Advertisement

ನೆಮ್ಮದಿ ಕೇಂದ್ರದಿಂದ ಸಾರ್ವಜನಿಕರ ನೆಮ್ಮದಿ ಭಂಗ!

10:23 AM Jul 05, 2019 | sudhir |

ಉಡುಪಿ: ಜಾತಿ, ಆದಾಯ ಪ್ರಮಾಣ ಪತ್ರ ಸೇರಿದಂತೆ ಹಲವು ದಾಖಲೆ ಪತ್ರಗಳಿಗಾಗಿ ಸಾರ್ವಜನಿಕರು ದಿನಪೂರ್ತಿ ಸರದಿ ಸಾಲಿನಲ್ಲಿ ನಿಂತು ಕಾಯುತ್ತಿರುವ ದೃಶ್ಯ ಉಡುಪಿ ತಾಲೂಕು ಕಚೇರಿಯಲ್ಲಿರುವ ನೆಮ್ಮದಿ ಕೇಂದ್ರದಲ್ಲಿ ಸರ್ವ ಸಾಮಾನ್ಯವಾಗಿದೆ.

Advertisement

ತಾಲೂಕು ಕಚೇರಿಯಲ್ಲಿರುವ ನೆಮ್ಮದಿ ಕೇಂದ್ರಕ್ಕೆ ದಾಖಲೆ ಪತ್ರಕ್ಕಾಗಿ ಬರುವ ಜನರಿಗೆ ಸರ್ವರ್‌ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕೇಂದ್ರದಲ್ಲಿ ದಿನ ಪೂರ್ತಿ ಕಾದರೂ ಕೆಲಸವಾಗದೆ ಬರಿ ಕೈಯಲ್ಲಿ ಹಿಂದಿರುಗಬೇಕಾಗಿದೆ.

ಊಟ ಬಿಟ್ಟು ಕಾಯುವ ಪರಿಸ್ಥಿತಿ

ಮಕ್ಕಳ ವಿದ್ಯಾರ್ಥಿ ವೇತನಕ್ಕೆ ಜಾತಿ ಹಾಗೂ ಆದಾಯ ಪ್ರಮಾಣ ಪತ್ರಗಳನ್ನು ನಿಗದಿತ ಸಮಯದೊಳಗೆ ಸಲ್ಲಿಸಬೇಕಾಗಿದೆ. ಆದ್ದರಿಂದ ಕಷ್ಟವಾದರೂ ಸರಿಯೇ ಕಾದು ಪ್ರಮಾಣ ಪತ್ರ ಬೇಕು ಅಂತ ಬೆಳಗ್ಗೆಯಿಂದ ಊಟಕ್ಕೂ ತೆರಳಿದರೆ ಸಾಲು ತಪ್ಪುತ್ತದೆ ಎನ್ನುವ ಭಯದಿಂದ ಊಟ ಬಿಟ್ಟು ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ.

ಇದೀಗ ಸೂಕ್ತ ಸಮಯದಲ್ಲಿ ದಾಖಲೆಗಳನ್ನು ನೆಮ್ಮದಿ ಕೇಂದ್ರ ವಿಫ‌ಲವಾದ ಕಾರಣ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ತೊಂದರೆಯಾಗುತ್ತಿದೆ.

Advertisement

ಸಮಸ್ಯೆ ಕೇಳ್ಳೋರಿಲ್ಲ!

ನೆಮ್ಮದಿ ಕೇಂದ್ರದಲ್ಲಿ ನ ಸರ್ವರ್‌ ಸಮಸ್ಯೆಯಿಂದ ಜನರಿಗೆ ತೊಂದರೆಯಾಗುತ್ತಿದ್ದರೂ ಅದನ್ನು ಕೇಳಿಸಿಕೊಳ್ಳಲು ಯಾವುದೇ ಅಧಿಕಾರಿ ಮುಂದೆ ಬರುತ್ತಿಲ್ಲ. ನಗರದಲ್ಲಿರುವ ನೆಮ್ಮದಿ ಕೇಂದ್ರದಲ್ಲಿ ನಿಗದಿತ ಸಮಯದ ಮಿತಿಯೊಳಗೆ ಕೆಲಸ ಕಾರ್ಯ ನಡೆಯುತ್ತಿಲ್ಲ.

ಎಲ್ಲ ಕೇಂದ್ರಗಳಲ್ಲಿ ಒಂದೇ ಗೋಳು!

ಜಿಲ್ಲೆಯ ಎಲ್ಲ ನೆಮ್ಮದಿ ಕೇಂದ್ರಗಳಲ್ಲಿ ಇದೇ ಸಮಸ್ಯೆ. ನೆಮ್ಮದಿ ಕೇಂದ್ರದಲ್ಲಿ ದಿನ ಪೂರ್ತಿ ಕಾದರೂ ಕೆಲಸವಾಗದೆ ಮತ್ತೆ ಮರುದಿನ ದಾಖಲೆ ಪಡೆಯಲು ಹೋದರೂ ನೆಮ್ಮದಿ ಕೇಂದ್ರದವರು ಒಂದಲ್ಲ ಒಂದು ನೆಪ ಹೇಳಿ ಬಂದವರನ್ನು ವಾಪಸ್ಸು ಕಳುಹಿಸುತ್ತಿದ್ದಾರೆ.

ಸರ್ವರ್‌ ಸಮಸ್ಯೆ, ಪ್ರಿಂಟ್ ಸರಿಯಿಲ್ಲ, ಮಧ್ಯಾಹ್ನ ಊಟದ ಸಮಯ ಎಂದೆಲ್ಲ ಸಬೂಬುಗಳನ್ನು ಹೇಳಿ ಬಂದವರನ್ನು ವಾಪಸ್‌ ಕಳಿಸುತ್ತಿದ್ದಾರೆ ಎನ್ನುವ ಆರೋಪಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next