Advertisement

ಜನರಿಗೆ ತಪ್ಪದ ಆಧಾರ್‌ ತಿದ್ದುಪಡಿಯ ತಲೆನೋವು

06:37 AM Jun 11, 2019 | Lakshmi GovindaRaj |

ನೆಲಮಂಗಲ: ದೇಶದಲ್ಲಿ ಆಧಾರ್‌ಕ್ರಾಂತಿಯಿಂದ ಸರ್ಕಾರದ ಕೆಲವು ಯೋಜನೆಗಳು ಹಾಗೂ ಪಡಿತರ ಚೀಟಿಗಳಿಗೆ ಆಧಾರ್‌ ಕಡ್ಡಾಯವಾಗಿದೆ. ಆದರೆ ಆಧಾರ್‌ ತಿದ್ದುಪಡಿಗೆ ಸೂಕ್ತ ಕೇಂದ್ರಗಳಿಲ್ಲದೆ ಜನರು ಪ್ರತಿನಿತ್ಯ ಸಮಸ್ಯೆ ಎದುರಿಸುತ್ತಿರುವುದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

Advertisement

ಪಟ್ಟಣದ ತಾಲೂಕು ಕಚೇರಿಯ ಆವರಣದಲ್ಲಿ ಬೆಳಗ್ಗೆ 5.30 ರಿಂದಲೇ 300ಕ್ಕೂ ಹೆಚ್ಚು ಜನರು ಆಧಾರ್‌ ತಿದ್ದುಪಡಿಗೆ ಸಾಲುಗಟ್ಟಿ ನಿಂತಿದ್ದರು, ಆದರೆ ತಾಲೂಕು ಕಚೇರಿಯಲ್ಲಿ ದಿನಕ್ಕೆ 25 ರಿಂದ 30 ಆಧಾರ್‌ ತಿದ್ದುಪಡಿ ಮಾಡಲು ಅವಕಾಶವಿದ್ದು, ಅಧಿಕಾರಿಗಳು 40 ಟೋಕನ್‌ಗಳನ್ನು ನೀಡುತಿದ್ದಾರೆ. 250ಕ್ಕೂ ಹೆಚ್ಚು ಜನರು ಟೋಕನ್‌ ಸಿಗದೇ ವಾಪಸ್‌ ಹೋಗುತ್ತಿದ್ದು, ಕೆಲಸಗಾರರಿಗೆ, ರೈತರಿಗೆ, ವಿದ್ಯಾರ್ಥಿಗಳಿಗೆ, ನೌಕರರಿಗೆ ಬಹಳಷ್ಟು ತೊಂದರೆಯಾಗುತ್ತಿದೆ ಪರ್ಯಾಯ ವ್ಯವಸ್ಥೆಮಾಡಬೇಕು ಎಂದು ಅಧಿಕಾರಿಗಳಿಗೆ ಸಾರ್ವಜನಿಕರು ಮನವಿ ಮಾಡಿದರು.

ಬಗೆಹರಿಯದ ಸಮಸ್ಯೆ: ತಾಲೂಕಿನಲ್ಲಿ ಆಧಾರ್‌ ತಿದ್ದುಪಡಿ ಸಮಸ್ಯೆಜನರಿಗೆ ಪ್ರತಿನಿತ್ಯದ ತಲೆನೋವಾಗಿದ್ದು, ತಾಲೂಕು ಕಚೇರಿಗೆ ಜನರು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನ ಅಧಿಕಾರಿಗಳು ಗ್ರಾಮ ಪಂಚಾಯತಿ ಹಾಗೂ ನಾಡಕಚೇರಿಯಲ್ಲಿ ಆಧಾರ್‌ ತಿದ್ದುಪಡಿ ಮಾಡಲಾಗುತ್ತದೆ ಎಂಬ ಭರವಸೆಯನ್ನು ನೀಡುತ್ತಿದ್ದಾರೆ ವಿನಃ ತಿದ್ದುಪಡಿ ಕೇಂದ್ರಗಳಿಗೆ ಚಾಲನೆ ನೀಡಿಲ್ಲ, ಇದರಿಂದ ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಗಿದ್ದು ಬಗೆಹರಿಯದ ಸಮಸ್ಯೆಯಾಗಿದೆ.

ಅಕ್ರೋಶ: ಪಟ್ಟಣದ ತಾಲೂಕು ಕಚೇರಿಯ ಒಂದು ಕೇಂದ್ರದಲ್ಲಿ ಮಾತ್ರ ಆಧಾರ್‌ ತಿದ್ದುಪಡಿಗೆ ಅವಕಾಶವಿದ್ದು, ದಿನಕ್ಕೆ 25 ರಿಂದ 30 ಆಧಾರ್‌ ಮಾಡಬಹುದು, ಉಳಿದ ಜನರು ವಾಪಸ್‌ ತೆರಳಬೇಕು, ಶಾಲಾ ಮಕ್ಕಳು, ಕೆಲಸಗಾರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಅಧಿಕಾರಿಗಳು ನಮ್ಮಗೆ ಸ್ಪಂದನೆ ನೀಡುತ್ತಿಲ್ಲ ಎಂದು ಆಧಾರ್‌ ತಿದ್ದುಪಡಿಗೆ ಆಗಮಿಸಿದ್ದ ನೂರಾರು ಜನರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಹಶೀಲ್ದಾರ್‌ ಕೆ.ಎನ್‌.ರಾಜಶೇಖರ್‌ ಮಾತನಾಡಿ, ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿ ಹಾಗೂ ನಾಡ ಕಚೇರಿಗಳಲ್ಲಿ ಆಧಾರ್‌ ತಿದ್ದುಪಡಿ ಕೇಂದ್ರಗಳನ್ನು ತೆರೆಯಲಾಗುವುದು, ಸಾರ್ವಜನಿಕರಿಗೆ ತಕ್ಷಣ ಆಧಾರ್‌ ತಿದ್ದುಪಡಿ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದರು.

Advertisement

ಆಧಾರ್‌ತಿದ್ದುಪಡಿಗೆ ಬಂದಿದ್ದ ಸ್ಥಳೀಯರಾದ ಮಂಜುಳಾ ಮಾತನಾಡಿ, ಆಧಾರ್‌ ತಿದ್ದುಪಡಿ ಮಾಡಿಸಲು ತಿಂಗಳಿನಿಂದ ಪರದಾಡುತ್ತಿದ್ದೇನೆ. ಗ್ರಾಮ ಪಂಚಾಯತಿ ಹಾಗೂ ನಾಡಕಚೇರಿಗಳಲ್ಲಿ ಆಧಾರ್‌ ತಿದ್ದುಪಡಿ ಮಾಡದೇ ಅಧಿಕಾರಿಗಳು ಸುಳ್ಳು ಭರವಸೆ ನೀಡುತಿದ್ದಾರೆ. ತಾಲೂಕು ಕಚೇರಿಯಲ್ಲಿ ಟೋಕನ್‌ ಸಿಗದೇ ನಾಲ್ಕು ದಿನಗಳಿಂದ ಅಲೆದಾಡುತಿದ್ದೇನೆ, ಇದರಿಂದ ಶಾಲೆ ಮಕ್ಕಳಿಗೆ ಬಹಳಷ್ಟು ತೊಂದರೆಯಾಗಿದೆ ತಕ್ಷಣ ಸಮಸ್ಯೆ ಬಗೆಹರಿಸುವಲ್ಲಿ ಅಧಿಕಾರಿಗಳು ಗಮನಹರಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next