Advertisement
ಹದಿನಾರು ವರ್ಷಗಳಲ್ಲಿ 12 ಬರ ಎದುರಿಸಿದ್ದು ಈಗ ಕುಷ್ಟಗಿ ಪಾಲಿಗೆ ಹೆಮ್ಮೆಯ ಸಂಗತಿಯಾಗಿದೆ. ಆ ಮಟ್ಟಿಗೆ ತಾಲೂಕಿಗೆ ಬರನಿರೋಧಕ ಗುಣ ಬಂದು ಬಿಟ್ಟಿದೆ. ಇದು ಹೇಗೆ ಸಾಧ್ಯವಾಯ್ತು ಅಂದಿರಾ?ಛಲ,
Related Articles
ಈ ಕೆರೆಯ ಹಿಂದೆ ಅದ್ಬುತವಾದ ಕನಸಿದೆ. ಕುಷ್ಟಗಿ ಪಟ್ಟಣದಿಂದ ಮೂರು ಕಿ.ಮೀ.ದೂರದ ಮದಲಗಟ್ಟಿ ಸಮೀಪ ಇರುವ ನಿಡಶೇಸಿ ಕೆರೆ 327 ಎಕರೆ ವಿಸ್ತೀರ್ಣವಿದೆ. ಮೂರು ಹಳ್ಳಗಳ ಸಂಗಮವಾಗುವ ಸ್ಥಳದಲ್ಲಿ ಕೆರೆ ನಿರ್ಮಿಸಬೇಕೆನ್ನುವುದು ಸ್ಥಳೀಯ ಸಾಮಾಜಿಕ ಕಾರ್ಯಕರ್ತರಾಗಿದ್ದ ಅಬ್ದುಲ್ ರಬ್‌ಸಾಹೇಬರ ಕನಸು. ಬರೀ ಕನಸು ಕಂಡರೆ ಪ್ರಯೋಜನ ಏನು? ರಬ್ ಸಾಹೇಬರು, ಅಂದಿನ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರನ್ನು ಭೇಟಿ ಮಾಡಿ ಹೇಳಿಕೊಂಡರು. ನಿಷ್ಕಲ್ಮಶ ಉದ್ದೇಶ ಅರಿತ ಮುಖ್ಯಮಂತ್ರಿಗಳು “ಕೆಲ್ಸ ಶುರು ಮಾಡಿ. ಒಳ್ಳೇದಾಗ್ಲಿ’ ಅಂದರು. ಹೀಗೆ, ಅಂದಾಜು 7 ಕೋಟಿ ರೂ. ವೆಚ್ಚದಲ್ಲಿ ಆರಂಭವಾಯಿತು ಕಾಮಗಾರಿ. ಕೊನೆಗೆ 10 ಕೋಟಿ ರೂ. ವೆಚ್ಚದಲ್ಲಿ ಕೆರೆ ಪೂರ್ಣಕೊಂಡಿತು. ಅದೂ 1996ರಲ್ಲಿ. ಆನಂತರ ನೀರಾವರಿ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಕೆರೆ ಪ್ರದೇಶವೆಲ್ಲಾ ಮುಳ್ಳುಕಂಟಿ, ತ್ಯಾಜ್ಯ ವಿಲೇವಾರಿ, ಒತ್ತುವರಿ, ಅಕ್ರಮ ಮರಳು, ಮಣ್ಣು ಲೂಟಿಗೆ ತುತ್ತಾಗಿ ಕೆರೆ ನಿರ್ಜೀವ ಸ್ಥಿತಿಗೆ ತಲುಪಿತು. ಹೀಗಾಗಿ, ರಬ್‌ಸಾಹೇಬರ ಕನಸು ನನಸಾದರೂ ಕೆರೆಯಲ್ಲಿ ನೀರು ಉಳಿಯಲಿಲ್ಲ.
Advertisement
ಇದರ ಪರಿಣಾಮ ಅಷ್ಟಿಷ್ಟಲ್ಲ, ಕೆರೆಯ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಲ್ಲಿ ಅಂತರ್ಜಲ ಕುಸಿಯಿತು. ಹನಿ, ಹನಿಗೂ ಪರಿತಪಿಸಬೇಕಾಯಿತು. ಇದರಿಂದ ಬೆಚ್ಚಿಬಿದ್ದ ಜನತೆ ತಕ್ಷಣವೇ ಕೆರೆಗೆ ಕಾಯಕಲ್ಪ ನೀಡಬೇಕೆನ್ನುವ ಕನಸು ಕಾಣಲು ಶುರುಮಾಡಿದರು. ಇದು ರಬ್‌ಸಾಹೇಬರ ಕನಸಿನ ಮುಂದುವರಿದ ಭಾಗವಾಯಿತು.
ಆಗ ಗವಿಸಿದ್ದೇಶ್ವರ ಸ್ವಾಮಿಗಳು ಗ್ರಾಮಸ್ಥರ ನನಸಿಗೆ ಹೆಗಲುಕೊಟ್ಟರು. ಪ್ರಗತಿಪರ ರೈತ ದೇವೇಂದ್ರಪ್ಪ ಬಳೂಟಗಿ ಅಧ್ಯಕ್ಷತೆಯಲ್ಲಿ ನಿಡಶೇಸಿ ಕೆರೆ ಅಭಿವೃಧಿœ ಸಮಿತಿ ರಚಿಸಿದರು. 45 ದಿನಗಳ ಕಾರ್ಯಮಿತಿ ಯೋಜನೆಗಾಗಿ ಹಣಕಾಸು ಸಮಿತಿ, ಯಂತ್ರೋಪಕರಣ ನಿರ್ವಹಣೆ ಸಮಿತಿಗಳನ್ನು ರಚಿಸಿ, ಸಮಾನ ಮನಸ್ಕರ ಕೆರೆ ಕಾರ್ಯ ಪಡೆ ಸಜ್ಜುಗೊಳಿಸಿ ಕೆರೆ ಕಾಯಕದಲ್ಲಿ ತೊಡಗಿಕೊಂಡರು.
ಬದಲಾದ ಚಿತ್ರಣಫೆ.7ರಂದು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅಧಿಕೃತ ಚಾಲನೆ ನೀಡಿದ ಬಳಿಕ ಇದೀಗ ಕೆರೆಯ ಚಿತ್ರಣವೇ ಬದಲಾಗಿದೆ. ನಿತ್ಯವೂ ದಾನಿಗಳ ನೆರವಿನಿಂದ ಹಿಟಾಚಿ, ಜೆಸಿಬಿ, ಟಿಪ್ಪರ್, ಬುಲ್ಡೋಜರ್, ರೋಲಾರ್ ವಾಹನಗಳು ಕಾರ್ಯನಿರತವಾಗಿವೆ. ಕೆರೆಯ 288 ಎಕರೆ ಮುಳಗಡೆ ಪ್ರದೇಶದ ಸರಹದ್ದಿಗೆ ಸುಮಾರು ಮೂರೂವರೆ ಕಿ.ಮೀ. ಒಡ್ಡು ನಿರ್ಮಿಸಲಾಗಿದೆ. ಪ್ರತಿ ದಿನ 150ಕ್ಕೂ ಹೆಚ್ಚು ಶ್ರಮಿಕರು ಕೆರೆ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಇವರ ಊಟ, ತಿಂಡಿಗೆ ಕೊಪ್ಪಳ ಗವಿಮಠ ನಿತ್ಯ ದಾಸೋಹದ ವ್ಯವಸ್ಥೆ ಮಾಡಿದೆ. ಇದಕ್ಕೆ ಪೂರಕವಾಗಿ ಕೆರೆ ಅಭಿವೃಧಿœ ಸಮಿತಿ ಉಪಾಧ್ಯಕ್ಷ ಪರಸಪ್ಪ ಕತ್ತಿ ನಿತ್ಯ ತರಕಾರಿ ವ್ಯವಸ್ಥೆ, ಕಿರಣ್ ಜ್ಯೋತಿ ಬೆಳಗ್ಗೆ ಹಾಲಿನ ವ್ಯವಸ್ಥೆ, ವೈದ್ಯಾಧಿಕಾರಿ ಡಾ.ಕೆ.ಎಸ್. ರೆಡ್ಡಿ ಹಣ್ಣುಗಳನ್ನು ನೀಡುತ್ತಿದ್ದಾರೆ. ಡಾ. ರವಿ ದಾನಿ ಉಚಿತ ಚಿಕಿತ್ಸೆ ನೀಡುವ ಮೂಲಕ ಕೆರೆ ಕಾಯಕದಲ್ಲಿ ತಮ್ಮ ಸೇವೆಯನ್ನು ನಿರಂತರವಾಗಿಸಿದ್ದಾರೆ. ಪರಿಣಾಮವಾಗಿ, ಬರನಿರೋಧಕ ಗುಣ ಭೂಮಿಗೆ ಮಾತ್ರವಲ್ಲ, ಎಲ್ಲರಲ್ಲೂ ಸೇರಿಹೋಗಿ ಇವತ್ತು ನಿಡಶೇಸಿ ಕೆರೆಗೆ ನೀರು ತರುವ ಗುರಿ ಎಲ್ಲಾ ಗ್ರಾಮಸ್ಥರು, ಜನ ರಕ್ಷಕರಲ್ಲಿ ಹರಿದಾಡುತ್ತಿದೆ.
ಮಂಜುನಾಥ ಮಹಾಲಿಂಗಪುರ ಕುಷ್ಟಗಿ ಊರ ಮಂದಿ ನೀರ ಹಿಂದೆ ಬಿದ್ದಾಗ…
ಇವತ್ತು ನಿಜಕ್ಕೂ ಮಲೆನಾಡು ಅಪಾಯದ ಅಂಚಿನಲ್ಲಿದೆ. ಉಷ್ಣಾಂಶದಲ್ಲಿ ದಿಢೀರನೆ ಆಗಿರುವ ಏರಿಕೆ ಪೆಟ್ರೋಲ್ ದರದ ಓಟವನ್ನು ಮೀರಿಸಿದೆ. ಎಲ್ಲರೂ ಭೂ ಮಾಲೀಕರಾಗುವ ಮತ್ತು ತಮಗೆ ಸಿಕ್ಕ ಭೂಮಿಯಲ್ಲಿ ಕಾಡಿನ ಬದಲಾಗಿ ಕೃಷಿ ಬೆಳೆಗೆ ಮುಂದಾಗುವ ಧಾವಂತ ತೋರುತ್ತಿದ್ದಾರೆ. ಬೋರ್‌ವೆಲ್ ಮಾತ್ರ ತಮ್ಮೆಲ್ಲ ಸಮಸ್ಯೆಗೆ ಪರಿಹಾರ, ನೀರು ಬಿತ್ತು ಎಂದರೆ ಇನ್ನಷ್ಟು ಕಾಡು ಕಡಿದು ಗುಡ್ಡಬೆಟ್ಟವಾದರೂ ಅಡಿಕೆ ಹಚ್ಚಬಹುದು ಎಂಬ ಲೆಕ್ಕಾಚಾರದಲ್ಲಿಯೇ ಎಲ್ಲರೂ ಹೊರಟಿರುವುದು ಅನಾಹುತದ ಪ್ರಮಾಣವನ್ನು ಹೆಚ್ಚಿಸಿದೆ. ಕಾಡಿರುವ ಜಾಗದಲ್ಲಿ ಅಡಿಕೆ ತೋಟವಿದ್ದರೂ ಪರಿಸರ ಉಳಿದಂತೆಯೇ ಅಲ್ಲವೇ? ಮತ್ತಾವ ವೈಪರೀತ್ಯ, ಮಲೆನಾಡು ನಾಶ ಹೇಗೆ, ಅದೇ ಹಸಿರು ಕಾಣುತ್ತದಲ್ಲವೇ ಎಂಬ ಅರೆಬೆಂದ ಕಾಳುಗಳು ಕೇಳುತ್ತಲೇ ಇರುತ್ತವೆ. ಲಿಂಗದಹಳ್ಳಿಯಲ್ಲಿ ಬಂಗಾರದ ಕನಸು!
ಚಿಪ್ಲಿ ಲಿಂಗದಹಳ್ಳಿಯ ಯುವಕರು ಈ ಅಪಾಯಗಳ ನಡುವೆ ಒಂದು ಬೆಳ್ಳಿಗೆರೆಯನ್ನು ನಮಗೆ ತೋರುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಕೂಡ ಮೇ ತಿಂಗಳು ಬಂದಿತ್ತು. ಅದಾಗಲೇ ಶಿರಸಿಯಲ್ಲಿ ಸಮುದಾಯ ಆಧಾರಿತವಾಗಿ ಕೆರೆ ಹೂಳು ತೆಗೆಯಬಹುದಾದ ಸಾಧ್ಯತೆಯನ್ನು ಪರಿಸರ ಬರಹಗಾರ ಶಿವಾನಂದ ಕಳವೆ ಮುಂದಾಳತ್ವ ವಹಿಸಿ ತೋರಿಸಿದ್ದರು. ಸಾಗರದಲ್ಲೂ ಪರಿಸರ ಕಾರ್ಯಕರ್ತರಾದ ಅಖೀಲೇಶ್ ಚಿಪಿÛ, ಜಯಪ್ರಕಾಶ್ ಗೋಳಿಕೊಪ್ಪ, ಅಕ್ಷರ ಎಲ್.., ಚಿತ್ರನಟ ಏಸುಪ್ರಕಾಶ್ ಮೊದಲಾದವರು ಜೈ ಎಂದರು. ಸ್ಥಳೀಯ ಎ.ಸಿ ನಾಗರಾಜ್ ಸಿಂಗ್ರೇರ್, ಡಿವೈಎಸ್‌ಪಿ ಮಂಜುನಾಥ ಕವರಿ ಮೊದಲಾದವರು ಸಾಥ್ ನೀಡಿದಾಗ ಎಲ್ಲರ ಕಣ್ಣಲ್ಲಿ ಕಂಡೂ ಕಾಣದ ನೀರು. ತಾಂತ್ರಿಕ ಕಾರಣಗಳಿಂದಾಗಿ ಸಾಗರ ನಗರದ ತಿಮ್ಮಣ್ಣ ನಾಯಕನ ಕೆರೆಯ ಹೂಳು ತೆಗೆಯುವ ಕೆಲಸವನ್ನು ತಕ್ಷಣಕ್ಕೆ ಆರಂಭಿಸಲು ಸಾಧ್ಯವಿಲ್ಲದ ಹಿನ್ನೆಲೆಯಲ್ಲಿ ಕಲ್ಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಪ್ಲಿ ಲಿಂಗದಹಳ್ಳಿಯ ಬಂಗಾರಮ್ಮನ ಕೆರೆಯ ಹೂಳನ್ನು ತೆಗೆಯಲು ಕಾರ್ಯಪಡೆ ನಿರ್ಧರಿಸಿತು. ಅವತ್ತು ಸಾಗರ ತಾಲೂಕು ಜೀವಜಲ ಕಾರ್ಯಪಡೆ ಹೊಸ ಹುಮ್ಮಸ್ಸಿನಿಂದ ಲಿಂಗದಹಳ್ಳಿಯ ಕೆರೆ ಹೂಳೆತ್ತುವ ಕಾರ್ಯ ಸುಮಾರು 11.5 ಲಕ್ಷ ರೂ.ಗಳ ವೆಚ್ಚ ಮಾಡಿಯೂ ಶೇ. 30ರಷ್ಟು ಮಾತ್ರ ಸಾಗಿತ್ತು. ಈ ನಡುವೆ ಹಣದ ಮುಗ್ಗಟ್ಟಿನಿಂದ ಕೆಲಸ ನಿಂತು ಆಡಿಕೊಳ್ಳುವವರ ಬಾಯಿಗೆ ಆಹಾರ ಒದಗಿಸಿತ್ತು. ದುರಂತ ಎಂದರೆ, ಅತ್ತ ಹೂಳು ತೆಗೆಯಬೇಕಾದ ತಿಮ್ಮಣ್ಣ ನಾಯಕನ ಕೆರೆಗೇ ಮಣ್ಣು ಚೆಲ್ಲಿ ಜಾಗ ಮಾಡುವ ಪ್ರವೃತ್ತಿ ಲಗಾಮಿಲ್ಲದೆ ಸಾಗಿತ್ತು! ಭರವಸೆ ಹುಸಿಯಾಗಿತ್ತು. ಈ ಹನ್ನೊಂದೂವರೆ ಲಕ್ಷ ರೂ. ಸಂಗ್ರಹಿಸಿ ಮಾಡಿದ ಕೆಲಸದ ಬಿಲ್ ಪಾವತಿಸುವಷ್ಟರಲ್ಲಿ ಕಾರ್ಯಪಡೆ ಏದುಸಿರು ಬಿಡುವಂತಾಗಿತ್ತು. ಆದರೆ ಇಲ್ಲಿನ ಯುವ ಪಡೆ ಸಂಪೂರ್ಣ ನಿರಾಶರಾಗಿರಲಿಲ್ಲ. ಅಖೀಲೇಶ್ ಚಿಪ್ಲಿ, ಅಕ್ಷರ ಎಲ್.., ಜಯಪ್ರಕಾಶ್ ಗೋಳಿಕೊಪ್ಪ, ಎಲ್.ಅಶೋಕ, ಸತೀಶ್, ದಿನೇಶ್ ಮೊದಲಾದವರ ಪ್ರಯತ್ನ ನಡೆದಿತ್ತು. ಎರಡು ವರ್ಷಗಳ ಹಿಂದಿನ 31 ದಿನಗಳ ಕಾಯಕಕ್ಕೆ ಪೂರಕವಾಗಿ ಮತ್ತೂಮ್ಮೆ ಈ ಕಾಯಕಕ್ಕೆ ಜೀವ ಬಂತು, ಥ್ಯಾಂಕ್ಸ್ ಟು ಕರ್ನಾಟಕ ಬ್ಯಾಂಕ್! ಮಾರ್ಚ್‌ನ ಎರಡನೇ ವಾರ ಮತ್ತೆ ಜೆಸಿಬಿ, ಟಿಪ್ಪರ್ ಕಾರ್ಯ ನಡೆಸಲು ಕರ್ನಾಟಕ ಬ್ಯಾಂಕ್ ಐದು ಲಕ್ಷ ರೂ. ಸಹಾಯ ಒದಗಿಸುವ ಭರವಸೆ ನೀಡಿದೆ. ಹಣದ ಜೊತೆ ಈ ಬಾರಿ ಅನುಭವವೂ ಸಹಕರಿಸಿದ್ದರಿಂದ ಒಂದು ಅತ್ಯುತ್ತಮ ಹೊಸ ಕೆರೆಯೇ ಸೃಷ್ಟಿಯಾಗುವಂತೆ ಕಾಣುತ್ತಿದೆ. ಬಂಗಾರಮ್ಮನಿಗೆ ಬಡತನ!
ಈ ಬಂಗಾರಮ್ಮನ ಕೆರೆ ಹೂಳು ತೆಗೆಯುವ ಕೆಲಸದ ಎದುರು ಸಮಸ್ಯೆ ಗುಡ್ಡದಂತಿದೆ. ದಿನದ ಸಂಪೂರ್ಣ ಅವಧಿಯನ್ನು ಕೆರೆಯ ತಟದ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಕಲ್ಮನೆ ಗ್ರಾಮ ಪಂಚಾಯ್ತಿ ಸದಸ್ಯ ಎಲ್.ಅಕ್ಷರ ಹೇಳುವಂತೆ, ಲಂಚತನ, ಭ್ರಷ್ಟಾಚಾರಗಳಿಲ್ಲದಿದ್ದರೂ ದಿನಕ್ಕೆ ಎಲ್ಲ ವೆಚ್ಚ ಸೇರಿ 37 ಸಾವಿರ ರೂ.ಗಳಷ್ಟು ಹಣ ಬೇಕು. ಕೈಯಲ್ಲಿರುವ ಹಣ ಇನ್ನೂ ನಾಲ್ಕೈದು ದಿನಗಳ ಕೆಲಸಕ್ಕೆ ಸಾಕಾಗುತ್ತದೆ. ಒಂದು ಹಂತದ ಕೆಲಸ ಮುಗಿಸಲು ಇನ್ನೂ ಕನಿಷ್ಠ 5 ಲಕ್ಷ ರೂ. ಬೇಕು. ಸಮಾಜದ ಒಳಿತನ್ನು ಚಿಂತಿಸುವ, ಉದಾರವಾಗಿ ಧನಸಹಾಯ ಮಾಡುವ ಸಹಾಯ ಹಸ್ತಗಳು ಕೈಚಾಚಬಹುದೇ?’ ಲಿಂಗದಹಳ್ಳಿಯ ಜನರು ಆಶಾವಾದಿಗಳಾಗಿದ್ದಾರೆ. ಸರ್ಕಾರದತ್ತ ಕೈ ಚಾಚದ ಜನ
ಕಲ್ಮನೆ ಗ್ರಾ.ಪಂ ವ್ಯಾಪ್ತಿಯ ಗೋಳಿಕೊಪ್ಪದಲ್ಲಿ ಎರಡು ಹಂತಗಳಲ್ಲಿ ಈ ಹಿಂದೆಯೇ ಅಲ್ಲಿನ ಕೆರೆಯ ಹೂಳನ್ನು ಅಲ್ಲಿನ ಜನ ತಮ್ಮ ಕೈಯಲ್ಲಿರುವ ಹಣ ಸಂಗ್ರಹಿಸಿ ತೆಗೆಸಿದ್ದಾರೆ. ಇಲ್ಲಿನ ಯಶಸ್ಸು ಪಕ್ಕದ ಸುಳ್ಳಮನೆ ಗ್ರಾಮಸ್ಥರನ್ನೂ ಸೆಳೆದಿದೆ. ಊರಿನ ಎಂಟØತ್ತು ಗ್ರಾಮಸ್ಥರು ಈಗ 1.7 ಲಕ್ಷ ರೂ.ಗಳನ್ನು ಒಟ್ಟು ಮಾಡಿ ತಮ್ಮೂರಿನ ಒಂದೆಕರೆ ಪ್ರದೇಶದ ಕೆರೆಯ ಹೂಳು ತೆಗೆಯುವ ಕಾರ್ಯ ಆರಂಭಿಸಿದ್ದಾರೆ. ಹೆಗ್ಗೊàಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಾವಿನಸರದಲ್ಲಿ 50 ಗುಂಟೆ ಕೆರೆಗೆ ಐದು ವರ್ಷದ ಹಿಂದೆ ಜನ ಸಂವರ್ಧನ ಯೋಜನೆಯಡಿ ಕೆರೆ ಗೋಡೆ, ಮೆಟ್ಟಿಲು, ನೀರಿನ ಪೈಪ್ ಅಳವಡಿಕೆಯಂಥ ಕೆಲಸ ನಡೆದಿತ್ತು. ಆದರೆ, ಅದರ ಹೂಳು ತೆಗೆಯುವ ಕೆಲಸ ಮಾತ್ರ ಆಗಿರಲಿಲ್ಲ. ಈಗ ಊರವರು ಸದ್ಗುರು ಕೆರೆ ಬಳಕೆದಾರರ ಸಂಘದ ಹೆಸರಿನಲ್ಲಿ ಕೆರೆ ಹೂಳು ತೆಗೆಯುವ ಕೆಲ ಹಂತದ ಕೆಲಸ ಮುಗಿಸಿದ್ದಾರೆ. ನೀಚಡಿಯಲ್ಲಿಯೂ ಯುವಕರು ಅಲ್ಲಿನ ಕೆರೆಯ ಕಾಯಕಲ್ಪವನ್ನು ಖಾಸಗಿಯಾಗಿ ಮಾಡಿದ್ದಾರೆ. ಕೆರೆಯೇ ಇಲ್ಲದ ತಾಳಗುಪ್ಪ ಸಮೀಪದ ಹಿಂಡೂಮನೆ, ಹೊಸಳ್ಳಿಯ ಜನ ಊರಿನ ಗೋಮಾಳ, ಕಂದಾಯ ಜಮೀನಿನ ಆಯಕಟ್ಟಿನ ಜಾಗದಲ್ಲಿ 10ರಿಂದ 20 ಲಕ್ಷ ಲೀಟರ್ ನೀರು ಸಂಗ್ರಹದ ಚೆಕ್ ಡ್ಯಾಂ ಮಾದರಿಗಳನ್ನು ಮಾಡಿಸಿದ್ದಾರೆ. ಮಲೆನಾಡಿಗರ ಮೊರೆ!
ಪರಿಸರದ ಕುರಿತು ಮಾತನಾಡುವ, ಕಾಳಜಿ ವ್ಯಕ್ತಪಡಿಸುವ ಜನ ಸಾವಿರಗಳ ಸಂಖ್ಯೆಯಲ್ಲಿದ್ದಾರೆ. ಅವರಲ್ಲಿ ನಿಜಕ್ಕೂ ಸಹಾಯ ಹಸ್ತ ಚಾಚುವ ನೂರಾರು ಸಹೃದಯಗಳಿದ್ದಾರೆ. ಆದರೆ ಅವರಿಗೆಲ್ಲ ಅಸಲಿಯತ್ತಾದ ಯೋಜನೆ ಯಾವುದು ಎಂಬುದರ ಬಗ್ಗೆ ಅನುಮಾನಗಳಿವೆ. ಹಾಗೆಯೇ ಈ ತರಹದ ಕೆಲಸಕ್ಕೆ ಹಣ ಕೊಡುವ ಸಂಘಟನೆ, ಕಂಪನಿ, ಎನ್‌ಜಿಓಗಳ ಬಗ್ಗೆ ಇತ್ತ ಊರವರ ವರಾಂಡದಲ್ಲಿ ಎರಡು ಮೂರು ಲಕ್ಷ ಒಟ್ಟು ಮಾಡಿ ಅರ್ಧಂಬರ್ಧಕ್ಕೆ ಕೆಲಸ ನಿಲ್ಲಿಸುವಂತಾಗುವ ಹಳ್ಳಿಗರಿಗೆ ಅರಿವಿಲ್ಲ. ಲಿಂಗದಹಳ್ಳಿಗರ ಸಾಹಸದ ಕಥನಕ್ಕೇ ಬಂದರೆ, ಅಖೀಲೇಶ್, ಅಕ್ಷರ ಮೊದಲಾದವರು ಹೇಳುವುದು ಒಂದೇ, ಏಕಾಏಕಿ ನೀವು ಹಣ ಸಹಾಯ ಮಾಡಬೇಕಿಲ್ಲ. ಒಮ್ಮೆ ಇಲ್ಲಿಗೆ ಬನ್ನಿ. ದೂರದ ಬೆಂಗಳೂರು, ಅಮೆರಿಕಾದಲ್ಲಿರುವವರು ನಿಮ್ಮ ಆಪ್ತರನ್ನು ಇಲ್ಲಿಗೆ ಕಳುಹಿಸಿ ಕೆಲಸ ಪರಿಶೀಲಿಸಿ. ಪರಿಸರದ ರಕ್ಷಣೆಗೆ ಕೈಜೋಡಿಸುವುದರಿಂದ ಬರೇ ನಮ್ಮೂರಿಗೆ ನೀರಾಗುವುದಿಲ್ಲ. ಅದು ಪರಿಸರಕ್ಕೇ ಸಿಗುವ ಕೊಡುಗೆಯಾಗುತ್ತದೆ ಅಂತ.
ದಾರಿ ತೋರಿಸುವ, ಧನದಾನ ಮಾಡುವವರಿಗೆ ಅಕ್ಷರ ಎಲ್-99452 60658
ಅಥವಾ ಅಖೀಲೇಶ್ ಚಿಪ್ಲಿ ಅವರ ನಂಬರ್- 94497 18869 ಮಾ.ವೆಂ.ಸ.ಪ್ರಸಾದ್ ಜಲವಿಕಾಸ
ಮಲೆನಾಡ ಸೆರಗಿನಲ್ಲೇ ಅಂತರ್ಜಲದ ಪ್ರಮಾಣ ತೀವ್ರ ಇಳಿಮುಖವಾಗಿರುವುದು ಗಂಭೀರ ವಿಷಯ. ಈ ಕುರಿತು ಬದಲಾವಣೆ ತರಬೇಕೆಂಬ ಸದಾಶಯದೊಂದಿಗೆ ಮನುವಿಕಾಸ ಸಂಸ್ಥೆ ನೀರು ಇಂಗಿಸುವ ಗುಂಡಿಗಳನ್ನು ನಿರ್ಮಿಸಲು ಮುಂದಾಯಿತು. ಮೂರು ವರ್ಷದ ಹಿಂದೆ ಸಿದ್ಧಾಪುರದ ಮೂಡಳ್ಳಿಯಲ್ಲಿ ನಿರ್ಮಿಸಿದ ಸರಣಿ ನೀರಿಂಗಿಸುವ ಹೊಂಡಗಳಿಂದ ಆ ಭಾಗದಲ್ಲಿ ಅಂತರ್ಜಲದ ಮಟ್ಟ ಹೆಚ್ಚಾಗಿದೆ. ಬಿರು ಬೇಸಿಗೆಯಲ್ಲೂ ಹಸಿರು ಉಸಿರಾಡುತ್ತಿದೆ. ಪ್ರತಿ ಇಂಗುಗುಂಡಿಗಳೂ ಸಾವಿರ ಲೀಟರಿಗಿಂತಲೂ ಹೆಚ್ಚು ನೀರನ್ನು ಇಂಗಿಸುವ ತಾಕತ್ತು ಹೊಂದಿವೆ. ಇನ್ನಷ್ಟು ಇಂಗುಗುಂಡಿಗಳ ನಿರ್ಮಾಣ ಮಾಡಲು ಬೇರೆ ಕಾರಣ ಬೇಕೆ? ಹೂಳು ಎಂಬ ಕಸದ ನಿವಾರಣೆ
ಶಿರಸಿ ತಾಲೂಕಿನ ಬನವಾಸಿ ಸಮೀಪ ನಿರ್ಮಿಸಲಾಗಿದ್ದ ಕೆರೆಗಳಲ್ಲಿ ಹೂಳು ತುಂಬಿ ನೀರಿನ ಸಂಗ್ರಹಣಾ ಸಾಮರ್ಥ್ಯ ಕಡಿಮೆಯಾಗಿತ್ತು. ಕೆರೆಗಳ ಮಹತ್ವವರಿತ ಇದೇ ತಂಡ, ಕದಂಬರ ಕಾಲದ ನರೂರು, ತಿಗಣಿ, ಹೊಸೂರು ಸೇರಿದಂತೆ ಒಟ್ಟು 7 ಕೆರೆಗಳನ್ನು ಸ್ಥಳೀಯರ ಮತ್ತು ಕೊಕೋಕೋಲಾ ಫೌಂಡೇಷನ್ನಿನ ಸಹಭಾಗಿತ್ವದಲ್ಲಿ ಹೂಳಿನಿಂದ ಮುಕ್ತಗೊಳಿಸಿದೆ. ಬನವಾಸಿ ಭಾಗದಲ್ಲಿ ಎದುರಾಗಿದ್ದ ಜಲಕ್ಷಾಮವನ್ನು ಎದುರಿಸಲು ಕೆರೆಗಳು ಸಜ್ಜಾದವು. ಆ ಭಾಗದ ರೈತರ ಮೊಗದಲ್ಲಿ ಮಂದಹಾಸ ಮೂಡಿತು. ಅಲ್ಲದೇ, 164 ಎಕರೆ ವಿಸ್ತೀರ್ಣದ ಗುಡ್ನಾಪುರ ಕೆರೆ ಹೂಳೆತ್ತಿದ್ದು ಮತ್ತೂಂದು ರೋಚಕ ಕತೆ. ಹೀಗೆ, ಕೆರೆಗಳ ಪುನರುತ್ಥಾನದ ಮೂಲಕ ರೈತ ಸಮುದಾಯಕ್ಕೆ ಸಹಾಯಹಸ್ತ ಒದಗಿಸುವಲ್ಲಿ ಸಕ್ರಿಯ ಪಾತ್ರವಹಿಸುತ್ತಿದೆ. ನೀರುಳಿದರೆ ಗಿಡ-ಮರ, ಬೆಟ್ಟ, ಅಡವಿ ಎಲ್ಲವೂ ಇನ್ನಷ್ಟು, ಮತ್ತಷ್ಟು ಪೊಗದಸ್ತಾಗಿ ಬೆಳೆಯುತ್ತವೆ ಎಂಬ ಸಾಂಪ್ರದಾಯಿಕ ಜ್ಞಾನವನ್ನು ವೈಜ್ಞಾನಿಕವಾಗಿ ಕಾರ್ಯರೂಪಕ್ಕಿಳಿಸುತ್ತಿದೆ. ಇದೇ ರೀತಿ ಬೆಟ್ಟಲ್ಯಾಂಡ್ ಅನ್ನೋ ಯೋಜನೆ ಅಡಿಯಲ್ಲಿ 150ಕ್ಕೂ ಹೆಚ್ಚು ಇಂಗು ಗುಂಡಿಗಳನ್ನು ನಿರ್ಮಿಸಿದೆ. ನೀರು ಉಳಿಸಲು ನಡೆಸಬಹುದಾದ ಸಾರ್ಥಕ ಸೇವೆ ಅಂದರೆ ಇದೇ.
ಗುರುಗಣೇಶ ಭಟ್ ಡಬ್ಲುಳಿ