Advertisement

ಚರಂಡಿ ತ್ಯಾಜ್ಯದಿಂದ ಬೇಸತ್ತ ಜನ

04:33 PM Dec 01, 2019 | Suhan S |

ಕೊಪ್ಪಳ: ನಗರದ ಹೃದಯ ಭಾಗದಲ್ಲಿನ ಕೇಂದ್ರಿಯ ಬಸ್‌ ನಿಲ್ದಾಣದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚರಂಡಿ ನಿರ್ಮಾಣ ಕಾರ್ಯ ನಡೆದಿದೆ. ಆದರೆ ಚರಂಡಿಯಲ್ಲಿದ್ದ ಟನ್‌ ಗಟ್ಟಲೆ ತ್ಯಾಜ್ಯವನ್ನು ತೆಗೆದು 4 ದಿನಗಳಿಂದ ಸ್ಥಳದಲ್ಲೇ ಬಿಡಲಾಗಿದೆ.  ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಸೇರಿದಂತೆನಗರಸಭೆ ಅಧಿಕಾರಿಗಳೂ ಇತ್ತ ಗಮನ ಹರಿಸಿಲ್ಲ. ಈ ತ್ಯಾಜ್ಯ ಯಾರಿಗೂ ಬೇಡವಾಗಿದೆಯೇನೋ ಎನ್ನುವ ಭಾವನೆ ಎಲ್ಲರಲ್ಲೂ ಮೂಡಲಾರಂಭಿಸಿದೆ.

Advertisement

ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಜವಾಬ್ದಾರಿನಗರಸಭೆ ಅಧಿಕಾರಿಗಳ ಮೇಲಿದೆ. ಆದರೆ ಚರಂಡಿಯಲ್ಲಿನ ತ್ಯಾಜ್ಯವನ್ನ ತೆಗೆದು ರಸ್ತೆಯ ಮೇಲೆ ಹಾಕಿದ್ದನ್ನು ಯಾರೂನೋಡುತ್ತಿಲ್ಲ. ನಿತ್ಯ ನಗರಕ್ಕೆ ಆಗಮಿಸುವ ಲಕ್ಷಾಂತರ ಜನರು ಇಲ್ಲಿನ ಕೊಳಕು ತ್ಯಾಜ್ಯನೋಡಿ ಮೂಗು ಮುಚ್ಚಿಕೊಂಡು ಮುಂದೆ ಸಾಗುವಂತ ಅನಿವಾರ್ಯತೆ ಇದೆ. ಈತ್ಯಾಜ್ಯವು ಕೇಂದ್ರಿಯ ಬಸ್‌ ನಿಲ್ದಾಣದ ಪಕ್ಕದಲ್ಲಿಯೇ ಇರುವುದರಿಂದ ಅನ್ಯ ಊರುಗಳಿಂದ ಆಗಮಿಸುವವರು ಇದನ್ನು ನೋಡಿ ಏನಪ್ಪಾ ಇದು ಅವಸ್ಥೆ ಎಂದು ಗೊಣಗುತ್ತಲೇ ಮುಂದೆ ಹೋಗುತ್ತಿದ್ದಾರೆ. ಚರಂಡಿಯಲ್ಲಿನ ತ್ಯಾಜ್ಯವನ್ನು ತೆಗೆದು ಬೇರೆಡೆ ಸಾಗಾಟ ಮಾಡಲು ಅಬ್ಬಬ್ಟಾಎಂದರೆ ಒಂದು ದಿನ ಸಾಕು. ಆದರೆ ಕಳೆದ ಐದು ದಿನಗಳಿಂದಲೂ ಇದನ್ನು ಬೇರೆಡೆ ಸಾಗಾಟ ಮಾಡಿಲ್ಲ.

ತ್ಯಾಜ್ಯದಲ್ಲೇ ಹಣ್ಣಿನ ಅಂಗಡಿ: ರಾಷ್ಟ್ರೀಯ ಹೆದ್ದಾರಿ ರಸ್ತೆಯ ಪಕ್ಕದಲ್ಲೇ ತ್ಯಾಜ್ಯವನ್ನು ಹಾಕಲಾಗಿದೆ. ಬಸ್‌ ನಿಲ್ದಾಣದುದ್ದಕ್ಕೂಹೂವಿನ ಅಂಗಡಿ, ಹಣ್ಣಿನ ಅಂಗಡಿ, ಚಹಾ ಅಂಗಡಿಗಳಿವೆ. ಚರಂಡಿಯನ್ನು ಕಿತ್ತು ಕೆಲಸ ಆರಂಭಿಸಿದ್ದರಿಂದ ರಸ್ತೆ ಪಕ್ಕದಲ್ಲಿದ್ದ ಎಲ್ಲಅಂಗಡಿಗಳನ್ನು ತ್ಯಾಜ್ಯ ಹಾಕಿದ ಸ್ಥಳದಲ್ಲೇ ಆರಂಭಿಸಲಾಗಿದೆ. ಹಣ್ಣಿನ ಅಂಗಡಿಗಳಂತೂಇದೇ ತ್ಯಾಜ್ಯದಲ್ಲೇ ವಹಿವಾಟು ನಡೆಸಿವೆ. ಇದೆಲ್ಲವೂ ಕಾಮಗಾರಿ ನಿರ್ವಹಿಸುವಗುತ್ತಿಗೆದಾರ, ಅಧಿ ಕಾರಿಗಳಿಗೆ ಗೊತ್ತಿದ್ದರೂಸುಮ್ಮನೆ ಇರುವುದು ಅಚ್ಚರಿ ಮೂಡಿಸಿದೆ.

ಹೆದ್ದಾರಿ ಅಧಿಕಾರಿಗಳು ತೆಗಿಬೇಕಂತೆ:ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಹೆದ್ದಾರಿ ಇಕ್ಕೆಲಗಳಲ್ಲಿಚರಂಡಿ ಕಾಮಗಾರಿ ನಡೆದಿದೆ. ಅವರೇ ಈ ಚರಂಡಿಯಿಂದ ತ್ಯಾಜ್ಯವನ್ನು ತೆರವು ಮಾಡಿಚರಂಡಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಆದರೆ ಅವರೇ ಇದನ್ನು ತೆರವು ಮಾಡಿಲ್ಲ.ತ್ಯಾಜ್ಯ ಒಣಗಲು ಬಿಟ್ಟಿದ್ದಾರೆ ಎನ್ನುವಮಾತುಗಳು ಕೇಳಿ  ಬರುತ್ತಿವೆ.

ನಗರಸಭೆಯ ಜವಾಬ್ದಾರಿ ಇಲ್ಲವೇ?: ಮಾತೆತ್ತಿದರೆ ನಗರವನ್ನು ಸ್ವಚ್ಛವಾಗಿಡಲಾಗುವುದು. ಯಾವುದೇ ರೋಗ, ರುಜಿನಗಳು ಬಾರದಂತೆ ಜನರುಜಾಗೃತಿ ವಹಿಸಬೇಕುಎಂದು ಮಿನಿ ಟಿಪ್ಪರ್‌ ಗಳಲ್ಲಿ ಮೈಕ್‌ ಮೂಲಕ ಜಾಗೃತಿಮೂಡಿಸುವನಗರಸಭೆಯು ಈ ವಿಷಯದಲ್ಲಿಸುಮ್ಮನಾಗಿದೆ. ಇನ್ನಾದರೂ ಕೂಡಲೇ ತ್ಯಾಜ್ಯವನ್ನು ಬೇರೆಡೆ ಸಾಗಾಟ ಮಾಡಿ ನಗರದ ಸೌಂದರ್ಯ ಕಾಪಾಡಬೇಕಿದೆ. ಇದರಿಂದ ರೋಗಗಳು ಹೆಚ್ಚುತ್ತವೆಯೇವಿನಃ ನಿಯಂತ್ರಣಕ್ಕೆ ಬರಲ್ಲ. ನಗರಸಭೆ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ಸ್ವಚ್ಛತೆ ಕಾಪಾಡಬೇಕಿದೆ.

Advertisement

 

-ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next