Advertisement
ಶಿವಮೊಗ್ಗದಲ್ಲಿರುವ ನವರತ್ನ ಫೂಯಲ್ಸ್ ಎನ್ನುವ ಪೆಟ್ರೋಲ್ ಪಂಪ್ ನೆರೆ ಸಂತ್ರಸ್ತರ ಬಾಳಿಗೆ ನೆರೆವಾಗಲು ವಿಶಿಷ್ಟ್ಯವಾದ ಕಾಯಕಲ್ಪವನ್ನು ಮಾಡುತ್ತಿದೆ. ಅವಿನಾಶ್ ಎನ್ನುವವರು ನೆರೆ ಸಂತ್ರಸ್ತರಿಗೆ ತಮ್ಮಿಂದಾಗುವ ಸಹಾಯವನ್ನು ಮಾಡಲು ಹೊರಟಾಗ ಇದಕ್ಕಾಗಿ ಒಂದು ತರೆದ ದೊಡ್ಡ ಕವಾಟನ್ನು ತಮ್ಮ ಪಟ್ರೋಲ್ ಪಂಪ್ ಆವರಣದಲ್ಲಿ ಇಡುತ್ತಾರೆ.ಅದರ ಪಕ್ಕದಲ್ಲೇ ರೆಫ್ರಿಜರೇಟರ್ ಅನ್ನು ಸಹ ಇಟ್ಟು ಬಿಡುತ್ತಾರೆ. “ಕರುಣೆಯ ಗೋಡೆ” ಅನ್ನುವ ಪರಿಕಲ್ಪನೆಯಲ್ಲಿ ದೊಡ್ಡ ಕವಾಟಿನಲ್ಲಿ ನೆರೆ ಸಂತ್ರಸ್ತರಿಗಾಗಿ ಅಗತ್ಯ ವಸ್ತುಗಳನ್ನು ಸಂಗ್ರಹ ಮಾಡಲು ಪ್ರಾರಂಭಿಸುತ್ತಾರೆ.
Related Articles
Advertisement
ಕರುಣೆಯ ಗೋಡೆಯಲ್ಲಿ ಪ್ರತಿನಿತ್ಯ ಆಹಾರ, ದಿನಸಿ, ಅಡುಗೆ ಸಾಮಾನು, ಬಟ್ಟೆ, ಪುಸ್ತಕ, ಬ್ಯಾಗ್, ಗೊಂಬೆ, ಶೂ, ಛತ್ರಿ, ಬೆಡ್‌ಶೀಟ್, ಟವೆಲ್ ಸೇರಿದಂತೆ ಮತ್ತಿತರೆ ವಸ್ತುಗಳನ್ನಿಡಲು ಆಸಕ್ತಿ ಇರುವವರು 98868-09000, 98869-43538ಗೆ ಸಂಪರ್ಕಿಸಲು ಕೋರಿದೆ.
Shivamogga: Petrol pump owner Avinash & his mother have have installed a shelf at their pump to collect & distribute food, clothes & other materials for the flood-affected people in the district. The shelf has been named “People’s wall”. #Karnataka pic.twitter.com/BYRTltsfFt
— ANI (@ANI) August 22, 2019