Advertisement
ನಿಕಟಪೂರ್ವ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಕುರಿತಂತೆ ಅಭಿಪ್ರಾಯ ಹಂಚಿಕೊಂಡವರೆಲ್ಲರೂ ಜಿಲ್ಲಾ ದಂಡಾಧಿಕಾರಿಯಾಗಿದ್ದರೂ ಅವರ ಸರಳತೆ, ಎಂತದ್ದೇ ತಪ್ಪಿನ ಸಂದರ್ಭದಲ್ಲಿ ಸಿಟ್ಟಾಗದಿರುವುದು, ಕ್ಲಿಷ್ಟಕರ ಸಮಸ್ಯೆಯನ್ನೂ ಬಾಳೆಹಣ್ಣು ಸುಲಿದಂತೆ ಸುಲಭ ಮತ್ತು ಸೂಕ್ತವಾಗಿ ಪರಿಹರಿಸುತ್ತಿದ್ದ ಚಾಣಾಕ್ಷತೆ, ಕೆಳಗಿನ ಸಿಬ್ಬಂದಿಯಿಂದ ಹಿಡಿದು ಪ್ರತಿಯೊಬ್ಬರನ್ನೂ ಆಪ್ತತೆಯಿಂದ ಕಾಣುತ್ತಿದ್ದ ಬಗೆ, ಜನಸಾಮಾನ್ಯರು ಅದರಲ್ಲೂ ವಿಕಲ ಚೇತನರಿಗೆ ಸ್ಪಂದಿಸುತ್ತಿದ್ದ ರೀತಿ, ತೀವ್ರ ಒತ್ತಡದ ನಡುವೆಯೂ ಕುಟುಂಬದ ಸದಸ್ಯರು ಸದಾ ನಗು, ಸಂತೋಷದಿಂದ ಇರುವಂತೆ ನೋಡಿಕೊಳ್ಳುವುದು… ಹೀಗೆ ಅನೇಕ ವಿಚಾರಗಳ ಮೆಲುಕು ಹಾಕಿದರು.
Related Articles
Advertisement
ಜಿಲ್ಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ, ಕಾನೂನು ಸುವ್ಯವಸ್ಥೆಗೆ ಭಂಗ ಆಗದಂತೆ ಉತ್ತಮ ಆಡಳಿತ ನೀಡಿರುವ ಅವರನ್ನು ಭಾರವಾದ ಹೃದಯದಿಂದ ಬೀಳ್ಕೊಡುತ್ತಿದ್ದೇವೆ ಎಂದರು. ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕಿ ಜಿ. ನಜ್ಮಾ ಮಾತನಾಡಿ, ಡಿ.ಎಸ್. ರಮೇಶ್‌ರವರು ಧನಾತ್ಮಕ ಚಿಂತನೆಯ ಮೂಲಕವೇ ಇಡೀ ಜಿಲ್ಲೆಯ ಆಡಳಿತದಲ್ಲಿ ಹೊಸ ಬದಲಾವಣೆ ತಂದರು. ಅವರ ತಾಳ್ಮೆ, ಆಡಳಿತದಲ್ಲಿನ ಬಿಗಿ… ಗುಣಗಳನ್ನ ಅಧಿಕಾರಿಗಳು ಕಲಿಯಬೇಕು ಎಂದರು.
ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ರಕ್ಷಣಾಧಿಕಾರಿ ಆರ್. ಚೇತನ್, ನಿಕಟಪೂರ್ವ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಶೋಭಾ ರಮೇಶ್, ಪುತ್ರಿ ಚಿನ್ಮಯಿ ಇದ್ದರು. ಭಾರತಿ ನೇರಲಕಟ್ಟೆ ಪ್ರಾರ್ಥಿಸಿದರು. ಗಂಗಾಧರ್ ಬಿ.ಎಲ್. ನಿಟ್ಟೂರು ನಿರೂಪಿಸಿದರು.
ಎಲ್ಲರ ಸಹಕಾರ ಕಾರಣ ಸರ್ಕಾರಿ ಅಧಿಕಾರಿ ಎಂದರೆ ಎಲ್ಲೇ ಇರಲಿ ಕೆಲಸ ಮಾಡಬೇಕು. ನಾನು ಅದೇ ರೀತಿ ದಾವಣಗೆರೆ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದೇನೆ. ನನ್ನಿಂದೇನೂ ಅಲ್ಲ. ಎಲ್ಲಾ ಹಂತದ ಅಧಿಕಾರಿಗಳು, ಸಿಬ್ಬಂದಿ ಸಮನ್ವಯತೆಯಿಂದ ಯಾವುದೇ ಬಿಕ್ಕಟ್ಟು ಎದುರಾಗದಂತೆ 2 ವರ್ಷ 4 ತಿಂಗಳು ಒಳ್ಳೆಯ ಕೆಲಸ ಮಾಡಲು ಸಾಧ್ಯವಾಯಿತು. ಎಲ್ಲಾ ಹಂತದಲ್ಲಿ ಸಹಕಾರ ನೀಡಿದ್ದಕ್ಕೆ ಧನ್ಯವಾದ ಅರ್ಪಿಸುವೆ.ಡಿ.ಎಸ್. ರಮೇಶ್, ನಿಕಟಪೂರ್ವ ಜಿಲ್ಲಾಧಿಕಾರಿ ವಿಕಲಚೇತನ ಮಕ್ಕಳಿಗೆ ಐಡಿ ಕಾರ್ಡ್ ವಿತರಣೆ ಚನ್ನಗಿರಿ ತಾಲೂಕಿನ ವಿವಿಧ ಭಾಗದ 5 ವರ್ಷದೊಳಗಿನ ವಿಕಲಚೇತನ ಮಕ್ಕಳು ಗುರುತಿನ ಪತ್ರ ಇಲ್ಲದ ಕಾರಣಕ್ಕೆ ಸರ್ಕಾರಿ ಸೌಲಭ್ಯದಿಂದ ವಂಚಿತರಾಗಿರುವುದು ಡಿ.ಎಸ್. ರಮೇಶ್
ರವರ ಗಮನಕ್ಕೆ ಬರುತ್ತಿದ್ದಂತೆ ವಿಶೇಷ ಶಿಬಿರದ ಯೋಜಿಸಿದ್ದರು. ಗುರುತಿನ ಪತ್ರದ ವ್ಯವಸ್ಥೆ ಮಾಡಿದ್ದರು. ಬೀಳ್ಕೊಡುಗೆ ಸಮಾರಂಭದಲ್ಲಿ ಆ ಎಲ್ಲಾ 57 ಮಕ್ಕಳಿಗೆ ಗುರುತಿನ ಚೀಟಿ ಖುದ್ದು ಅವರೇ ವಿತರಿಸಿದ್ದು ವಿಶೇಷ ಸಮನ್ವಯತೆ ಇರಲಿ ಜಿಲ್ಲಾಧಿಕಾರಿ, ಜಿಪಂ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ ಒಟ್ಟಿಗೆ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಒಳ್ಳೆಯ ಕೆಲಸ ಮಾಡಿದಾಗ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತವೆ. ಹಿಂದಿನ
ಡಿಸಿ ಡಿ.ಎಸ್. ರಮೇಶ್ ಸಮನ್ವಯತೆಯಿಂದ ಕೆಲಸ ಮಾಡಿದ್ದಾರೆ ಎಂಬುದು ಗೊತ್ತಾಗುತ್ತದೆ. ಅದೇ ಸಮನ್ವಯತೆಯೊಂದಿಗೆ ಎಲ್ಲರೂ ಕಾರ್ಯಪ್ರವೃತ್ತರಾಗೋಣ.
ಡಾ| ಬಗಾದಿ ಗೌತಮ್, ನೂತನ ಜಿಲ್ಲಾಧಿಕಾರಿ