Advertisement
ಜಿಲ್ಲೆಯ ಹೊನ್ನಾಳಿ ಹಾಗೂ ಹರಿಹರ ತಾಲೂಕುಗಳಲ್ಲಿ ಅತಿ ಹೆಚ್ಚು ಜನರಲ್ಲಿ ಫ್ಲೋರೋಸಿಸ್‌ಕಾಯಿಲೆ ಕಂಡು ಬಂದಿದೆ. ಹೊನ್ನಾಳಿ ತಾಲೂಕಿನಲ್ಲಿಬಾವಿ, ಕೈಪಂಪ್‌ಗ್ಳ ಮೂಲಕ ಪಡೆಯುವಫ್ಲೋರೈಡ್‌ಯುಕ್ತ ನೀರು ಸೇವಿಸಿ ಹಲವರಿಗೆ ಫ್ಲೋರೋಸಿಸ್ ಕಾಯಿಲೆ ಬಂದಿದೆ. ಫ್ಲೋರೈಡ್‌ಯುಕ್ತನೀರಿನಿಂದ ಆಗಬಹುದಾದ ದುಷ್ಪರಿಣಾಮಗಳಅರಿವಿಲ್ಲದೆ ಈ ಭಾಗದ ಜನರು ದಶಕಗಳಿಂದ ಇದೇನೀರನ್ನು ಕುಡಿಯಲು ಉಪಯೋಗಿಸುತ್ತಿದ್ದಾರೆ. ಇಂತಹ ನೀರಿನಲ್ಲಿ ವಿಷಪೂರಿತ ರಾಸಾಯನಿಕವಸ್ತುಗಳು ಕರಗಿರುತ್ತವೆ. ಇಂಥ ನೀರುಸೇವಿಸಿದರೆ ದೇಹದ ಆರೋಗ್ಯ ಹದಗೆಟ್ಟು ನಾನಾ ದುಷ್ಪರಿಣಾಮಗಳಾಗಿ ಅನೇಕ ಕಾಯಿಲೆಗಳುಬರುತ್ತವೆ. ಅವುಗಳಲ್ಲಿ ಪ್ಲೋರೋಸಿಸ್ ಕಾಯಿಲೆಯೂ ಒಂದಾಗಿದೆ.
Related Articles
Advertisement
ಒಟ್ಟಾರೆ ಫ್ಲೋರೈಡ್‌ಯುಕ್ತ ನೀರಿನ ಸಮಸ್ಯೆಯಿಂದ ಬಳಲುತ್ತಿರುವ ರಾಜ್ಯದ 18 ಜಿಲ್ಲೆಗಳಲ್ಲಿ ದಾವಣಗೆರೆ ಜಿಲ್ಲೆಯೂ ಒಂದಾಗಿದ್ದು, ಜಿಲ್ಲೆಯಲ್ಲಿ ಎಲ್ಲೆಲ್ಲೆ ಫ್ಲೊರೈಡ್ ಹೆಚ್ಚಿರುವ ನೀರು ಜನರು ಕುಡಿಯುತ್ತಿದ್ದಾರೋ ಅಲ್ಲೆಲ್ಲ ಜಿಲ್ಲಾಡಳಿತ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಮೂಲಕ ಜನರನ್ನು ಆರೋಗ್ಯ ಕಾಪಾಡಬೇಕಾಗಿದೆ.
ಏನಿದು ಫ್ಲೋರೋಸಿಸ್? : ಭೂಮಂಡಲದಲ್ಲಿ ನೀರು ನಾನಾ ಮೂಲಗಳಿಂದ ಅಂದರೆ ಕೊಳವೆ ಬಾವಿ, ಹಳ್ಳ, ಕೊಳ್ಳ, ಕೆರೆ,ಬಾವಿ, ನದಿ, ಸಮುದ್ರದಿಂದ ಲಭ್ಯವಿದೆ. ಹೀಗೆ ನಾನಾ ಮೂಲಗಳಿಂದ ಲಭ್ಯವಿರುವ ನೀರಿನಲ್ಲಿ ಫ್ಲೋರೈಡ್,ಆರ್ಸನಿಕ್, ನೈಟ್ರೇಟ್, ಕ್ಲೋರೈಡ್‌ಹಾಗೂ ಐರನ್‌ನಂಥ ನಾನಾ ರೀತಿಯ ರಾಸಾಯನಿಕ ವಸ್ತುಗಳು ಕರಗಿರುತ್ತವೆ. ದಿನ ನಿತ್ಯ ಅವಶ್ಯಕವಿರುವ ನೀರಿನಲ್ಲಿ ಈ ರೀತಿಯ ರಾಸಾಯನಿಕ ಪದಾರ್ಥಗಳುಪ್ರತಿದಿನ ನಮ್ಮ ದೇಹಕ್ಕೆ ನಿಗದಿತ ಪ್ರಮಾಣದಲ್ಲಿಅವಶ್ಯಕವಿರುತ್ತದೆ. ಇದು ನಿಗದಿತ ಪ್ರಮಾಣಕ್ಕಿಂತ ಹೆಚ್ಚಾದರೆ ಕಾಯಿಲೆಗಳು ಬರುತ್ತವೆ. ಅದೇ ರೀತಿ ಕುಡಿಯುವ ನೀರಲ್ಲಿ ಫ್ಲೊರೈಡ್ ಅಂಶ ಹೆಚ್ಚಾದರೆ ಪ್ಲೋರೋಸಿಸ್ ಕಾಯಿಲೆ ಬರುತ್ತದೆ. ಇದರಿಂದ ದೇಹದ ಅನೇಕ ಭಾಗಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಕುಡಿಯುವ ನೀರಿನಿಂದಹೆಚ್ಚಾಗಿ ಈ ಕಾಯಿಲೆ ಬಂದರೂ, ಒಂದೇರೀತಿಯ ಕೆಲ ಆಹಾರ, ಕೆಲವು ಔಷಧಿಗಳ ಸೇವನೆ ಹಾಗೂ ಕಾರ್ಖಾನೆಗಳಿಂದ ಹೊರಹೊಮ್ಮುವ ಧೂಳು, ತ್ಯಾಜ್ಯ ಮಿಶ್ರಿತ ನೀರಿನಿಂದಲೂ ಫ್ಲೊರೈಡ್ ದೇಹದೊಳಗೆ ಪ್ರವೇಶಿಸುತ್ತದೆ. ಫ್ಲೋರೋಸಿಸ್ ಹಲ್ಲು, ಎಲುಬಿನ ಹಂದರ, ಕೀಲುಗಳಿಗೆ ಹಾನಿ ಹಾಗೂ ನೋವು ಉಂಟು ಮಾಡುತ್ತದೆ. ಬಾವಿಗಳು ಅಥವಾ ಕೈಪಂಪುಗಳ ನೀರು ಕುಡಿಯುವರು ಈ ಕಾಯಿಲೆಗೆ ತುತ್ತಾಗುವ ಸಂಭವ ಹೆಚ್ಚಾಗಿದೆ.
ಶುದ್ಧ ನೀರು ಕುಡಿಯಿರಿ : ಹೆಚ್ಚು ಫ್ಲೋರೈಡ್ ಇರುವ ನೀರು ಮತ್ತು ಆಹಾರ ಸೇವನೆಯಿಂದ ಫ್ಲೋರೋಸಿಸ್ ಬರುತ್ತದೆ. ಫ್ಲೋರೋಸಿಸ್ ತಡೆಗಟ್ಟಲು ಫ್ಲೋರೈಡ್ ಅಂಶ ಕಡಿಮೆ ಇರುವ ಅಂದರೆ ಒಂದು ಪಿಪಿಎಂಗಿಂತ ಕಡಿಮೆ ಇರುವ ಶುದ್ಧ ಕುಡಿಯುವ ನೀರು ಹಾಗೂ ಹಾಲು, ಬೆಲ್ಲ, ಹಸಿರು ಸೊಪ್ಪು, ನುಗ್ಗೆಕಾಯಿ, ಕಾಳುಗಳು, ಹಸಿರು ತರಕಾರಿ, ಹಣ್ಣುಗಳು, ಸೀಬೆ, ನೆಲ್ಲಿಕಾಯಿ, ನಿಂಬೆ, ಟೊಮ್ಯಾಟೊ, ಕ್ಯಾರೆಟ್, ಕಿತ್ತಳೆ, ಮೋಸಂಬಿ, ಬೆಳ್ಳುಳ್ಳಿ,ಗೆಣಸು, ಮೀನು ಮೊಟ್ಟೆ ಮಾಂಸ ಹಾಗೂ ತಾಜಾ ಆಹಾರ ಪದಾರ್ಥಗಳನ್ನು ಬಳಸಬೇಕು. – ಡಾ.ಮೀನಾಕ್ಷಿ, ಆರ್‌ಸಿಎಚ್ ಅಧಿಕಾರಿ, ದಾವಣಗೆರೆ.
ಅರಿವು ಕಾರ್ಯಕ್ರಮ : ಜಿಲ್ಲೆಯಲ್ಲಿ ಫ್ಲೋರೋಸಿಸ್ ಕಾಯಿಲೆ ಹೆಚ್ಚಾಗಿದ್ದು, ಶಾಲಾ ಕಾಲೇಜುಗಳಲ್ಲಿ ಅರಿವುಮೂಡಿಸುವ ಮೂಲಕ ಫ್ಲೋರೋಸಿಸ್‌ನಿಂದ ದೂರವಿರುವಂತೆಹಾಗೂ ಎಲ್ಲ ವಯೋಮಾನದವರಲ್ಲೂಜಾಗೃತಿ ಮೂಡಿಸಲು ಸೂಚಿಸಲಾಗಿದೆ. ಹರಿಹರ ಭಾಗದಲ್ಲಿ ಕೃಷಿ ಇಲಾಖೆಯಿಂದಕೃಷಿಯಲ್ಲಿ ರಸಗೊಬ್ಬರ, ಕೀಟನಾಶಕಹೆಚ್ಚು ಬಳಸದಂತೆ ಜಾಗೃತಿ ಮೂಡಿಸಲು ಸೂಚಿಸಲಾಗಿದೆ. -ಪದ್ಮಾ ಬಸವಂತಪ್ಪ, ಸಿಇಒ, ಜಿಪಂ
-ಎಚ್.ಕೆ. ನಟರಾಜ