಯೆಂದು ತಬ್ಟಾಡಿಕೊಳ್ಳುತ್ತಿರುವ ನಾಯಕರ ಕಂಡು ಸ್ಥಳೀಯವಾಗಿ ಮನದಾಳದಲ್ಲಿ ಕಿಚ್ಚು ಇಟ್ಟುಕೊಂಡು ಹೊರಗೆ ನಗುವನ್ನು ನಟಿಸಲಾಗದೆ ಎರಡೂ ಪಕ್ಷಗಳ ಮುಖಂಡರು ಎದುರುಬದರು ಆಗಲಾರದೆ
ಓಡಾಡುತ್ತಿದ್ದಾರೆ. ವೈ.ಎ.ನಾರಾಯಸ್ವಾಮಿ ಎಲ್ಲಿದ್ದೀಯಪ್ಪಾ?
ಕೋಲಾರ ಲೋಕಸಭೆ ಕ್ಷೇತ್ರದಲ್ಲಿ ಚುನಾವಣೆ ಕಾವು ಜೋರಾಗಿದೆ. ದೇಶವೆಲ್ಲಾ ಮೋದಿಯ ಅಲೆಯಲ್ಲಿ ತೇಲಾಡುತ್ತಿದೆ. ಮೊದಲ ಬಾರಿಗೆ ರಾಜಕೀಯ ಕ್ಷೇತ್ರದಲ್ಲಿನ ವ್ಯಕ್ತಿಯೊಬ್ಬರ ಹೆಸರನ್ನು ಚಿಕ್ಕವರಿಂದಿಡಿದು ಇಳಿ ವಯಸ್ಸಿನವರೆಲ್ಲಾ ಹೇಳುತ್ತಿದ್ದಾರೆ. ಆದರೆ, ಅದೇ ಪಕ್ಷದಿಂದ ವಿಧಾನ ಪರಿಷತ್ ಸದಸ್ಯರಾಗಿ ಹಲವು ಬಾರಿ ಆಯ್ಕೆಯಾಗಿರುವ ವೈ.ಎ.ನಾರಾಯಣಸ್ವಾಮಿ ಕ್ಷೇತ್ರದಲ್ಲಿ ಎಲ್ಲಿಯೂ ಕಾಣಿಸದಿ ರುವುದು ಅಚ್ಚರಿಗೆ ಕಾರಣವಾಗಿದೆ. ಒಂದು ಬಾರಿ ಜಿಜೆಪಿಯಿಂದ ಹೆಬ್ಟಾಳ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾದಾಗಲೂ ಕ್ಷೇತ್ರದಲ್ಲಿ ಪಕ್ಷದ ಬೆಳವಣಿಗೆಗೆ ಮನಸ್ಸು ಮಾಡದಿರುವುದರಿಂದ ಬಿಜೆಪಿಗೆ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಹಿನ್ನಡೆಯಾಗಿದೆ. ಆದರೂ ಸ್ಥಳೀಯ ಮುಖಂಡರು ಮಾತ್ರ ವೈ.ಎ.ಎನ್ ಅವರನ್ನು ಬಿಟ್ಟುಕೊಡುತ್ತಿಲ್ಲ, ನಮಗೆ ನಿರಂತರ ದೂರವಾಣಿ ಸಂಪರ್ಕದಲ್ಲಿದ್ದಾರೆ ಎಂದು ಹೇಳುತ್ತಿದ್ದಾರೆ. ಜಿಲ್ಲೆಯ ವಿವಿಧೆಡೆಯಿಂದ ಎಲ್ಲಾ ಪಕ್ಷಗಳ ಮುಖಂಡರು ಬಂದು ಮೋದಿಗಾಗಿ ಮತಯಾಚನೆ ಮಾಡುತ್ತಿರುವುದು ಕಂಡು ಬರುತ್ತಿದೆ. ಆದರೆ, ನಾರಾಯಣಸ್ವಾಮಿ ಮಾತ್ರ ಚುನಾವಣೆ ಅಖಾಡದಲ್ಲಿ ಕಂಡು ಬರದಿರುವುದು ಹಲವು ಚರ್ಚೆಗಳಿಗೆ ಗ್ರಾಸವಾಗಿದೆ.