ಹೊಸಪೇಟೆ: ಬಿಸಿಲಿನ ತಾಪಕ್ಕೆ ಜನರು ತತ್ತರಿಸಿ ಹೋಗಿದ್ದು, ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಲು ಗ್ರಾಮೀಣ ಜನತೆ ಕೆರೆ,ಬಾವಿ, ನದಿ ಕಡೆಗೆ ಮುಖ ಮಾಡಿದರೆ, ನಗರ ವಾಸಿಗಳು ಈಜು ಕೊಳ ಕಡೆ ಮುಖ ಮಾಡಿದ್ದಾರೆ.
ಜಿಲ್ಲೆಯಲ್ಲಿ 41 ಡಿಗ್ರಿ ಸೆಲ್ಸಿಯಸ್ ಇದ್ದು, ಅದು ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಮಧ್ಯಾಹ್ನ ಸಮಯ ಹೇಗೆ ಕಳೆಯಬೇಕು ಎಂದು ಜನರಿಗೆ ತಲೆನೋವಾಗಿದೆ. ಹೀಗಾಗಿ ಹಲವರು ಈಜುಕೊಳದತ್ತ ಜನರು ಮುಖ ಮಾಡುತ್ತಿದ್ದಾರೆ.
ಹೆಚ್ಚಿದ ಈಜುಗಾರರ ಸಂಖ್ಯೆ: ಈಜುಕೊಳದಲ್ಲಿ 440 ಜನರು ಕಾಯಂ ಸದಸ್ಯತ್ವವನ್ನು ಪಡೆದುಕೊಂಡಿದ್ದಾರೆ. ಅಲ್ಲದೇ, ಒಂದು ತಾಸಿಗೆ ಶುಲ್ಕ ನೀಡಿ ದಿನಪ್ರತಿ 40 ಜನರು ಬರುತ್ತಿದ್ದಾರೆ. ಈಜುಕೊಳದ ಸದಸ್ಯತ್ವ ಪಡೆಯಲು 16 ವರ್ಷದ ವಯಸ್ಸಿನ ಒಳಗಿನವರಿಗೆ 700 ರೂ. ಹಾಗೂ 16 ವರ್ಷ ವಯಸ್ಸಿನ ಮೇಲ್ಪಟ್ಟವರಿಗೆ 900 ರೂ. ನಿಗದಿ ಮಾಡಲಾಗಿದೆ. 15 ದಿನ ಬೇಸಿಗೆ ಶಿಬಿರ ನಡೆಸಲಾಗುತ್ತಿದ್ದು, ಅದರಕ್ಕೆ 16 ವರ್ಷದ ವಯಸ್ಸಿನ ಒಳಗಿನವರಿಗೆ 750 ರೂ. ಹಾಗೂ 16 ವರ್ಷದ ಮೇಲ್ಪಟ್ಟ ವಯಸ್ಸಿನವರಿಗೆ 900 ರೂ. ನಿಗದಿ ಮಾಡಲಾಗಿದೆ. ಬೆಳಗ್ಗೆ 6 ರಿಂದ 11 ಗಂಟೆವರೆಗೆ ಹಾಗೂ ಮಧ್ಯಾಹ್ನ 1 ಗಂಟೆಯಿಂದ 7 ವರೆಗೆ ಈಜುಕೊಳ ಲಭ್ಯವಿರುತ್ತದೆ. ಮಹಿಳೆಯರಿಗೆ ಮತ್ತು ಪುರುಷರಿಗೆ ಬೇರೆ ಬೇರೆ ಸಮಯ ನಿಗದಿ ಮಾಡಲಾಗಿದೆ. ಗಂಟೆಗೆ ದೊಡ್ಡವರಿಗೆ 100ರೂ., ಸಣ್ಣವರಿಗೆ 50 ರೂ. ನಿಗದಿಪಡಿಸಲಾಗಿದೆ.
ಬಿಕೋ ಎನ್ನುವ ಈಜುಕೊಳ: ಈಜುಕೊಳದ ನಿರ್ವಹಣೆಗೆ ಯುವಜನ ಮತ್ತು ಕ್ರೀಡಾ ಇಲಾಖೆಯಿಂದ ಪ್ರತ್ಯೇಕ ಅನುದಾವಿಲ್ಲ. ಈಜುಗಾರರಿಂದ ಬರುವ ಶುಲ್ಕ ದಿಂದಲೇ ನಿರ್ವಹಿಸಲಾಗುತ್ತದೆ. ಆದರೆ, ಮಳೆಗಾಲ ಹಾಗೂ ಚಳಿಗಾಲದ ಸಂದರ್ಭದಲ್ಲಿ ಜನರು ಈಜುಕೊಳದ ಸುಳಿವುದಿಲ್ಲ. ಹಾಗಾಗಿ ಆದಾಯದ ಬರುವುದಿಲ್ಲ. ಬೇಸಿಗೆ ಬಂದ ಹಣದಿಂದ ಚಳಿಗಾಲ ಹಾಗೂ ಮಳೆಗಾಲದಲ್ಲಿ ಸಂದರ್ಭದಲ್ಲಿ ಬಳಸಿಕೊಳ್ಳಲಾಗುತ್ತದೆ.
ಚಳಿಗಾಲದಲ್ಲಿ ಈಜುಕೊಳ ಬಿಕೋ ಎನ್ನುತ್ತಿರುತ್ತದೆ. ಬೇಸಿಗೆ ಬಂದರೆ ಸಾಕು ಈಜುಕೊಳ ಜನರಿಂದ ತುಂಬಿ ತುಳುಕುತ್ತದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಹೆಚ್ಚು ಜನರು ಈಜುಕೊಳಕ್ಕೆ ಲಗ್ಗೆ ಇಡುತ್ತಿದ್ದಾರೆ. ಬಿಸಿಲಿನ ತಾಪ ಹೋಗಲಾಡಿಸಲು ಈಜುಕೊಳಕ್ಕೆ ಬರುತ್ತಿದ್ದಾರೆ ಎಂದು ಈಜುಕೊಳದ ತರಬೇತಿದಾರ ವ್ಯವಸ್ಥಾಪಕ ಬಿಡ್ಡಪ್ಪ ಹೇಳಿದರು.
ಈಗಾಗಲೇ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳು ಮುಗಿದಿದೆ. ಮಕ್ಕಳು ರಜಾ ಮೂಡಲ್ಲಿ ಇದ್ದಾರೆ. ದಿನದಿಂದ ದಿನಕ್ಕೆ ಬರುವ ಸಂಖ್ಯೆ ಏರುತ್ತಿದ್ದೆ. ಎರಡು ಬ್ಯಾಚ್‌ಗಳು ಮಾಡಿದ್ದರು. ಸದಸ್ಯರ ಸಂಖ್ಯೆ ಹೆಚ್ಚಿದೆ.
ಈಜುಕೊಳದಲ್ಲಿ ಈಜಾಡುವುದರಿಂದ ದೇಹ ತಂಪಾಗುತ್ತದೆ. ಅಲ್ಲದೇ, ಈ ಬಾರಿ ಬಿಸಿಲಿನ ಪ್ರಖರತೆ ಹೆಚ್ಚಾಗಿದೆ. ಹಾಗಾಗಿ ಅನಿವಾರ್ಯವಾಗಿ ಈಜುಕೊಳದತ್ತ ಧಾವಿಸಬೇಕಾಗಿದೆ. ಈಜುಕೊಳದಲ್ಲಿ ಈಜಿದರೆ ಮೈ ಹಗುರಾದ ಅನುಭವ ಉಂಟಾಗುತ್ತದೆ.
•ರಾಘವೇಂದ್ರ, ಪ್ರಕಾಶ್, ನವೀನ್,
ನಿವಾಸಿಗಳು.