ಅಧಿಕಾರಿಗಳು ತಾಕೀತು ಮಾಡಿದರು. ಕೊರೊನಾ ಆಂತಕದ ನಡುವೆಯೂ ಭಾನುವಾರದ ಮಾಂಸದೂಟಕ್ಕಾಗಿ ಜನ ನಗರದ ಕುರುಬರಪೇಟೆ, ಕಠಾರಿಪಾಳ್ಯ ಇತರೆಡೆ ನೂರಾರು ಮಂದಿ ಚಿಕನ್ ಖರೀದಿಗೆ ಸಾಲುಗಟ್ಟಿ ನಿಂತಿದ್ದು ಕಂಡು ಬಂದಿತು. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ನೋಡಲ್ ಅಧಿಕಾರಿ ಕೆ.ಎನ್.ಮಂಜುನಾಥ್ ಮತ್ತು ಕೋವಿಡ್-19 ಸೈನಿಕ ತಾಕೀತು ಮಾಡುತ್ತಿದ್ದ ದೃಶ್ಯ ಕಂಡು ಬಂತು. ಹಕ್ಕಿಜ್ವರ ಮತ್ತಿತರ ವದಂತಿಗಳಿಂದಾಗಿ ಚಿಕನ್
ಖರೀದಿಯಿಂದ ಜನ ಎರಡು ವಾರಗಳ ಹಿಂದೆ ದೂರ ಕಾಯ್ದುಕೊಂಡಿದ್ದರಾದರೂ, ಇದೀಗ ಅದು ವದಂತಿ ಎಂಬ ಸತ್ಯ ಅರಿವಾದೊಡನೆಯೇ ಇಂದು ಖರೀದಿಗಾಗಿ
ಅಂಗಡಿಯತ್ತ ದೌಡಾಯಿಸುತ್ತಿದ್ದಾರೆ.
Advertisement
ಮಾಂಸದ ಖರೀದಿಗೆ ಬಂದ ಜನರನ್ನು ಅಂಗಡಿಯವರೂ ಸಹಾ ಅಂತರ ಕಾಯ್ದುಕೊಳ್ಳಲು ಮನವಿ ಮಾಡುತ್ತಿದ್ದರೂ, ಕೆಲವು ಮಂದಿ ಸ್ಪಂದಿಸುತ್ತಿರಲಿಲ್ಲ. ಈ ಸಂದರ್ಭದಲ್ಲಿ ನೋಡಲ್ ಅಧಿಕಾರಿ ಕೆ.ಎನ್.ಮಂಜುನಾಥ್ ಅವರ ತಂಡ ಸ್ಥಳಕ್ಕೆ ಧಾವಿಸಿ ಜನರಿಗೆ ಅರಿವು ಮೂಡಿಸಿತು. ಅಂತರ ಕಾಯ್ದುಕೊಂಡು ನಿಯಮ ಪಾಲಿಸಿ, ಇಲ್ಲವಾದಲ್ಲಿ ಮಾಂಸ ಖರೀದಿಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು. ಸಮುದಾಯವೊಂದರ ಮಾಲಿಕರ ಮಾಂಸದಂಗಡಿಗಳನ್ನು ಮಾಂಸದ ಮಾರುಕಟ್ಟೆ ಇತರೆಡೆ ತೆರೆದಿದ್ದರೂ ವದಂತಿಗಳ ಹಿನ್ನೆಲೆಯಲ್ಲಿ ಜನತೆ ಖರೀದಿಗೆ ಮುಂದಾಗದಿರುವುದು ಈ ಭಾನುವಾರದ ವಿಶೇಷವಾಗಿತ್ತು.ಕೃಷಿ ಇಲಾಖೆಯ ಶ್ರೀನಿವಾಸ್, ಕಂದಾಯ ಇಲಾಖೆಯ ಗೋಪಾಲ್ ಮತ್ತಿತರರಿದ್ದರು.