Advertisement

ದೇಶಾದ್ಯಂತ ರಂಜಾನ್‌ ಸಡಗರ : ಉರ್ದುವಿನಲ್ಲಿ ಪ್ರಧಾನಿ ಶುಭಾಶಯ

09:37 AM Jun 06, 2019 | Vishnu Das |

ಹೊಸದಿಲ್ಲಿ : ದೇಶಾದ್ಯಂದಬುಧವಾರ ಮುಸ್ಲಿಂ ಬಾಂಧವರ ಪವಿತ್ರ ಹಬ್ಬ ರಂಜಾನ್‌ ಆಚರಿಸಲಾಗುತ್ತಿದೆ.

Advertisement

ದೇಶದೆಲ್ಲೆಡೆ ಮುಸ್ಲಿಂ ಬಾಂಧವರು ಸಾಮೂಹಿತ ನಮಾಜ್‌ ಮಾಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

ಇಸ್ಲಾಂ ಕ್ಯಾಲೆಂಡರ್ ಅನ್ವಯ 9ನೇ ತಿಂಗಳು ರಂಜಾನ್ ಆಚರಿಸಲಾಗುತ್ತದೆ. ಈ ತಿಂಗಳಿನಲ್ಲಿ ಮುಸ್ಲಿಮರು ತಿಂಗಳಕಾಲ ಉಪವಾಸ ವ್ರತ ಆಚರಿಸುತ್ತಾರೆ.ರಂಜಾನ್‌ ದಿನದಂದು ಉಪವಾಸ ವೃತ ಕೊನೆಗೊಳಿಸಿ ಸಂಭ್ರದಿಂದ ಹಬ್ಬ ಆಚರಿಸುತ್ತಾರೆ.

ರಂಜಾನ್‌ಗೆ ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌ ,ಪ್ರಧಾನಿ ನರೇಂದ್ರ ಮೋದಿ ಸೇರಿ ಗಣ್ಯರು ಶುಭಾಶಯಗಳನ್ನು ಕೋರಿದ್ದಾರೆ.

ಈ ವಿಶೇಷ ದಿನ ನಮ್ಮ ಸಮಾಜದಲ್ಲಿ ಸೌಹಾರ್ದಯುತ ಸಹಾನುಭೂತಿ ಮತ್ತು ಶಾಂತಿಯ ಉತ್ಸಾಹವನ್ನು ತುಂಬಲಿ. ಎಲ್ಲರಿಗೂ ಸಂತೋಷದಿಂದಿರಲು ಆಶೀರ್ವದಿಸಲಿ ಎಂದು ಪ್ರಧಾನಿ ಟ್ವೀಟ್‌ ಮಾಡಿದ್ದಾರೆ. ಉರ್ದುವಿನಲ್ಲೂ ಗ್ರೀಟಿಂಗ್ಸ್‌ ಪೋಸ್ಟ್‌ ಮಾಡಿದ್ದಾರೆ.

Advertisement

ಈದ್‌ ಉಲ್‌ ಫಿತ್ರ ನಮ್ಮಲ್ಲಿ ದಾನ,ಭ್ರಾತೃತ್ವ,ಸಹಾನುಭೂತಿ ಮತ್ತು ನಮ್ಮ ನಂಬಿಕೆಯನ್ನು ಬಲಪಡಿಸುತ್ತದೆ ಎಂದು ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next