Advertisement

ಜನ ಅಭಿವೃದ್ಧಿ ಬೆಂಬಲಿಸುತ್ತಾರೆ: ಹೆಬ್ಬಾಳ್ಕರ್‌

12:28 PM Jun 28, 2020 | Suhan S |

ಬೆಳಗಾವಿ: ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಭಾಷಾ ರಾಜಕಾರಣ ನಡೆಯುವುದಿಲ್ಲ. ಇಲ್ಲೇನಿದ್ದರೂ ಅಭಿವೃದ್ಧಿಯ ಅಜೆಂಡಾ. ಕ್ಷೇತ್ರದ ಜನರು ಅತ್ಯಂತ ಚಾಣಾಕ್ಷರಿದ್ದು, ಕೆಲಸ ಮಾಡುವವರನ್ನು ಪ್ರೋತ್ಸಾಹಿಸುತ್ತಾರೆ ಎಂದು ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

Advertisement

ಬೆಳಗಾವಿ ಕೃಷಿ ಉತ್ಪನ್ನ ಸಮಿತಿ ವ್ಯಾಪಾರಸ್ಥರು ಶನಿವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕಾಂಗ್ರೆಸ್‌ನ ಹಿರಿಯ ಸದಸ್ಯರಾಗಿರುವ ಯುವರಾಜ ಕದಂ ಅವರು ಎಪಿಎಂಸಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಸೇರಿದಂತೆ ಅನೇಕರು ಇದಕ್ಕೆ ಸಹಕಾರ ನೀಡಿದ್ದಾರೆ ಎಂದರು.

ನನ್ನ ಅಧಿಕಾರದ ಅವಧಿ ಇನ್ನೂ ಮೂರು ವರ್ಷವಿದೆ, ಈ ಸಮಯದಲ್ಲಿ ನಾನು ಯಾವ ರೀತಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ ಎನ್ನುವದನ್ನು ನೀವೇ ನೋಡಿ. ನಾನು ಹಿಡಿದ ಟ್ರ್ಯಾಕ್‌ನ್ನು ಯಾರು ಬಂದರೂ ಬಿಡುವದಿಲ್ಲ, ಅದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು ಎಂದು ಹೆಬ್ಬಾಳಕರ ಹೇಳಿದರು.

ಈಗಿನ ಎಪಿಎಂಸಿ ಸಚಿವರು ಈ ಮೊದಲು ಕಾಂಗ್ರೆಸ್‌ ಪಕ್ಷದಲ್ಲೇ ಇದ್ದವರು. ನನಗೂ ಆತ್ಮೀಯರು. ಎಪಿಎಂಸಿಗೆ ಆಗಬೇಕಾದ ಕೆಲಸಗಳನ್ನು ಅವರನ್ನೇ ಕರೆತಂದು ಮಾಡಿಸೋಣ. ಎಲ್ಲ ರೀತಿಯಿಂದಲೂ ಎಪಿಎಂಸಿ ಅಭಿವೃದ್ಧಿ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಲಕ್ಷ್ಮೀ ಹೆಬ್ಟಾಳಕರ್‌ ಭರವಸೆ ನೀಡಿದರು.

ನಾನು ಯಾವುದೇ ಕೆಲಸವನ್ನು ಹಿಡಿದರೆ ಬಿಡುವ ಪ್ರಶ್ನೆಯೇ ಇಲ್ಲ. ನನ್ನ ಅಭಿವೃದ್ಧಿಯ ಕೆಲಸ ನೋಡಿಕೊಂಡು ನನ್ನನ್ನು ಬೆಂಬಲಿಸಿದ್ದಾರೆ. ನನ್ನ ಶಾಸಕ ನಿಧಿಯ 10 ಲಕ್ಷ ರೂಪಾಯಿ ಅನುದಾನದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲಾಗುವುದು. ನಾವೆಲ್ಲ ಸೇರಿ ರಾಜಕಾರಣವನ್ನು ಬದಿಗಿಟ್ಟು ಎಪಿಎಂಸಿ ಮೂಲಕ ರೈತರ ಅಭಿವೃದ್ಧಿಗೆ ಎಲ್ಲ ರೀತಿಯ ಕೆಲಸ ಮಾಡೋಣ. ರಾಜಕಾರಣವನ್ನು ಚುನಾವಣೆ ಬಂದಾಗ ನೋಡಿಕೊಳ್ಳೋಣ. ಈಗ ನಮ್ಮ ಗುರಿ ಏನಿದ್ದರೂ ಅಭಿವೃದ್ಧಿ ಎಂದು ಹೆಬ್ಟಾಳಕರ ಹೇಳಿದರು.

Advertisement

ಕಾರ್ಯಕ್ರಮದಲ್ಲಿ ಎಪಿಎಂಸಿ ಅಧ್ಯಕ್ಷ ಯುವರಾಜ್‌ ಕದಂ, ಸುರೇಶ್‌ ಚೌಗುಲೆ, ಎನ್‌.ಎ.ಜಂಗ್ರೂಚೆ, ಚೇತನ್‌ ಖಾಂಡೇಕರ್‌, ಅನ್ನು ಕಟಾಂಬಳೆ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next