Advertisement

ಕೋವಿಡ್-19 ವೈರಸ್‌ ದೂರ ಇಡಲು ಜನರ ಸಹಕಾರ ಅಗತ್ಯ

03:19 PM Apr 12, 2020 | mahesh |

ಬಂಗಾರಪೇಟೆ: ದೇಶದಲ್ಲಿ ಮಹಾಮಾರಿ ಕೋವಿಡ್-19 ವೈರಸ್‌ನ್ನು ದೂರು ಇಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಮತ್ತೆ ಲಾಕ್‌ಡೌನ್‌ ಮಾಡಿದರೂ ಪರವಾಗಿಲ್ಲ. ಸಂಪೂರ್ಣವಾಗಿ ಕೊರೊನಾ ವೈರಸ್‌ನ್ನು ದೇಶದಿಂದಲೇ ದೂರ ಇಡಬೇಕಾಗಿರುವುದರಿಂದ ಲಾಕ್‌ಡೌನ್‌ಗೆ ಜನರು ಸಂಪೂರ್ಣ ಸಹಕಾರ ನೀಡಬೇಕಾಗಿದೆ ಎಂದು ಜಿಪಂ ಸದಸ್ಯ ಬಿ.ವಿ.ಮಹೇಶ್‌ ಹೇಳಿದರು.

Advertisement

ಪಟ್ಟಣದ ದೇಶಿಹಳ್ಳಿ, ಸಿದ್ದಾರ್ಥ ನಗರ, ಫ‌ಲವತಿಮ್ಮನಹಳ್ಳಿ ವಾರ್ಡುಗಳಲ್ಲಿ ನಿರಾಶ್ರಿತರಿಗೆ ಹಾಗೂ ಬಡವರ ಮನೆ ಗಳಿಗೆ ತೆರಳಿ ಆಹಾರದ ಪ್ಯಾಕೇಟ್‌ಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು, ಸರ್ಕಾರಗಳು ಎಲ್ಲಾ ಪಡಿತರದಾರರಿಗೆ ಅಕ್ಕಿ ಸೇರಿದಂತೆ ದನಸಿ ವಸ್ತುಗಳು ನೀಡಿ ಸಮಾಧಾನ ಪಡಿಸಿದರೂ ಮುಖ್ಯವಾಗಿ ಪಡಿತರ ಚೀಟಿ, ಬ್ಯಾಂಕ್‌ ಖಾತೆ, ಆಧಾರ್‌ ಕಾರ್ಡ್‌ ಇಲ್ಲದೇ ಜೀವನ ನಡೆಸುತ್ತಿರುವ ನಿರ್ಗತಿಕರಿಗೆ ಜಿಲ್ಲಾಡಳಿತವು ಯಾವುದೇ ಕ್ರಮಕೈಗೊಳ್ಳದೇ ಇರುವುದರಿಂದ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ದಾನಿಗಳು ಸಹಕಾರ ನೀಡುತ್ತಿದ್ದಾರೆ ಎಂದರು.

ಜಿಲ್ಲಾಡಳಿತವು ಕೆಲವು ಸ್ಲಂಗಳಲ್ಲಿ
ವಾಸಿಸುವ ನಿರಾಶ್ರಿತರಿಗೆ, ನಿರ್ಗತಿಕರಿಗೆ, ಬಡವರಿಗೆ ವಿಶೇಷ ಪ್ಯಾಕೇಜ್‌ನ್ನು ಘೋಷಣೆ ಮಾಡಬೇಕಾಗಿದೆ. ಇಂತಹವರಿಗೆ ಕೊರೊನಾ ವೈರಸ್‌ ಲಾಕ್‌ ಡೌನ್‌ ಮುಗಿಯುವವರೆಗೂ ತಪ್ಪದೇ ಆಹಾರವನ್ನು ಒದಗಿಸಲು ತುರ್ತುಕ್ರಮ ಕೈಗೊಂಡರೆ ಜಿಲ್ಲಾಡಳಿತವು ಈ ಕೂಡಲೇ ಇದರ ಬಗ್ಗೆ ಕ್ರಮವಹಿಸ ಬೇಕಾಗಿದೆ ಎಂದು ಒತ್ತಾಯಿಸಿದರು. ತಾಲೂಕಿನಲ್ಲಿ ಬೀರಂಡಹಳ್ಳಿ ಬಳಿ ನಿರಾಶ್ರಿತರ ಕೇಂದ್ರ ಇದ್ದರೂ ಸಹ ಇಲ್ಲಿ ವಾಸವಾಗದೇ ಸಾಕಷ್ಟು ಭಿಕ್ಷುಕರು ಬೀದಿಗಳಲ್ಲಿ, ಸ್ಲಂಗಳಲ್ಲಿ, ಕೆರೆಯ ಅಂಗಗಳಲ್ಲಿ ವಾಸವಾಗಿದ್ದಾರೆ. ಇಂತಹವರಿಗೆ ಯಾವುದೇ ಸ್ವಯಂ ಸೇವಾ ಸಂಸ್ಥೆಗಳು ಪ್ರತಿ ದಿನ ಒಂದು ಬಾರಿ ಆಹಾರ ನೀಡಿದರೆ ದಿನ ಪೂರ್ತಿ ತಿನ್ನಲು ಆಹಾರ ಇಲ್ಲದೇ ಪರದಾಡುತ್ತಿದ್ದಾರೆ. ಭಿಕ್ಷೆ ಬೇಡಿ ಜೀವನ ಮಾಡುತ್ತಿರುವವರ ಬಗ್ಗೆ ಜಿಲ್ಲಾಡಳಿತವು ಕ್ರಮಕೈಗೊಂಡರೆ ಉತ್ತಮ ಎಂದು ಸಲಹೆ ನೀಡಿದ್ದಾರೆ.

ಪ್ರತಿ ತಾಲೂಕಿನಲ್ಲಿ ಎಲ್ಲಾ ನಿರಾಶ್ರಿತರಿಗೆ ಹಾಗೂ ಬಡವರಿಗೆ ಮೂಲಭೂತವಾಗಿ ಎಲ್ಲಾ ಸೌಲಭ್ಯಗಳನ್ನು ಸ್ವಯಂ ಸಂಸ್ಥೆಗಳು, ಸ್ವಯಂ ಸೇವಕರು ಒದಗಿಸಲು ಸಾಧ್ಯವಿಲ್ಲ. ಜಿಲ್ಲಾ ಹಾಗೂ ತಾಲೂಕು ಆಡಳಿತವೂ ಸಹ ಇದರ ಬಗ್ಗೆ ತುರ್ತುಕ್ರಮಕೈಗೊಳ್ಳಬೇಕಾಗಿದೆ. ಕೆಲವು ಕಡೆ ಮಾತ್ರ ಸ್ವಯಂಪ್ರೇರಿತರಾಗಿ ಮಾಡಿದರೆ ಉಳಿದಂತೆ ಕಡೆಗಳಲ್ಲಿ ಬಡವರಿಗೆ ವ್ಯವಸ್ಥೆ ಮರೀಚಿಕೆಯಾಗುತ್ತಿರುವುದರಿಂದ ಜಿಲ್ಲಾಡಳಿತವೂ ಸಹ ವಿವಿಧ ಇಲಾಖೆಗಳ ಮೂಲಕ ಅಗತ್ಯಕ್ರಮಕೈಗೊಳ್ಳಬೇಕಾಗಿದೆ ಎಂದು ಹೇಳಿದರು.  ಕೋಲಾರ ಸಂಸದ ಎಸ್‌. ಮುನಿಸ್ವಾಮಿ ಪ್ರತಿ ತಾಲೂಕಿನಲ್ಲಿಯೂ ಸಹ ದಿನಸಿ ವಸ್ತುಗಳನ್ನು ಹಾಗೂ
ಆಹಾರ ಪದಾರ್ಥಗಳನ್ನು ಬಡವರಿಗೆ ವಿತರಣೆ ಮಾಡುತ್ತಿದ್ದು, ಮುಂದಿನ ವಾರ ಬಂಗಾರಪೇಟೆಯಲ್ಲಿ ಸಂಸದರು ತಮ್ಮ ಸ್ವಂತ ಖರ್ಚಿನಿಂದ ಉಚಿತವಾಗಿ ಆಹಾರ ಪದಾರ್ಥಗಳನ್ನು ವಿತರಣೆ ಮಾಡಲಿದ್ದಾರೆಂದು ಹೇಳಿದರು.

ದೇಶಿಹಳ್ಳಿ ವಾರ್ಡಿನ ಪುರಸಭೆ ಸದಸ್ಯೆ ಸೌಂದರ್ಯ ಪ್ರಭಾಕರ್‌ರಾವ್‌, ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಅಂಬಿಕಾ, ಭಜ ರಂಗದ ದಳ ಬಿ.ಪಿ.ಮಹೇಶ್‌, ಬಿಜೆಪಿ ಯುವ ಮೋರ್ಚಾ ಮುಖಂಡ ಯಳಬುರ್ಗಿ ಅರುಣ್‌, ಬಿ.ವಿ. ಪ್ರತಾಪ್‌, ಅಮರಾ ವತಿ, ಮಂಜುನಾಥ್‌, ಅಜಯ್‌, ರಾಜೇಶ್‌ ಮುಂತಾದವರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next