ನೆಲಮಂಗಲ: ನಗರದಲ್ಲಿ ಕೋವಿಡ್ 19 ಪಾಸಿಟಿವ್ ಸಂಖ್ಯೆ ಹೆಚ್ಚಾಗುವ ಜತೆಗೆ ವ್ಯಕ್ತಿಯೊಬ್ಬರ ಸಾವಿನ ಹಿನ್ನಲೆಯಲ್ಲಿ ಸುಭಾಷ್ ನಗರ ವಾರ್ಡ್ 15 ಹಾಗೂ 10 ಅನ್ನು ಸೀಲ್‌ಡೌನ್ ಮಾಡಲಾಗಿದೆ. ಆದರೆ ಜನರು ಬಡವಾಣೆ ರಾಜಮಾರ್ಗ ಬಿಟ್ಟು ಗಲ್ಲಿಯ ರಸ್ತೆಗಳಲ್ಲಿ ಸಂಚರಿಸುತಿರುವುದು ಕಂಡು ಬಂದಿದೆ. ಸ್ಪಂದಿಸದ ಜನರು: ತಾಲೂಕಿನಲ್ಲಿ 15ಕ್ಕೂ ಹೆಚ್ಚು ಪಾಸಿಟಿವ್ ಕೇಸ್ ದಾಖಲಾಗಿದ್ದರೂ ಜನರು ಜಾಗೃತ ರಾಗುತ್ತಿಲ್ಲ.
ಮುಖ್ಯರಸ್ತೆಗಳಿಗೆ ಅಧಿಕಾರಿಗಳ ತಂಡ ಸೀಲ್ ಮಾಡಿದ್ದು, ವಾಹನ ಸಂಚಾರ ಹಾಗೂ ಜನರ ಓಡಾಟಕ್ಕೆ ನಿಯಂತ್ರಣಕ್ಕೆ ಮುಂದಾಗಿದ್ದಾರೆ. ಇದನ್ನರಿತ ಜನರು ಮಾತ್ರ ಗಲ್ಲಿಗಲ್ಲಿಯ ರಸ್ತೆಗಳಲ್ಲಿ ಓಡಾಡುತ್ತಿದ್ದು, ಸಾಮಾಜಿಕ ಅಂತರ ಮರೆತಿದ್ದಾರೆ. ಅಧಿಕಾರಿಗಳ ತೆಗೆದುಕೊಂಡಿರುವ ನಿರ್ಧಾರಗಳಿಗೆ ಜನರು ಸ್ಪಂದಿಸುತ್ತಿಲ್ಲ ಎನ್ನಲಾಗಿದೆ.
ಜವಾಬ್ದಾರಿ ಮರೆತ ಜನಪ್ರತಿನಿಧಿಗಳು: ತಾಲೂಕಿ ನಲ್ಲಿ ಕೋವಿಡ್ 19 ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿ ಸಲು ಸಮಸ್ಯೆ ಬಗೆಹರಿಸಲು ಕೆಲವು ಜನಪ್ರತಿನಿಧಿಗಳು ಮುಂದಾಗುತಿಲ್ಲ, ಕೆಲವರು ಮನೆಖಾಲಿ ಮಾಡಿದರೆ ಕೆಲವರು ನಮಗೆ ಈ ಜನರು ಸಂಬಂಧವೇ ಇಲ್ಲದಂತಿದ್ದಾರೆ. ನಗರದಲ್ಲಿ ಈಗಾಗಲೇ ತಿರುಮಲಾಪುರ,ನಗರದ ವಾರ್ಡ್ ನಂ.15 ಮತ್ತು 10 ಸೀಲ್‌ಡೌನ್ ಮಾಡಲಾ ಗಿದೆ. ಸೀಲ್‌ಡೌನ್ ಮಾಡಲಾದ ಪ್ರದೇಶದಲ್ಲಿ ಕೋವಿಡ್ 19 ಆತಂಕದಲ್ಲಿ ವಾರ್ಡ್ ಕಡೆ ಮುಖ ಮಾಡಿಲ್ಲ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಲಾಕ್‌ಡೌನ್ ತೀರ್ಮಾನ: ಜೂ.25ರಂದು ಮಧ್ಯಾಹ್ನ 12ಕ್ಕೆ ತಹಶೀಲ್ದಾರ್ ತಾಲೂಕಿನ ಸಂಘ ಸಂಸ್ಥೆಗಳು, ವ್ಯಾಪಾರಿಗಳು, ಅಧಿಕಾರಿಗಳನ್ನು ಲಾಕ್ ಡೌನ್ ಮಾಡಲು ಸಭೆ ಕರೆಯಲಾಗಿದ್ದು, ನಗರದ ಲಾಕ್‌ಡೌನ್ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.