Advertisement
2002ರಲ್ಲಿ ಮೀಸಲಿರಿಸಿದ್ದ 4.50 ಎಕ್ರೆ ಸ್ಥಳದಲ್ಲಿ 3 ಎಕ್ರೆ ಕಸ ವಿಲೇವಾರಿಗಾಗಿ ಗುರುತಿಸಲಾಗಿದೆ. ಪ.ಪಂ. ವ್ಯಾಪ್ತಿಯ ಮನೆ ಮನೆ, ರಸ್ತೆ, ಅಂಗಡಿ ಮುಂಗಟ್ಟು, ಕಾಲನಿ ಗಳ ತ್ಯಾಜ್ಯ ನೇರವಾಗಿ ಘಟಕದಲ್ಲಿ ಸುರಿಯಲಾಗುತ್ತಿದೆ. ಪ್ರತಿ ವರ್ಷ ಇದರ ನಿರ್ವ ಹಣೆಗೆಂದು ಸುಮಾರು 4 ಲಕ್ಷ ರೂ. ವರೆಗೆ ಜಿಲ್ಲಾಡಳಿತ ಅನುದಾನ ಒದಗಿಸುತ್ತಿದೆ. ಈ ಮೂಲಕ ಹಸಿ/ಒಣ ಕಸ ಪ್ರತ್ಯೇಕಿಸಿ ತ್ಯಾಜ್ಯ ಸಂಸ್ಕರಿಸಿದಲ್ಲಿ ಪ.ಪಂ. ಆದಾಯ ಜತೆಗೆ ಸ್ವತ್ಛತೆಗೆ ಆದ್ಯತೆ ನೀಡುವುದು ಇದರ ಮುಖ್ಯ ಉದ್ದೇಶ. ಆದರೆ ಇವೆಲ್ಲ ಇಲ್ಲಿ ನಾಮ ಕಾವಸ್ತೆಗೆ ಎಂಬಂತಾಗಿದೆ. ಹತ್ತು ವರ್ಷಗಳಿಂದ ಪ್ಲಾಸ್ಟಿಕ್ ಮತ್ತು ಇತರ ಕಸ ವಿಂಗಡಣೆಯಾಗದೆ ಭೂಮಿಯ ಒಡಲು ಸೇರುತ್ತಿದೆ. ತ್ಯಾಜ್ಯ ವಿಂಗಡಣೆ, ಗೊಬ್ಬರ ತಯಾರಿಸಲು ಲಕ್ಷಗಟ್ಟಲೆ ಅನುದಾನದಿಂದ ನಿರ್ಮಿಸಲಾದ 4 ಶೆಡ್ಡುಗಳು ಶಿಥಿಲಗೊಂಡಿವೆ.
ಸುಣ್ಣಬಣ್ಣ ಮತ್ತು 100 ಮೀ. ಇಂಟರ್‌ಲಾಕ್ ರಸ್ತೆ ಕಾಮಗಾರಿಗಾಗಿ 2.50 ಲಕ್ಷ ರೂ. ವಿನಿಯೋಗಿಸಲಾಗಿದೆ. ಇಂಟರ್‌ಲಾಕ್ ತುಂಬ ಬಳ್ಳಿ ಪೊದೆ ಬೆಳೆದು ಕಾಮಗಾರಿ ವ್ಯರ್ಥವಾಗಿದೆ. ಕೊಠಡಿ ಅವ್ಯವಸ್ಥೆ
ಕಾವಲುಗಾರರಿಗೆಂದು ನೀಡಿದ ಕೊಠಡಿ ನಿರ್ವ ಹಣೆಯಿಲ್ಲದೆ ಬಾಗಿಲು ಮುರಿದು ಬಿದ್ದಿದೆ. ವಿದ್ಯುತ್ ಸಂಪರ್ಕ ಸಹಿತ ಕಿಟಕಿ ಗಳಿಲ್ಲದ ಕಟ್ಟಡದಲ್ಲಿ ಕಾವಲುಗಾರರು ತಂಗಲು ಸಾಧ್ಯವಿಲ್ಲದ ಸ್ಥಿತಿಯಲ್ಲಿದೆ.
Related Articles
ಕಸ ವಿಂಗಡಣೆಗೆಂದು ಪ್ರತಿ ವರ್ಷ 4ರಿಂದ 5 ಲಕ್ಷ ರೂ. ಟೆಂಡರ್ ಕರೆಯಲಾಗುತ್ತದೆ. ವಿಂಗಡಣೆ ಬದಲಿಗೆ ಕಸವನ್ನು ಡೋಝರ್‌ನಲ್ಲಿ ದೂಡಿ ಬಳಿಕ ಮಣ್ಣು ಮುಚ್ಚಲಾಗುತ್ತಿದೆ. ಇಲ್ಲಿ ವಿಂಗಡಣೆ ಹೆಸರಲ್ಲಿ ಲಕ್ಷ ರೂ. ಪೋಲಾಗುತ್ತಿದೆ. ಈ ಮಧ್ಯೆ ಗೌಪ್ಯತೆಯ ಟೆಂಡರ್‌ಗಳು ನಡೆಯುತ್ತಿವೆ ಎಂಬ ಮಾತುಗಳು ಕೇಳಿಬಂದಿವೆ. ಅವ್ಯವಸ್ಥೆ ಮಧ್ಯೆ ಪೌರಕಾರ್ಮಿಕರು ಯಾವ ರೀತಿ ಬರಬೇಕು ಎಂಬುದನ್ನು ಸಾರ್ವಜನಿಕರೇ ಚಿಂತಿಸಬೇಕಿದೆ. 5 ಮಂದಿ ಕಸ ವಿಂಗಡಣೆಗೆ ನೇಮಿಬೇಕೆಂದು ಎರಡು ವರ್ಷಗಳ ಹಿಂದೆ ನಿರ್ಧಾರ ಕೈಗೊಳ್ಳಲಾಗಿದೆ. ನೇಮಕವೇ ಮಾಡದೆ ಕಸ ದೂಡುವುದಕ್ಕೆ ಹಣ ಪೋಲಾಗುತ್ತಿದೆ.
Advertisement
ನೂತನ ಶೆಡ್ಡು ನಿರ್ಮಾಣಕ್ಕೆ ಟೆಂಡರ್
ಹಸಿ/ಒಣ ಕಸ ವಿಂಗಡಣೆಗೆ ಇರುವ ನಾಲ್ಕು ಶೆಡ್ಡುಗಳು ಪ್ರಯೋಜನಕ್ಕೆ ಬಂದಿಲ್ಲ. ಇದರ ಮಧ್ಯೆ ನೂತನ ಶೆಡ್ ನಿರ್ಮಾಣಕ್ಕೆ 2019-20ನೇ ಸಾಲಿನಲ್ಲಿ 3.50 ಲಕ್ಷ ರೂ. ಮೀಸಲಿರಿಸಲಾಗಿದೆ. ಹೊಸ ಶೆಡ್ಡು ನಿರ್ಮಿಸುವ ಮೂಲಕ ಮತ್ತೆ ಖಜಾನೆ ಲೂಟಿ ಮಾಡುವ ಹುನ್ನಾರ ಎಂಬ ಮಾತು ಕೇಳಿಬಂದಿದೆ. ಕ್ರಿಯಾಯೋಜನೆ ಸಿದ್ಧ
ಹಸಿ ಕಸವನ್ನು ಸದ್ಯ ಸ್ಥಳೀಯರಿಗೆ ನೀಡಲಾಗುತ್ತಿದೆ. ಕಸ ಸಂಗ್ರಹಣೆ, ಸಾಗಾಟಕ್ಕೆ 2 ಪಿಕಪ್, ಒಂದು ಟಿಪ್ಪರ್ ಹೊಸದಾಗಿ ಸೇರ್ಪಡೆಗೊಳ್ಳಲಿದೆ. ತ್ಯಾಜ್ಯ ವಿಂಗಡಣೆ ಯಂತ್ರಕ್ಕೆ ಜಿಲ್ಲೆಯಿಂದ ಕ್ರಿಯಾಯೋಜನೆ ಸಿದ್ಧಗೊಂಡಿದೆ.
- ಎಂ.ಎಚ್. ಸುಧಾಕರ್, ಮುಖ್ಯಾಧಿಕಾರಿ, ಬೆಳ್ತಂಗಡಿ ಪ.ಪಂ.