Advertisement
ಹು-ಧಾ ಮಹಾನಗರ ಪಾಲಿಕೆ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಶನಿವಾರ ಏಕಬಳಕೆ ಪ್ಲಾಸ್ಟಿಕ್ ನಿಷೇಧ ಕುರಿತು ವ್ಯಾಪಾರಸ್ಥರು, ಉದ್ಯಮಿಗಳು ಹಾಗೂ ಸಾರ್ವಜನಿಕರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
Related Articles
Advertisement
ಮಹಾಪೌರ ಈರೇಶ ಅಂಚಟಗೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪೇಪರ್ ಬ್ಯಾಗ್ ಬಳಸುವ ಬಗ್ಗೆ ಜಗದೀಶ ಶೆಟ್ಟರ ಹಾಗೂ ಬಸವರಾಜ ಹೊರಟ್ಟಿಯವರು ರಾಜ್ಯಮಟ್ಟದಲ್ಲಿ ಅಧಿಕಾರಿಗಳ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತಾರೆ. ಪ್ಲಾಸ್ಟಿಕ್ ತಡೆಯಲು ಮುಂದಾಗುವ ಅಧಿಕಾರಿಗಳು ವ್ಯಾಪಾರಿಗಳೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಬೇಕು ಎಂದು ಹೇಳಿದರು.
ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ ಮಾತನಾಡಿ, ಅಧಿಕಾರಿಗಳು ವ್ಯಾಪಾರಸ್ಥರ ಮೇಲೆ ನಿರ್ಬಂಧ ಹೇರುವ ಬದಲು ಉತ್ಪಾದಕರ ಮೇಲೆ ಕ್ರಮಕೈಗೊಳ್ಳಬೇಕು ಎಂದರು. ಮಾಲಿನ್ಯ ನಿಯಂತ್ರಣ ಮಂಡಳಿಯ ಶೋಭಾ ಪ್ರಾಸ್ತಾವಿಕ ಮಾತನಾಡಿದರು.
ಉಪ ಮಹಾಪೌರ ಉಮಾ ಮುಕುಂದ, ಪಾಲಿಕೆ ಸಭಾನಾಯಕ ತಿಪ್ಪಣ್ಣ ಮಜ್ಜಗಿ, ವಿಪಕ್ಷ ನಾಯಕ ದೊರೈರಾಜ ಕಲ್ಲಕುಂಟ್ಲಾ, ಕೆಸಿಸಿಐನ ಅಧ್ಯಕ್ಷ ವಿನಯ ಜವಳಿ, ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ ಇನ್ನಿತರರಿದ್ದರು.
ಅಧಿಕಾರಿಗಳು ಸೌಜನ್ಯದಿಂದ ವರ್ತಿಸಲಿ
ಸರಕಾರ ಎಲ್ಲ ರೀತಿಯ ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡಿದ್ದರೆ ಸಾರ್ವಜನಿಕರಲ್ಲಿ ಗೊಂದಲ ಆಗುತ್ತಿರಲಿಲ್ಲ. ಪ್ಲಾಸ್ಟಿಕ್ ತಡೆಯಲು ಅಧಿಕಾರಿಗಳು ಯಾವ್ಯಾಗ ಬೇಕಾದಾಗ ಅಂಗಡಿ, ಹೋಟೆಲ್‌ಗೆ ದಾಳಿ ಮಾಡುತ್ತಾರೆ. ಈ ಸಂದರ್ಭದಲ್ಲಿ ಅವರ ವರ್ತನೆಯಿಂದ ಬೇಜಾರಾಗುತ್ತೆ. ದಂಡ ವಿಧಿಸಲು ಬಂದವರು ಸೌಜನ್ಯದಿಂದ ವರ್ತಿಸದೆ ದಬ್ಟಾಳಿಕೆ ಮಾಡುತ್ತಿದ್ದಾರೆ ಎಂದು ಹೋಟೆಲ್ ಉದ್ಯಮಿ ಸುಧಾಕರ ಶೆಟ್ಟಿ ಆರೋಪಿಸಿದರು.
ವ್ಯಾಪಾರಿ ವಿಜಯ ಅಳಗುಂಡಗಿ ಮಾತನಾಡಿ, ಪ್ಲಾಸ್ಟಿಕ್ ನಿಷೇಧಕ್ಕೆ ನಾವು ಕೈಜೋಡಿಸುತ್ತೇವೆ. ಕೇಂದ್ರ ಸರಕಾರ 50 ಮೈಕ್ರಾನ್ ಬಳಕೆಗೆ ಅವಕಾಶ ನೀಡಿದೆ. ಅದು ರಾಜ್ಯದಲ್ಲೂ ಜಾರಿಯಾಗಲಿ ಎಂದರು. ವ್ಯಾಪಾರಸ್ಥ ಸವಣೂರ ಮಾತನಾಡಿ, ವ್ಯಾಪಾರಸ್ಥರು ಸಮಸ್ಯೆಯಲ್ಲಿದ್ದಾರೆ. ಒಂದು ಅಥವಾ ಎರಡು ತಿಂಗಳು ಸಮಯ ನೀಡಿ ಎಂದು ಕೋರಿದರು.