Advertisement

ಸರ್ಕಾರದ ನೀತಿಗೆ ಬೇಸತ್ತ ಜನತೆ

11:39 AM Nov 06, 2017 | Team Udayavani |

ಕಲಬುರಗಿ: ರಾಜ್ಯ ಸರ್ಕಾರದ ಸಮಾಜ ವಿರೋಧಿ ನೀತಿಗಳಿಂದ ಜನ ಬೇಸತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಅಧಿಕಾರ ಪಡೆಯುವಲ್ಲಿ ಕೈ ಜೋಡಿಸುವರು ಎಂದು ವಿಧಾನ ಪರಿಷತ್‌ ಸದಸ್ಯ ಕೆ.ಬಿ.ಶಾಣಪ್ಪ ಅಭಿಪ್ರಾಯ ವ್ಯಕ್ತಿಪಡಿಸಿದರು. ರವಿವಾರ ನಗರದ ಆಳಂದ ರಸ್ತೆಯ ಆಶೀರ್ವಾದ ಕಲ್ಯಾಣ ಮಂಟಪದಲ್ಲಿ ಆಳಂದ ಬಿಜೆಪಿ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಆಳಂದ ತಾಲೂಕಿನ ಕಲಬುರಗಿ ನಗರ ನಿವಾಸಿಗಳ ಚಿಂತನಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು ಜನತೆ ಸರ್ಕಾರದ ಮೇಲಿನ ವಿಶ್ವಾಸ ಕಳೆದುಕೊಂಡಿದ್ದಾರೆ.
ಕರ್ನಾಟಕದ ಮಿಷನ್‌ 150ರಂತೆ ಕಲಬುರಗಿಯಲ್ಲಿಯೂ ಮಿಷನ್‌ 7+2 ಹಮ್ಮಿಕೊಳ್ಳಲಾಗಿದೆ. ಆಳಂದ ಮತಕ್ಷೇತ್ರದಲ್ಲಿ
ಈ ಬಾರಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸುವುದರೊಂದಿಗೆ ಮತಕ್ಷೇತ್ರದಲ್ಲಿ ಇತಿಹಾಸ ನಿರ್ಮಾಣವಾಗಲಿದೆ ಎಂದು
ಹೇಳಿದರು.

ಆಳಂದ ಶಾಸಕ ಬಿ.ಆರ್‌. ಪಾಟೀಲ ಅವರು ರಾಜಕೀಯ ಸ್ವಾರ್ಥಕ್ಕಾಗಿ ಹಲವು ವೇಷಗಳನ್ನು ಬದಲಾಯಿಸುವಲ್ಲಿ
ನಿಸ್ಸೀಮರು. ಅವಕಾಶವಾದಿ ರಾಜಕಾರಣ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಅವರ ನಡೆ-ನುಡಿಗೂ ಅಜಗಜಾಂತರ ವ್ಯತ್ಯಾಸವಿದೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಮಾತನಾಡಿ, ಜಿಲ್ಲೆಯಲ್ಲಿ ಬಿಜೆಪಿ ಜಯಭೇರಿ ಆಳಂದ
ಕ್ಷೇತ್ರದಿಂದಲೇ ಆರಂಭವಾಗಲಿದೆ. ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಕಾರ್ಯಕರ್ತರು ಟೊಂಕಕಟ್ಟಿ ನಿಂತಿದ್ದಾರೆ. ಜಿಲ್ಲೆಯಾದ್ಯಂತ ಪಕ್ಷದ ಸಂಘಟನೆ ಬಲಗೊಂಡಿದ್ದು, ಕಾರ್ಯಕರ್ತರು ಉತ್ಸಾಹದೊಂದಿಗೆ ಇದೇ ವೇಗದಲ್ಲಿ ಮುನ್ನಡೆಯಬೇಕು ಎಂದರು. ಮಾಜಿ ಶಾಸಕ ಸುಭಾಷ ಗುತ್ತೇದಾರ ಮಾತನಾಡಿದರು.

ಸರಸಂಬಾದ ಯಶ್ವಂತರಾವ್‌ ಗುಬ್ಯಾಡ್‌, ಬಸಯ್ನಾ ಸ್ವಾಮಿ, ಶರಣಬಸಪ್ಪ ಪೊಲೀಸ್‌ ಪಾಟೀಲ, ಪ್ರಭುಲಿಂಗ ಪೊಲೀಸ್‌ ಪಾಟೀಲ, ಘನಲಿಂಗಪ್ಪ ಪಾಟೀಲ, ಚಿದಂಬರಾಯ ಪಾಟೀಲ, ಚಂದ್ರಶೇಖರ ಬಿರಾದಾರ, ಸಾಯಬಣ್ಣಾ ಸಂಗೋಳಗಿ, ಸಂತೋಷ ರಾಠೊಡ ಹಾಗೂ ಇನ್ನಿತರರು ಕಾಂಗ್ರೆಸ್‌ ಮತ್ತು ವಿವಿಧ ಪಕ್ಷಗಳನ್ನು ತೊರೆದು ಬಿಜೆಪಿ ಸೇರ್ಪಡೆಯಾದರು.

Advertisement

ವಿಧಾನ ಪರಿಷತ್‌ ಸದಸ್ಯ ಅಮರನಾಥ ಪಾಟೀಲ, ಜಿ.ಪಂ ಅಧ್ಯಕ್ಷೆ ಸುವರ್ಣಾ ಮಲಾಜಿ, ವಿದ್ಯಾಸಾಗರ ಕುಲಕರ್ಣಿ,
ವೀರಣ್ಣಾ ಮಂಗಾಣೆ, ಹರ್ಷಾನಂದ ಗುತ್ತೇದಾರ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next