ಚನ್ನಗಿರಿ: ಬಡವರು ದೀನ ದಲಿತರು, ದೇಶದ ಪ್ರತಿಯೊಬ್ಬ ಪ್ರಜೆಗೂ ಶಕ್ತಿಪೂರ್ವಕವಾಗಿರುವ ಸಂವಿಧಾನವನ್ನು ಬದಲಾಯಿಸುತ್ತೆವೇ, ಸುಟ್ಟು ಹಾಕುತ್ತೇವೆ? ಎನ್ನುವ ಕೋಮುವಾದಿ ಪಕ್ಷದ ರಾಜಕಾರಣಿಗಳನ್ನು ಧಿಕ್ಕರಿಸಿ ದೇಶದಲ್ಲಿ ಕೋಮುವಾದಕ್ಕೆ ಆಸ್ಪದ ನೀಡದಂತೆ ಜನತೆ ಎಚ್ಚರವಹಿಸಬೇಕು ಎಂದು ತಾಲೂಕು ಅಹಿಂದ ಸಂಘಟನೆಯ ಮುಖಂಡ ಸಿ. ಸಿದ್ದಪ್ಪ ಕರೆ ನೀಡಿದರು.
ಪಟ್ಟಣದ ದಲಿತ ಸಂಘರ್ಷ ಸಮಿತಿ ಕಚೇರಿಯ ಸಭಾಂಗಣದಲ್ಲಿ, ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಹಮ್ಮಿಕೊಂಡಿದ. ಸಂವಿಧಾನ 73ನೇ ಸಮರ್ಪಣಾ ದಿನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನದ ಆಶಯಗಳನ್ನು ವಾಸ್ತವಗೊಳಿಸುವ ಜವಾಬ್ದಾರಿ ಪಂಚಾಯತ್‌ನಿಂದ ಹಿಡಿದು ಸಂಸತ್ತಿನ ವರೆಗಿನ ರಾಜಕೀಯ ಸಂರಚನೆಯಲ್ಲಿನ ಎಲ್ಲ ಹಂತಗಳ ಚುನಾಯಿತ ಪ್ರತಿನಿಧಿಗಳದ್ದಾಗಿದೆ. ಅದರೆ ಇತ್ತೀಚೆಗೆ ಕೆಲ ರಾಜಕಾರಣಿಗಳು ಸಂವಿಧಾನ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದು ಅದನ್ನು ಲಘುವಾಗಿ ತೆಗೆದು ಕೊಳ್ಳುದೇ ಅಂತಹ ರಾಜಕಾರಣಿಗಳಿಗೆ ತಕ್ಕ ಉತ್ತರವನ್ನು ನೀಡ ಬೇಕು ಸಂವಿಧಾನದ ಶಕ್ತಿ ಏನೆಂದು ತೋರಿಸಬೇಕು ಎಂದರು. ಆ ನಿಟ್ಟಿನಲ್ಲಿ ಶ್ರೀಸಾಮಾನ್ಯರಲ್ಲಿ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಿ ಸಂವಿಧಾನದ ಆಶಯಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಇವುಗಳನ್ನು ಕಾರ್ಯಗತಗೊಳಿಸಬೇಕು. ಸಾರ್ವಜನಿಕ ಮಟ್ಟದಲ್ಲಿ ಪ್ರತಿಯೊಬ್ಬ ಸಾರ್ವಜನಿಕ ಪ್ರತಿನಿಧಿಯ ಸಂವಿಧಾನಿಕ ಅಶಯಗಳೊಂದಿಗೆ ಮುನ್ನಡೆದರೆ ಪ್ರಗತಿಶೀಲಾ ದೇಶ ನಮ್ಮದಾಗಲಿದೆ ಎಂದರು.
ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಚಿತ್ರಲಿಂಗಪ್ಪ ಮಾತನಾಡಿ. ನಾವು ಸಂವಿಧಾನದ ನಿಜವಾದ ಮೌಲ್ಯವನ್ನು, ಆಂತರ್ಯವನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಸಂವಿಧಾನದ ಆಶಯಗಳನ್ನು ನಿಜ ಸ್ಫೂರ್ತಿಯೊಂದಿಗೆ ಜಾರಿಗೆ ತರಬೇಕು. ನಾವೆಲ್ಲರೂ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಬಗ್ಗೆ ಮಾತನಾಡುತ್ತೇವೆ. ನಾವು ಅದನ್ನು ಮತ್ತೆ ಮತ್ತೆ ಪುನರುತ್ಛರಿಸಿದರೆ ಸಾಲದು. ಅದನ್ನು ನಮ್ಮ ದಿನನಿತ್ಯದ ಬದುಕಲ್ಲಿ, ನಮ್ಮ ಆಡಳಿತದಲ್ಲಿ ಜಾರಿಗೆ ತರಬೇಕು ಮತ್ತು ಸಾಕಾರಗೊಳಿಸಬೇಕು ಎಂದರು.
ತಾಲೂಕು ಅಹಿಂದ ಸಂಘಟನೆ ಅಧ್ಯಕ್ಷ ಎ.ಸಿ ಚಂದ್ರು, ಬುಳ್ಳುಸಾಗರದ ನಾಗರಾಜ್, ರಮೇಶ್, ರುದ್ರೇಶ್ ಹಾಗೂ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.