Advertisement
ಈ ಹಿನ್ನೆಲೆಯಲ್ಲಿ ನಮ್ಮ ಸುತ್ತ-ಮುತ್ತ ನಡೆಯುವ ಕಾನೂನು ಬಾಹಿರ ಚಟುವಟಿಕೆಗಳು, ಅಹಿತಕರ ಘಟನೆಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯ ವಾದಲ್ಲಿ ಸಾರ್ವಜನಿಕರು ಕೂಡಲೇ ಪೊಲೀಸರ ಗಮನಕ್ಕೆ ತರುವುದು ಕೂಡ ಅಪರಾಧ ನಿಯಂತ್ರಣದ ಒಂದು ಭಾಗವಾಗಿದೆ. ಇದಕ್ಕೆ ಪೂರಕ ವಾಗಿ ನಗರದ ವಿವಿಧೆಡೆ ನಡೆಯುತ್ತಿರುವ ಸರ ಕಳವು, ಡಕಾಯಿತಿ, ದರೋಡೆ, ವಂಚನೆ ಸೇರಿ ವಿವಿಧ ಅಪರಾಧ ಎಸಗುವ ಓಜಿಕುಪ್ಪಂ,ತಿರುಚ್ಚಿ, ಇರಾನಿ, ರಾಮ್‌ಜೀ, ಶಾಮ್ಲಿ, ಬವಾರಿಯಾ,ಬೀಲ್ಸ್, ನೇಪಾಳಿ ಗ್ಯಾಂಗ್ ಮತ್ತು ಅವುಗಳ ಕೃತ್ಯದ ಮಾದರಿ ಬಗ್ಗೆ “ಉದಯವಾಣಿ’ ಕಳೆದ ಎಂಟು ದಿನಗಳಿಂದ “ಇರಲಿ ಎಚ್ಚರ’ ಎಂಬ ಅಂಕಣಗಳನ್ನು ಓದುಗರ ಮುಂದಿಟ್ಟಿತ್ತು.
Related Articles
ಕೆಲಸ ಆಗುತ್ತಿದೆ. ಜತೆಗೆ ಮುಖ್ಯವಾಗಿ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಪಿಂಕ್ ಹೊಯ್ಸಳ, ಬೀಟ್ ವ್ಯವಸ್ಥೆ, ಗಸ್ತು ಹೆಚ್ಚಳ ಮಾಡುವ ಮೂಲಕ ಸಾರ್ವಜನಿಕರಿಗೆ ಹತ್ತಿರವಾಗುತ್ತಿದೆ. ಇದರೊಂದಿಗೆ ಸಾರ್ವಜನಿಕರು ಕೂಡ ಪೊಲೀಸರ ಜತೆಕೈಜೋಡಿಸಿದರೆ ಇನ್ನಷ್ಟು ಪರಿಣಾ
ಮಕಾರಿಯಾಗಿ ಅಕ್ರಮ ಚಟುವಟಿಕೆ ಮಾಡುವವರ ವಿರುದ್ಧ ಸಮರ ಸಾರುವುದರ ಜತೆಗೆ ಅವರ ಹೆಡೆಮುರಿ ಕಟ್ಟಬಹುದು ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.
Advertisement
112ಗೆ ಕರೆ ಮಾಡಿ: ಈ ಮೊದಲು ಪೊಲೀಸ್ ಸಹಾಯವಾಣಿ 100 ಇತ್ತು. ಇದೀಗ ಅದನ್ನು “112′ ಆಗಿ ಬದಲಾಯಿಸಲಾಗಿದೆ. ಹೀಗಾಗಿ ಸಾರ್ವಜನಿಕರು ತಮ್ಮ ಯಾವುದೇ ಸಮಸ್ಯೆಗಳಿಗೆ “112’ಗೆ ಕರೆ ಮಾಡಿದರೆ ಕೇವಲ 6-8 ನಿಮಿಷ (ಅದಕ್ಕೂ ಮೊದಲು)ದಲ್ಲಿ ನಿಮ್ಮ ಸಮೀಪ ಹೊಯ್ಸಳ ವಾಹನಗಳು ನೆರವಿಗೆ ಬರಲಿದೆ.
ಸಾರ್ವಜನಿಕರು ಏನು ಮಾಡಬೇಕು?● ಅಪರಾಧ ನಡೆದಾಗ ಕೂಡಲೇಪೊಲೀಸ್ ಸಹಾಯವಾಣಿ112ಗೆ ಕರೆಮಾಡಬೇಕು.
● ಓಡಾಡುವ ರಸ್ತೆಯಲ್ಲಿಅನುಮಾನಾಸ್ಪದ ವಾದವ್ಯಕ್ತಿಗಳು ಕಂಡರೆ ಸಮೀಪದ ಪೊಲೀಸ್ ಠಾಣೆಗೆಮಾಹಿತಿ ನೀಡಬೇಕು.
● ರಸ್ತೆಅಪಘಾತ,ಬೆಂಕಿಅವಘಡ, ಗಲಾಟೆ, ಮಾರಕಾಸ್ತ್ರಗಳನ್ನು ಹಿಡಿದು ಓಡಾಡುವುದು ಸೇರಿ ಯಾವುದೇ ಅಹಿತಕರ ಘಟನೆ ಕಂಡರೆ ಪೊಲೀಸ್ ಸಹಾಯವಾಣಿಗೆ ಮಾಹಿತಿ ನೀಡಬೇಕು.
● ಪೊಲೀಸ್ ಸಹಾಯವಾಣಿಗೆ ಕರೆ ಮಾಡುವುದರ ಜತೆಗೆ ಸಾಮಾಜಿಕ ಜಾಲತಾಣ ಟ್ವಿಟರ್,ಫೇಸ್‌ಬುಕ್, ಇನ್‌ಸ್ಟ್ರಾಗ್ರಾಂ(ಬೆಂಗಳೂರು ಸಿಟಿ ಪೊಲೀಸ್) ಮೂಲಕವೂ ದೂರು ನೀಡಬಹುದು.
● ತಮ್ಮಮನೆ, ಕಟ್ಟಡಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ಅಪರಾಧ ಕೃತ್ಯಗಳ ಬಗ್ಗೆ ಪೊಲೀಸರಿಗೆ ನೀಡಬಹುದು. ಉದಯವಾಣಿ ಸರಣಿ: ಕಮಿಷನರ್ ಮೆಚ್ಚುಗೆ
ಈ ಕುರಿತು ಪ್ರತಿಕ್ರಿಯೆ ನೀಡಿದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, “ಉದಯವಾಣಿ’ಕಳ್ಳರ ಗ್ಯಾಂಗ್‌ಗಳ ಕೃತ್ಯದ ಮಾದರಿ ಬಗ್ಗೆ ಸರಣಿ ಲೇಖನಗಳನ್ನು ಪ್ರಕಟಿಸುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿ ಸುತ್ತಿದೆ. ಈ ರೀತಿಯ ವರ್ತನೆಗಳು, ತಮ್ಮ ವ್ಯಾಪ್ತಿಯಲ್ಲಿ ಹೊಸಬರು ಓಡಾಡುತ್ತಿದ್ದರೆ , ಮನೆ, ವಾಣಿಜ್ಯಕಟ್ಟಡಗಳ ಬಗ್ಗೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರೆ ಕೂಡಲೇ ಸ್ಥಳೀಯ ಪೊಲೀಸ್ ಠಾಣೆ ಅಥವಾ ಪೊಲೀಸ್ ಸಹಾಯವಾಣಿ 112ಗೆ ಮಾಹಿತಿ ನೀಡಬೇಕು. ಸಣ್ಣ-ಪುಟ್ಟ ಹೋಟೆಲ್‌ಗಳಲ್ಲಿ ಕೆಲಸವಿಲ್ಲದೆ, ಉಳಿದುಕೊಳ್ಳುವವರ ಬಗ್ಗೆ ಮಾಹಿತಿ ನೀಡಬೇಕು. ಸಾಧ್ಯವಾದಷ್ಟು ತಮ್ಮ ಮನೆ, ಕಟ್ಟಡದಲ್ಲಿ ಅಳವಡಿಸಿಕೊಂಡಿರುವ ಸಿಸಿ ಕ್ಯಾಮೆರಾದ ಡಿವಿಆರ್ ಸಾಮರ್ಥ್ಯ ಹೆಚ್ಚಿಸಿಕೊಂಡರೆ ಒಳಿತು ಎಂದರು. ಕಳ್ಳರ ಗ್ಯಾಂಗ್ ಬಗ್ಗೆ ಉದಯವಾಣಿ ಸಾರ್ವಜನಿಕಜಾಗೃತಿ ಮೂಡಿಸುತ್ತಿರುವುದು ಒಳ್ಳೆಯಬೆಳವಣಿಗೆ. ಸಾರ್ವಜನಿಕರು ತಮ್ಮ ವ್ಯಾಪ್ತಿಯಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ಬಗ್ಗೆ ಪೊಲೀಸ್ ಸಹಾಯವಾಣಿ ಮತ್ತು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಪೊಲೀಸರು ಕೂಡ ಮಾಹಿತಿ ನೀಡಿದ ಸಾರ್ವಜನಿಕರ ಹೆಸರನ್ನು ಗೌಪ್ಯವಾಗಿಟ್ಟಾಗ ಮಾತ್ರ ಸಾರ್ವಜನಿಕರು ಪೊಲೀಸರಿಗೆ ಸಹಕಾರ ನೀಡುತ್ತಾರೆ.
– ಟೈಗರ್ ಅಶೋಕ್ ಕುಮಾರ್,
ನಿವೃತ್ತ ಪೊಲೀಸ್ ಅಧಿಕಾರಿ ನಗರದಲ್ಲಿ ಮುಖ್ಯವಾಗಿ ನಡೆಯುವ ಸರಗಳ್ಳತನ ಹಾಗೂ ಇತರೆ ಅಪರಾಧ ಕೃತ್ಯಗಳನ್ನು ನಿರಂತರವಾಗಿ ಎಸಗುವ ಗ್ಯಾಂಗ್‌ಗಳ ಮಾದರಿ ಬಗ್ಗೆ “ಉದಯವಾಣಿ’ ಕಳೆದ ಎಂಟು ದಿನಗಳಿಂದ ವಿಸ್ಕೃತ ವರದಿ ಮೂಲಕ ಅರಿವು ಮೂಡಿಸುತ್ತಿದೆ. ಈ ಮೂಲಕ ಸಾರ್ವಜನಿಕರು ಎಚ್ಚೆತ್ತುಕೊಳ್ಳುವು
ದರ ಜತೆಗೆ ಪೊಲೀಸರಿಗೆ ಮಾಹಿತಿ ನೀಡಿದರೆ ಅಪರಾಧ ತಡೆಗಟ್ಟಬಹುದು.
– ಡಾ ಎಸ್.ಉಮೇಶ್, ಹಿರಿಯ ವಕೀಲ,
ಅಧ್ಯಕ್ಷರು, ಕಬ್ಬನ್ ಪಾರ್ಕ್ ನಡಿಗೆದಾರರ ಸಂಘ -ಮೋಹನ್ ಭದ್ರಾವತಿ