Advertisement

ಗಂಗಾ ತೀರ ವಾಸಿಗಳ ಜೀವನ 7 ವರ್ಷ ಇಳಿಕೆ

08:28 AM Nov 02, 2019 | Hari Prasad |

ಹೊಸದಿಲ್ಲಿ: ಗಂಗಾ ತೀರ ಪ್ರದೇಶದಲ್ಲಿ ವಾಸಿಸುವ ಜನರ ಜೀವಿತಾವಧಿ 7 ವರ್ಷಗಳಷ್ಟು ಕಡಿಮೆಯಾಗಿದೆ ಎಂದು ಶಿಕಾಗೋ ವಿವಿಯ ಎನರ್ಜಿ ಪಾಲಿಸಿ ಇನ್‌ಸ್ಟಿಟ್ಯೂಟ್‌ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಬಹಿರಂಗವಾಗಿದೆ. 1998 ರಿಂದ 2016ರ ಅವಧಿಯಲ್ಲಿ ಬಿಹಾರ, ಚಂಡೀಗಢ‌, ದಿಲ್ಲಿ, ಹರ್ಯಾಣ, ಪಂಜಾಬ್‌, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಲಗಳಲ್ಲಿ ಈ ಅಧ್ಯಯನ ನಡೆಸಲಾಗಿದೆ.

Advertisement

ಇಲ್ಲಿನ ಗಾಳಿಯ ಗುಣಮಟ್ಟ ವ್ಯಾಪಕ ಕುಸಿದಿದೆ. ದೇಶದ ಉಳಿದ ಭಾಗಗಳಿಗೆ ಹೋಲಿಸಿದರೆ ಮಾಲಿನ್ಯ 3 ಪಟ್ಟು ಅಧಿಕವಾಗಿದೆ. 2016ರಲ್ಲಿ ಮಾಲಿನ್ಯ ಪ್ರಮಾಣ ಶೇ.72ರಷ್ಟು ಹೆಚ್ಚಾಗಿತ್ತು. ಇದರಿಂದಾಗಿ 3.4 ರಿಂದ 7.1 ವರ್ಷಗಳಷ್ಟು ಜನರ ಜೀವಿತಾವಧಿ ಕುಸಿದಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next