Advertisement
ಅಕ್ಷಯ ತದಿಗೆ ದಿನ ಚಿನ್ನ ಖರೀದಿಸುವುದರಿಂದ ಸಂಪತ್ತು ವೃದ್ಧಿಸುತ್ತದೆ ಎಂಬ ನಂಬಿಕೆ ಬಹತೇಕ ಜನರಲ್ಲಿದ್ದು, ಅಂದು ಗುಲಗಂಜಿಯಷ್ಟಾದರೂ ಚಿನ್ನ ಖರೀದಿಸಬೇಕು ಎಂಬ ಸಂಪ್ರದಾಯದಿಂದ ಮಂಗಳವಾರ ನಗರದಲ್ಲಿನ ಎಲ್ಲಾ ಚಿನ್ನಾಭರಣ ಅಂಗಡಿಗಳು ಹೌಸ್‌ಫುಲ್ ಆಗಿದ್ದವು. ಬೆಳಗ್ಗೆಯಿಂದಲೇ ಜನರು ಚಿನ್ನ ಕೊಳ್ಳಲು ಮುಗಿಬಿದ್ದಿದ್ದರು.
ಮೈಸೂರು: ಅಕ್ಷಯ ತೃತೀಯ ಪ್ರಯುಕ್ತ ಚಿನ್ನ ಖರೀದಿಸುವ ಸಾರ್ವಜನಿಕರಿಗೆ ಪ್ರಜ್ಞಾವಂತ ನಾಗರಿಕ ವೇದಿಕೆ ವತಿಯಿಂದ ಅರಿವು ಮೂಡಿಸಲಾಯಿತು.
Related Articles
Advertisement
ಈ ಸಂದರ್ಭ ಮಾತನಾಡಿದ ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ, ಅಕ್ಷಯ ತೃತೀಯದಂದು ಚಿನ್ನ ಖರೀದಿಸುವುದು ಸಾಮಾನ್ಯ. ಆದರೆ ಅತಿಯಾಗಿ, ಅಗತ್ಯಕ್ಕಿಂತ ಹೆಚ್ಚು ಚಿನ್ನ ಖರೀದಿಸದೇ ಮಿತವಾಗಿ ಖರೀದಿಸಿ. ಹೆಚ್ಚು ಪ್ರದರ್ಶನವಾಗುವಂತೆ ಚಿನ್ನಭಾರಣ ಧರಿಸಬೇಡಿ.
ಬೆಳಗ್ಗೆ ವಾಯುವಿಹಾರದ ಸಂದರ್ಭದಲ್ಲಿ ಚಿನ್ನವನ್ನು ಮನೆಯಲ್ಲಿಟ್ಟು ವಾಯು ವಿಹಾರಕ್ಕೆ ತೆರಳಿ. ಹೆಚ್ಚು ಚಿನ್ನಾಭರಣ ಧರಿಸಿ ಕಳ್ಳರಿಗೆ ಅವಕಾಶ ಮಾಡಿ ಕೊಡಬೇಡಿ. ಮಹಿಳೆಯರು ಒಂಟಿಯಾಗಿ ಹೆಚ್ಚು ಓಡಾಡಬೇಡಿ. ಸರಗಳ್ಳರನ್ನು ಹಿಡಿಯಲು ಪೊಲೀಸರೊಂದಿಗೆ ಸಹಕರಿಸಿ ಎಂದರು.
ಅಂಕಣಕಾರ ಗುಬ್ಬಿಗೂಡು ರಮೇಶ್, ನಗರಪಾಲಿಕೆ ಮಾಜಿ ಸದಸ್ಯ ಎಂ.ಡಿ.ಪಾರ್ಥಸಾರಥಿ, ಬಿಎಸ್‌ಪಿ ನಗರಾಧ್ಯಕ್ಷ ಬಸವರಾಜು, ಬಿಜೆಪಿ ಮಹಿಳಾ ಕಾರ್ಯದರ್ಶಿ ಲಕ್ಷ್ಮೀದೇವಿ ಹಾಗೂ ವೇದಿಕೆ ಪ್ರಧಾನ ಕಾರ್ಯದರ್ಶಿ ಹರೀಶ್ ನಾಯ್ಡು, ಕುಮಾರ್ ಗೌಡ, ಸಂದೇಶ್ ಪವಾರ್, ಟಿ.ಎಸ್.ಅರುಣ್, ರಂಗನಾಥ್, ಜಯಸಿಂಹ, ಪ್ರಮೋದ್ ಗೌಡ, ಗುರುಪ್ರಸಾದ್, ಶ್ರೀನಿವಾಸ್, ಸುರೇಂದ್ರ, ಮಂಜು, ರವಿ ಮತ್ತಿತರರು ಹಾಜರಿದ್ದರು.