Advertisement

ಜನಪರ ಕಾಳಜಿ ಮೆರೆದ ಸಿಎಂ

12:12 PM Jun 24, 2017 | Team Udayavani |

ಹೊನ್ನಾಳಿ: ರೈತರ ಸಾಲಮನ್ನಾ ಮಾಡುವ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಜನಪರ ಕಾಳಜಿ ಮೆರೆದಿದ್ದಾರೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು. ತಾಲೂಕಿನ ಎಚ್‌.ಕಡದಕಟ್ಟೆಯ ವಲಯ ಅರಣ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ ಎಸ್‌ ಸಿಪಿ ಟಿಎಸ್‌ಪಿ ಯೋಜನೆಯಡಿ ಎಸ್‌ಸಿ-ಎಸ್‌ಟಿ ಫಲಾನುಭವಿಗಳಿಗೆ ಎಲ್‌ಪಿಜಿ ಗ್ಯಾಸ್‌ ಕಿಟ್‌ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ತಾಲೂಕಿನಲ್ಲಿ ಎಸ್‌ಸಿ-ಎಸ್‌ಟಿ ವರ್ಗದವರಿಗೆ ಪಕ್ಷ ಭೇದ ಮಾಡದೇ 3000ಕ್ಕೂ ಹೆಚ್ಚಿನ ಗ್ಯಾಸ್‌ ಕಿಟ್‌ಗಳನ್ನು ವಿತರಿಸಲಾಗಿದೆ. ಮುಖ್ಯಮಂತ್ರಿಗಳ ಉಜ್ವಲ ಯೋಜನೆಯಡಿ ಎಲ್ಲಾ ವರ್ಗದ ಅರ್ಹ ಫಲಾನುಭವಿಗಳಿಗೂ ಸಹ ಗ್ಯಾಸ್‌ ಕಿಟ್‌ಗಳನ್ನು ವಿತರಿಸಲಾಗುವುದು ಎಂದರು. 

ಸಾಮಾಜಿಕ ನ್ಯಾಯದಡಿ ತಾಲೂಕಿನ ಎಲ್ಲಾ ಎಸ್‌ ಸಿ-ಎಸ್‌ಟಿ ವರ್ಗದವರಲ್ಲಿ ಮನೆಯಿಲ್ಲದವರಿಗೆ ಮನೆ ನಿರ್ಮಿಸಿಕೊಡಲು ಎಷ್ಟು ಅಗತ್ಯವಿದೆಯೋ ಅಷ್ಟು ಮನೆಗಳನ್ನು ನಿರ್ಮಿಸಿಕೊಡಲು ಸಿದ್ಧರಿದ್ದು, ಇದರ ಸದುಪಯೋಗಪಡಿಸಿಕೊಳ್ಳಬೇಕು.

ಮುಖ್ಯಮಂತ್ರಿ ಸಿದ್ದರಾಮಯ್ಯ ಜೂನ್‌ 20ರವರೆಗೆ ಸಹಕಾರ ಬ್ಯಾಂಕ್‌ ಗಳಲ್ಲಿ ಪಡೆದ 50 ಸಾವಿರದವರೆಗಿನ ಸಾಲಮನ್ನಾ ಮಾಡಿ ರೈತರ, ಜನಸಾಮಾನ್ಯರ ಆತ್ಮಸ್ಥೆ çರ್ಯ ಹೆಚ್ಚುವಂತೆ ಮಾಡಿದ್ದಾರೆ. ಇದರಿಂದ ರಾಜ್ಯದ 22ಲಕ್ಷ ರೈತರಿಗೆ 8165 ಕೋಟಿ ಸಾಲಮನ್ನಾ ಮಾಡಿದ್ದಾರೆ.

ತಾಲೂಕಿನಲ್ಲಿ 17793ಕ್ಕೂ ಹೆಚ್ಚು ರೈತರು 44 ಕೋಟಿಗಳಷ್ಟು ಮೊತ್ತದ ಸಾಲದಿಂದ ಮುಕ್ತರಾಗಲಿದ್ದಾರೆ ಎಂದು ವಿವರಿಸಿದರು. ಕಡದಕಟ್ಟೆ ಗ್ರಾಪಂ ಅಧ್ಯಕ್ಷೆ ಲಕ್ಷಮ್ಮ ನಾಗಪ್ಪ ಅಧ್ಯಕ್ಷತೆ  ವಹಿಸಿದ್ದರು. ಜಿಪಂ ಅಧ್ಯಕ್ಷೆ ಉಮಾ ರಮೇಶ್‌, ತಾಪಂ ಅಧ್ಯಕ್ಷೆ ಸುಲೋಚನಮ್ಮ, ಜಿಪಂ ಸದಸ್ಯ ಎಂ.ಆರ್‌. ಮಹೇಶ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಬಿ.ಮಂಜಪ್ಪ, ತಾಪಂ ಸದಸ್ಯ ಅರಬಗಟ್ಟೆ ವಿಜಯಕುಮಾರ್‌, ಎಪಿಎಂಸಿ ಅಧ್ಯಕ್ಷ ಎಸ್‌.ಎಸ್‌.ಬೀರಪ್ಪ,

Advertisement

ಸದಸ್ಯರಾದ ತರಗನಹಳ್ಳಿ ರಮೇಶ್‌, ಮಾದೇನಹಳ್ಳಿ ಸೋಮಣ್ಣ, ದಿಡಗೂರು ಪ್ರಕಾಶ್‌, ಹೊನ್ನಾಳಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಣ್ಣಕ್ಕಿ ಬಸವನಗೌಡ, ಎಚ್‌.ಎ.ಗದ್ದೇಗೇಶ್‌, ಅರಕೆರೆ ಮಧುಗೌಡ, ರಂಜಿತ್‌, ಪ್ರವೀಣ್‌, ಅರಣ್ಯಾಧಿಕಾರಿ ವರದರಾಜ್‌, ರಂಗನಾಥ್‌, ಮಲ್ಲಿಕಾರ್ಜುನ್‌, ಮುಖಂಡರಾದ ಮರುಳಸಿದ್ದಪ್ಪ, ಪ್ರಕಾಶ್‌ ಆರುಂಡಿ, ಕೂಲಂಬಿ ಸಿದ್ದೇಶ್‌, ಕುಂದೂರು ಆಂಜನೇಯ, ಕುಂದೂರು ಅನಿಲ್‌, ಇರ್ಫಾನ್‌ ಕುಂದೂರ್‌, ಕೆಂಗಲಹಳ್ಳಿ ಪ್ರಭಾಕರ್‌ ಉಪಸ್ಥಿತರಿದ್ದರು  

Advertisement

Udayavani is now on Telegram. Click here to join our channel and stay updated with the latest news.

Next