Advertisement

ಕೊಪ್ಪಳ : ಮದ್ಯ ಖರೀದಿಗೆ ಮುಗಿಬಿದ್ದ ಜನತೆ..!

05:04 PM Apr 26, 2021 | Team Udayavani |

ಕೊಪ್ಪಳ : ರಾಜ್ಯ ಸರ್ಕಾರವು ಮತ್ತೆ 14 ದಿನಗಳ ಕಾಲ ಸಂಪೂರ್ಣ ಕರ್ಪ್ಯೂ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಕೊಪ್ಪಳ ನಗರದಲ್ಲಿ ವಿವಿಧ ಮದ್ಯದ ಅಂಗಡಿಗಳಿಗೆ ಮದ್ಯಪ್ರಿಯರು ಮುಗಿ ಬಿದ್ದು ಮದ್ಯ ಖರೀದಿಸಿದ ಪ್ರಸಂಗ ಸೋಮವಾರ ಮಧ್ಯಾಹ್ನ ಕಂಡು ಬಂದಿತು.

Advertisement

ಕೋವಿಡ್-19 ಉಲ್ಭಣದ ಹಿನ್ನೆಲೆಯಲ್ಲಿ ಸರ್ಕಾರ ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಲೇ ಬರುತ್ತಿದೆ. ಇಷ್ಟಾದರೂ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ವಾರಾಂತ್ಯದ ಕರ್ಪ್ಯೂಗೆ ಜನರಿಂದ ಉತ್ತಮ ಸ್ಪಂದನೆ ದೊರೆತ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಸಚಿವ ಸಂಪುಟದ ಸಭೆ ನಡೆಸಿ ಹಲವು ಕ್ರಮಗಳನ್ನು ಕೈಗೊಳ್ಳುವ ಮೂಲಕ ಮತ್ತೆ 14 ದಿನಗಳ ಕಾಲ ಸಂಪೂರ್ಣ ಕರ್ಪ್ಯೂ ಘೋಷಣೆ ಮಾಡಿದ್ದನ್ನು ಮಾಧ್ಯಮದಲ್ಲಿ ಸುದ್ದಿ ಗಮನಿಸಿದ ಮದ್ಯ ಪ್ರಿಯರು ಎದ್ದು ಬಿದ್ದು ಎಂಬಂತೆ ನಗರದಲ್ಲಿನ ಸರ್ಕಾರಿ ಸ್ವಾಮ್ಯದ ಎಂಎಸ್‌ ಐಎಲ್ ಹಾಗೂ ಖಾಸಗಿ ಮದ್ಯದ ಅಂಗಡಿಗಳಿಗೆ ಮುಗಿ ಬಿದ್ದು 10 ರಿಂದ 15 ದಿನಗಳಿಗೆ ಸಾಕಾಗುವಷ್ಟು ಮದ್ಯ ಖರೀದಿ ಮಾಡಿದ್ದು ಕಂಡು ಬಂದಿತು. ಮತ್ತೆ ಲಾಕ್‌ಡೌನ್ ಆಗಲಿದೆ. ನಮಗೆ ಮದ್ಯ ಇಲ್ಲದೇ ನಿದ್ದೆ ಬರಲ್ಲ. ಹಾಗಾಗಿ ಮದ್ಯ ಖರೀದಿ ಮಾಡುತ್ತಿದ್ದೇವೆ ಎಂದು ಜನರು ಗುನುಗುತ್ತಲೇ ಮದ್ಯ ಖರೀದಿಸಿದರು.

ಇನ್ನೂ ಮದ್ಯದ ಅಂಗಡಿಗಳ ಸಿಬ್ಬಂದಿಗಳೂ ಒಬ್ಬರಿಗೆ ನಿಗಧಿಯಷ್ಟೇ ಮದ್ಯವನ್ನು ಕೊಡುವುದಾಗಿ ಹೇಳಿದ್ದರಿಂದ ಮದ್ಯ ಪ್ರಿಯರು, ತಮ್ಮ ಸ್ನೇಹಿತರನ್ನೂ ಜೊತೆಗೆ ಕರೆದುಕೊಂಡು ಹೋಗಿ ಅಂಗಡಿಯಲ್ಲಿ ಮದ್ಯದ ಪಾಕೇಟ್ ಹಾಗೂ ಬಾಟಲಿ ಖರೀದಿಸಿ ಚೀಲಗಳಲ್ಲಿ ತುಂಬಿಕೊಂಡು ಮನೆಯತ್ತ ತೆರಳಿದರು. ಮಾಧ್ಯಮ ಮಿತ್ರರು ಮದ್ಯಪ್ರಿಯರನ್ನು ಈ ಬಗ್ಗೆ ಕೇಳಿದಾಗ

ಸರ್ಕಾರ ಕರ್ಪ್ಯೂ ಅನ್ನು ಏಷ್ಟು ದಿನಗಳ ಕಾಲ ಮತ್ತೆ ಮುಂದುವರೆಸುವುದೋ ಏನೋ ಗೊತ್ತಾಗಲ್ಲ. ಆಗ ಮದ್ಯಕ್ಕಾಗಿ ನಾವು ಪರದಾಡುವ ಬದಲು ಈಗಲೇ ನಮಗೆ ಬೇಕಾದಷ್ಟು ಖರೀದಿ ಮಾಡಿ ಮನೆಯಲ್ಲಿ ಇಟ್ಟುಕೊಳ್ಳುತ್ತಿದ್ದೇವೆ. ನಮಗೆ ಬೇಕಾದಾಗ ಅದನ್ನು ಸೇವನೆ ಮಾಡುತ್ತೇವೆ ಎಂದು ಹಾಸ್ಯದಿಂದಲೇ ಹೇಳಿದ್ದು ನಿಜಕ್ಕೂ ರೋಚಕವೆನಿಸಿತು. ಮದ್ಯದ ಅಂಗಡಿಗಳು ಮಾತ್ರ ಹೌಸ್‌ಪುಲ್ ಎನ್ನುವಂತೆ ಎಲ್ಲರ ಕಣ್ಣಿಗೆ ಗೋಚರಿಸಿದವು.

Advertisement

Udayavani is now on Telegram. Click here to join our channel and stay updated with the latest news.

Next