Advertisement

ಜನಪರ ಯೋಜನೆ ಜನರಿಗೆ ತಲುಪಿಸಿ: ನಳಿನ್‌

04:55 PM Feb 23, 2017 | Team Udayavani |

ಪುತ್ತೂರು : ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರಕಾರ ಅನೇಕ ಜನಪರ ಯೋಜನೆಗಳನ್ನು ರೂಪಿಸಿದೆ. ಈ ಇದರ ಪ್ರಯೋಜನವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ತೊಡಗಿಕೊಳ್ಳಬೇಕು ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

Advertisement

ಬುಧವಾರ ಪುತ್ತೂರು ಟೌನ್‌ಬ್ಯಾಂಕ್‌ ಸಭಾಂಗಣದಲ್ಲಿ ನಡೆದ ಬಿಜೆಪಿ ಪುತ್ತೂರು ಮಂಡಲ ವಿಶೇಷ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜನಪರ ಸಾಧನೆಯ ಮೂಲಕವೇ ಗೆಲುವು ಸಾಧಿಸಲಿದೆ. ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಚುನಾವಣೆಗಳಲ್ಲಿ ಜನರು ಅಭೂತಪೂರ್ವ ಬೆಂಬಲ ಸೂಚಿಸಿದ್ದಾರೆ. ಅದಕ್ಕೆ ದೇಶದ ಅಭಿವೃದ್ಧಿ ದಿಶೆಯಲ್ಲಿ ಮೋದಿ ಅವರ ಕಾರ್ಯಕ್ರಮಗಳೇ ಕಾರಣ ಎಂದು ಅವರು ಹೇಳಿದರು.

ಕಾಂಗ್ರೆಸ್‌ ಒಳಜಗಳ, ವೈಫಲ್ಯವೇ ಬಿಜೆಪಿ ಗೆಲುವಿಗೆ ಕಾರಣವಾಗಬಾರದು. ಇದಕ್ಕಾಗಿ ಈಗ ನರೇಂದ್ರ ಮೋದಿ ಅವರು ನೀಡಿರುವ ಕೊಡುಗೆಯನ್ನು ಜನರಿಗೆ ತಿಳಿಸುವ ಕೆಲಸವಾಗಬೇಕು ಎಂದರು. 

ಭಷ್ಟಾಚಾರ ಮುಕ್ತ
ದೇಶ ಕಾಂಗ್ರೆಸ್‌ ಮುಕ್ತವಾಗಬೇಕು ಎಂದರೆ ಭ್ರಷ್ಟಾಚಾರ ಮುಕ್ತವಾಗಬೇಕು ಎಂದು ಅದರ ಅರ್ಥ ಎಂದ ಅವರು, ಬಿಜೆಪಿ ದೇಶದ ಚಿಂತನೆ ಆಧಾರದಲ್ಲಿ ಬೆಳೆಯುತ್ತಿರುವ ಪಕ್ಷ, ದೇಶದ ಜನರನ್ನು ಸ್ವಾಭಿಮಾನಿಗಳನ್ನಾಗುವ ಉದ್ದೇಶ ಹೊಂದಿದೆ. ಇದಕ್ಕಾಗಿಯೇ ಮುದ್ರಾ ಯೋಜನೆಯಡಿ ಬ್ಯಾಂಕ್‌ನಿಂದ ಯುವಕರಿಗೆ ಸಾಲ ಸೌಲಭ್ಯ, ಮಹಿಳೆಯರಿಗೆ ವಿಶೇಷ ಯೋಜನೆ, ಬಡವರಿಗೆ ಗ್ಯಾಸ್‌ ಸಹಿತ ಎಲ್ಲ ವರ್ಗದ ಜನರಿಗೂ ಅನುಕೂಲವಾಗುವ ಕೆಲಸ ಮಾಡಿದೆ ಎಂದು ಅವರು ಹೇಳಿದರು.ಹಿಂದಿನ ಸರಕಾರ ಗ್ಯಾಸ್‌ ನೀಡುವ ಬಗ್ಗೆಯೇ ಚರ್ಚೆ ಮಾಡುತ್ತಿದ್ದರೆ, ಮೋದಿ ನೇತೃತ್ವದ ಸರ್ಕಾರ ಗ್ಯಾಸ್‌ ವಿತರಣೆಗೆ ಅನುಕೂಲ ಮಾಡಿಕೊಟ್ಟಿದೆ. ಮುಂದಿನ ದಿನಗಳಲ್ಲಿ  ಗ್ರಾಮಗಳಿಗೆ ನೇರವಾಗಿ 1 ಕೋಟಿ ರೂ. ಅನುದಾನ ನೀಡುವ ಉದ್ದೇಶ ಹೊಂದಿದೆ. ಗ್ರಾಮೋತ್ಥಾನ, ನಗರೋತ್ಥಾನದಿಂದ ದೇಶದ ಅಭಿವೃದ್ಧಿ ಎಂಬ ಮಹತ್ವಾಕಾಂಕ್ಷೆ ಹೊಂದಿದೆ ಎಂದು  ಹೇಳಿದರು.

Advertisement

150 ಜನರಿಕ್‌ ಔಷಧಾಲಯ
ಬಡವರಿಗೆ ಅನುಕೂಲವಾಗುವಂತೆ ಕೇಂದ್ರ ಸರಕಾರ ಜನರಿಕ್‌ ಔಷಧಾಲಯ ತೆರೆಯುತ್ತಿದೆ. ಜಿಲ್ಲೆಯಲ್ಲಿ ಈ ಯೋಜನೆಯಡಿಯಲ್ಲಿ  150 ಔಷಧ ಮಳಿಗೆಗಳು ತೆರೆಯಲಿದೆ ಎಂದು ಹೇಳಿದರು.
 

Advertisement

Udayavani is now on Telegram. Click here to join our channel and stay updated with the latest news.

Next