Advertisement

ಢಾಣಕಶಿರೂರ ಗ್ರಾಮದ ಜನ ಸದ್ಯ ನಿರಾಳ

11:28 AM May 09, 2020 | Suhan S |

ಬಾಗಲಕೋಟೆ: ಒಂದೇ ಗ್ರಾಮದಲ್ಲಿ ಬರೋಬ್ಬರಿ 16 ಜನರಿಗೆ ಕೋವಿಡ್ ವೈರಸ್‌ ದೃಢಪಟ್ಟ ಢಾಣಕಶಿರೂರ ಗ್ರಾಮಸ್ಥರು ಸದ್ಯ ನಿರಾಳರಾಗಿದ್ದು, ಈ ಗ್ರಾಮದಿಂದ ಕಳುಹಿಸಿದ್ದ ಒಟ್ಟು 266 ಸ್ಯಾಂಪಲ್‌ಗ‌ಳೂ ನೆಗೆಟಿಟ್‌ ಬಂದಿವೆ.

Advertisement

ಗ್ರಾಮದ 23 ವರ್ಷದ ಐದು ತಿಂಗಳ ಗರ್ಭಿಣಿ ಮಹಿಳೆ ಪಿ-607ಗೆ ಮೇ 3ರಂದು ಸೋಂಕು ಖಚಿತಪಟ್ಟಿತ್ತು. ಅದಾದ ಬಳಿಕ ಗ್ರಾಮದಲ್ಲಿ ಬರೋಬ್ಬರಿ 16 ಜನರಿಗೆ ಸೋಂಕು ವಿಸ್ತರಿಸಿದೆ. ಮಹಿಳೆಯೊಂದಿಗೆ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಂಪರ್ಕ ಹೊಂದಿದ್ದ ಒಟ್ಟು 184 ಜನ ಹಾಗೂ ಬಾದಾಮಿ ಪಟ್ಟಣದ 18 ವರ್ಷದ ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಜತೆ‌ಗೆ ಸಂಪರ್ಕ ಹೊಂದಿದ್ದ 40 ಜನರು ಒಳಗೊಂಡ ಒಟ್ಟು ಜಿಲ್ಲೆಯಿಂದ ಕಳುಹಿಸಿದ್ದ 269 ಸ್ಯಾಂಪಲ್‌ಗ‌ಳಲ್ಲಿ 266 ಸ್ಯಾಂಪಗಳು ನೆಗೆಟಿವ್‌ ಬಂದಿವೆ.

47 ಸ್ಯಾಂಪಲ್‌ ಪರೀಕ್ಷೆಗೆ: ಜಿಲ್ಲೆಯಿಂದ ಕಳುಹಿಸಿದ್ದ 269 ಸ್ಯಾಂಪಲ್‌ಗ‌ಳಲ್ಲಿ 266 ವರದಿ ನೆಗೆಟಿವ್‌ ಬಂದಿದ್ದು, ಬಾಕಿ ಇರುವ 3 ಹಾಗೂ ಗುರುವಾರ ಮತ್ತೆ 47 ಸೇರಿದಂತೆ ಒಟ್ಟು 50 ಸ್ಯಾಂಪಲ್‌ಗ‌ಳ ವರದಿ ಬರಬೇಕಿದೆ. ಜಿಲ್ಲೆಯಿಂದ ಈ ವರೆಗೆ 4068 ಜನರ ಸ್ಯಾಂಪಲ್‌ ಕಳುಹಿಸಿದ್ದು, ಅದರಲ್ಲಿ 3962 ಸ್ಯಾಂಪಲ್‌ ನೆಗೆಟಿವ್‌, 51 ಪಾಜಿಟಿವ್‌ ಬಂದಿವೆ. 1876 ಜನರು ಪ್ರತ್ಯೇಕವಾಗಿ ನಿಗಾದಲ್ಲಿದ್ದು, 18 ಜನರು ಕೋವಿಡ್ ಮುಕ್ತರಾಗಿ ಬಿಡುಗಡೆಗೊಂಡಿದ್ದಾರೆ. ಅಲ್ಲದೇ 198 ಜನರು 28 ದಿನಗಳ ಹೋಂ ಕ್ವಾರಂಟೈನ್‌ ಅವಧಿ  ಪೂರ್ಣಗೊಳಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ| ರಾಜೇಂದ್ರ ತಿಳಿಸಿದ್ದಾರೆ.

ಕಾರ್ಮಿಕರಿಗೆ ಕ್ವಾರಂಟೈನ್‌ ಕಡ್ಡಾಯ: ಮಹಾರಾಷ್ಟ್ರದ ಪುಣೆ, ಮುಂಬೈನಿಂದ ಕಾರ್ಮಿಕರು ಮರಳಿ ಬರುತ್ತಿದ್ದು, ಅವರನ್ನು ಕಡ್ಡಾಯವಾಗಿ ಆರೋಗ್ಯ ತಪಾಸಣೆ ನಡೆಸಿ, ಹೋಂ ಕ್ವಾರಂಟೈನ್‌ ನಡೆಸಲಾಗುತ್ತಿದೆ ಎಂದು ಜಿಪಂ ಸಿಇಒ ಗಂಗೂಬಾಯಿ ಮಾನಕರ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದ ಪುಣೆ ಮತ್ತು ಮುಂಬಯಿ ನಂತಹ ನಗರಗಳಲ್ಲಿ ಹೆಚ್ಚಾಗಿ ಕೋವಿಡ್‌ ಪ್ರಕರಣಗಳು ಕಂಡುಬಂದಿದ್ದು, ಈ ನಗರಗಳಿಂದ ಆಗಮಿಸಿದ 90 ಜನರನ್ನು ಪ್ರತ್ಯೇಕ ವಸತಿ ನಿಲಯಗಳಲ್ಲಿ ಕ್ವಾರಂಟೈನ್‌ ಮಾಡಲಾಗಿದೆ ಎಂದರು.

Advertisement

ಕಾಮಗಾರಿ ಆರಂಭಿಸಲ್ಲ: ಜಿಲ್ಲೆಯ ವಿವಿಧ ಟೆಂಡರ್‌ಗಳಿಗೆ ವರ್ಕ್‌ ಆರ್ಡರ್‌ ನೀಡಿದರೂ ಸಹ ಆರಂಭಿಸದಿರಲು ಹಣಕಾಸು ಇಲಾಖೆಯಿಂದ ಆದೇಶ ಬಂದಿರುತ್ತದೆ. ಕೇವಲ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳನ್ನು ಮಾತ್ರ ಕೈಗೊಳ್ಳಲಾಗುತ್ತಿದ್ದು, ಇದರ ಮೂಲಕ ಕಾರ್ಮಿಕರಿಗೆ ಕೂಲಿ ನೀಡಲಾಗುತ್ತದೆ. ಕಡುಬಡವರಿಗೆ ಪಡಿತರ ಹಾಗೂ ಸಂಘ ಸಂಸ್ಥೆಗಳಿಂದ ಸಹಾಯಧನ ನೀಡಲಾಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next