Advertisement

“ನಂಬಿಕೆ, ವಿಶ್ವಾಸಗಳೊಂದಿಗೆ ಜನಸೇವೆ’

03:45 AM Jul 08, 2017 | |

ಪಡುಬಿದ್ರಿ: ನಂಬಿಕೆ ಹಾಗೂ ವಿಶ್ವಾಸಗಳೊಂದಿಗೆ ಜನಸೇವೆ ಗೈಯ್ಯುವುದು ಲಯನ್ಸ್‌ ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯ ಉದ್ದೇಶವಾಗಿದೆ. ಮಹಿಳೆಯರೂ ಇಂದು ಲಯನ್‌ಗಳಾಗಿ ಉತ್ತಮ ಕೆಲಸವನ್ನು ಮಾಡುತ್ತಿದ್ದಾರೆ. ಅವರ ನಾಯಕತ್ವ ಗುಣಗಳ ಅದ್ವಿತೀಯ. ಅಂತಾರಾಷ್ಟ್ರೀಯ ಅಧ್ಯಕ್ಷ ನರೇಶ್‌ ಅಗ್ರವಾಲ್‌ ಆಶಯದಂತೆ ನಾವೆಲ್ಲರೂ ಸಮಾಜದ ಓಳಿಗೆಗಾಗಿ ಸೇವೆಯನ್ನು ಗೈಯೋಣ ಎಂದು ಲಯನ್ಸ್‌ ಪ್ರಥಮ ಉಪ ಜಿಲ್ಲಾ ರಾಜ್ಯಪಾಲ ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. 

Advertisement

ಅವರು ಸಾಯಿ ಆರ್ಕೆಡ್‌ ಸಭಾಂಗಣದಲ್ಲಿ ಪಡುಬಿದ್ರಿ ಲಯನ್ಸ್‌ ಕ್ಲಬ್ಬಿನ 2017 – 18ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣವನ್ನು ನೆರವೇರಿಸಿ ಜು. 5ರಂದು ಮಾತನಾಡುತ್ತಿದ್ದರು. 

ಪ್ರಾಂತೀಯ ಅಧ್ಯಕ್ಷೆ ಜ್ಯೋತಿ ಪೈ ಮಾತನಾಡಿದರು. ನೂತನ ಅಧ್ಯಕ್ಷ ಮ್ಯಾಕ್ಸಿಮ್‌ ಡಿ”ಸೋಜ, ಲಯನೆಸ್‌ ಅಧ್ಯಕ್ಷೆ ಶಾರ್ಲೆಟ್‌ ಮ್ಯಾಕ್ಸಿಮ್‌ ಪುರ್ಟಾಡೋ ಹಾಗೂ ಅವರ ತಂಡಕ್ಕೆ ಪ್ರತಿಜ್ಞಾ ವಿಧಿಯನ್ನು ತಲ್ಲೂರು ಶಿವರಾಮ ಶೆಟ್ಟಿ ಬೋಧಿಸಿದರು. ನೂತನ ಅಧ್ಯಕ್ಷರು ಸಂಸ್ಥೆಯ ಏಳಿಗೆಗಾಗಿ ಸದಸ್ಯರೆಲ್ಲರ ಸಹಕಾರವನ್ನು ಯಾಚಿಸಿದರು. ನಿಕಟಪೂರ್ವ ಅಧ್ಯಕ್ಷೆ ಸುಧಾ ಆರ್‌. ನಾವಡ ತಮ್ಮ ಅಧಿಕಾರಾವಧಿಯಲ್ಲಿ ಸಹಕರಿಸಿದ ಎಲ್ಲರನ್ನು ಅಭಿನಂದಿಸಿದರು.
 
ನೂತನ ಸದಸ್ಯರಾಗಿ ಡಾ | ಮನೋಜ್‌ ಕುಮಾರ್‌ ಶೆಟ್ಟಿ, ಕಪಿಲ್‌ ಕುಮಾರ್‌ ಆಚಾರ್ಯ, ಆಲ್ಫೆÅಡ್‌ ಡೈನಿ ಕುಟಿನ್ಹೋ, ಪ್ರಗತ್‌ ಶೆಟ್ಟಿ ಹಾಗೂ ವಿಕ್ಟರ್‌ ಸೆರಾವೋ ಪ್ರಮಾಣವಚನವನ್ನು ಸ್ವೀಕರಿಸಿದರು. 

ವೇದಿಕೆಯಲ್ಲಿ ಗಿರಿಜಾ ತಲ್ಲೂರು ಶಿವರಾಮ ಶೆಟ್ಟಿ, ಲಯನ್ಸ್‌ ನಿಕಟಪೂರ್ವ ಕಾರ್ಯದರ್ಶಿ ಭಾರ್ಗವಿ ಆಚಾರ್‌, ನೂತನ ಕೋಶಾಧಿಕಾರಿ ಸದಾಶಿವ ಆಚಾರ್‌, ಲಯನೆಸ್‌ ನಿಕಟಪೂರ್ವಾಧ್ಯಕ್ಷೆ ಸುಚರಿತಾ ಅಂಚನ್‌, ನೂತನ ಅಧ್ಯಕ್ಷೆ ಶಾರ್ಲೆಟ್‌ ಫುರ್ಟಾಡೋ, ಕಾರ್ಯದರ್ಶಿ ಶಾಲಿನಿ ಶಶಿಧರ ಶೆಟ್ಟಿ, ಕೋಶಾಧಿಕಾರಿ ಪ್ರತಿಮಾ ಗೋಪಾಲ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
 
ಸುಧಾ ಆರ್‌. ನಾವಡ ಸ್ವಾಗತಿಸಿದರು. ವಿಶುಕುಮಾರ್‌ ಶೆಟ್ಟಿ ಹಾಗೂ ಡಾ | ಎನ್‌. ಟಿ. ಅಂಚನ್‌ ಕಾರ್ಯಕ್ರಮ ನಿರ್ವಹಿಸಿದರು. ಲಯನ್ಸ್‌ ನೂತನ ಕಾರ್ಯದರ್ಶಿ ದಿನೇಶ್‌ ಶೆಟ್ಟಿ ಎರ್ಮಾಳು ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next