Advertisement

ಗೋಪಾಲ ಭಂಡಾರಿಯ ಕಣ್ಣೀರು, ಸಾವಿಗೆ ಕಾರಣವಾದ ಸಂಗತಿ ಜನ ಮರೆತಿಲ್ಲ: ಮಣಿರಾಜ್‌ ಶೆಟ್ಟಿ

01:21 PM May 08, 2023 | Team Udayavani |

ಕಾರ್ಕಳ: ಕಾರ್ಕಳ ಕಾಂಗ್ರೆಸ್‌ ಅಭ್ಯರ್ಥಿ ಕಳೆದ ಚುನಾವಣೆಯಲ್ಲಿ ಹತಾಶಯಿಂದ ಸಜ್ಜನ ಗೋಪಾಲ ಭಂಡಾರಿಯವರ ಶವಯಾತ್ರೆ ನಡೆಸಿ ಭಂಡಾರಿ ಹಾಗೂ ಅವರ ಕುಟುಂಬಸ್ಥರು ಕಣ್ಣೀರು ಹಾಕುವಂತೆ ಮಾಡಿದರು. ಅವರ ಸಾವಿಗೂ ಅವರೇ ಕಾರಣರಾದರು. ಈಗ ವಿ.ಸುನಿಲ್‌ಕುಮಾರ್‌ ಅವರ ತೇಜೋವಧೆಗೆ ಮುಂದಾಗಿದ್ದಾರೆ. ಕಣ್ಣಿರು ಹಾಕಿಸುವುದು, ತೇಜೋವಧೆ ನಡೆಸುವುದೇ ಕಾಂಗ್ರೆಸ್‌ಅಭ್ಯರ್ಥಿಯ ಸಂಸ್ಕೃತಿಯಾಗಿದೆ. ಅವರಂದು ನಡೆದುಕೊಂಡ ಅಮಾನವೀಯ ವರ್ತನೆಯನ್ನು ಹೆಬ್ರಿ ಸಹಿತ ಕ್ಷೇತ್ರದ ಜನ ಮರೆತಿಲ್ಲ ಎಂದು ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್‌ ಶೆಟ್ಟಿ ಹೇಳಿದರು.

Advertisement

ಜನ‌ರಲ್ಲಿ ಅಭ್ಯರ್ಥಿ ಬಗ್ಗೆ ವೇದನೆಯಿದೆ
ಹೆಬ್ರಿ ಪರಿಸರದಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸುನಿಲ್‌ಕುಮಾರ್‌ ಪರ ಮತಯಾಚಿಸಿ ಮಾತನಾಡಿದ ಅವರು 2018ರ ಚುನಾವಣೆಯಲ್ಲಿ ಇದೇ ಕಾಂಗ್ರೆಸ್‌ ಅಭ್ಯರ್ಥಿ ಯಾವ ರೀತಿ ನಡೆದುಕೊಂಡಿದ್ದರು ಎಂದು ಎಲ್ಲರಿಗೆ ಗೊತ್ತು. ಅವರ ಮನಸ್ಸಿನ ಕಲ್ಮಶ ಅಂದು ಶವಯಾತ್ರೆ ನಡೆಸುವ ಮೂಲಕ ಬಹಿರಂಗಗೊಂಡಿತ್ತು. ಅಷ್ಟೊಂದು ಕೀಳು ಮಟ್ಟಕ್ಕೆ ಇಳಿದಿದ್ದರು. ಹೆಬ್ರಿ ಭಾಗದ ಜನ ಇದನ್ನು ಯಾವತ್ತಿಗೂ ಮರೆಯಲು ಸಾಧ್ಯವಿಲ್ಲ. ಕಾರ್ಕಳ ಕ್ಷೇತ್ರದ ಪ್ರತಿಯೊಬ್ಬರ ಮನಸ್ಸಿನಲ್ಲಿ ಇಂದಿಗೂ ಈ ಬಗ್ಗೆ ವೇದನೆಯಿದೆ.

ಇಂತಹ ಸಂಸ್ಕೃತಿಯವರು ಬೇಕೆ?
ಸಜ್ಜನರಂತೆ ಪ್ರದರ್ಶಿಸಿ ಒಳಗೆ ಕಲ್ಮಶ ತುಂಬಿಕೊಂಡು ಬೆಂಬಲಿಗರ ಮೂಲಕ ವಯಕ್ತಿಕ ನಿಂದನೆ, ತೇಜೋವಧೆ ಮಾಡುವ ಮನಸ್ತಿತಿ ಅವರದ್ದು. ಅಂದು ಗೋಪಾಲ ಭಂಡಾರಿಯವರನ್ನು ಆ ರೀತಿ ನಡೆಸಿಕೊಂಡವರು ಇಂದು ಕಾರ್ಕಳ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಾರಣರಾಗಿ, ಕಾರ್ಕಳ ಕ್ಷೇತ್ರದ ಹೆಸರನ್ನು ವಿಶ್ವಮಟ್ಟಕ್ಕೆ ಏರಿಸಿದವರ ವಿರುದ್ಧವೆ ತನ್ನ ಬೆಂಬಲಿಗರ ಮೂಲಕ ತೇಜೋವಧೆಗೆ ಇಳಿದಿದ್ದಾರೆ. ಪ್ರತಿ ಚುನಾವಣೆ ವೇಳೆಗೆ ಸಮಯಕ್ಕೆ ತಕ್ಕಂತೆ ಅವಕಾಶ ರಾಜಕಾರಣಿಯಾಗಿ ಸಿಂಪಥಿ ಗಿಟ್ಟಿಸಿಕೊಳ್ಳುವ ಇಂತಹ ಸಂಸ್ಕೃತಿಯ ಅಭ್ಯರ್ಥಿ ಕಾರ್ಕಳಕ್ಕೆ ಬೇಕೆ? ಎಂದು ಪ್ರಶ್ನಿಸಿದರು. ಇಂತಹ ಮನಸ್ತಿತಿಯ ಅಭ್ಯರ್ಥಿಯನ್ನು ಕ್ಷೇತ್ರದ ಮತದಾರರು ದೂರವಿಟ್ಟು ಎಲ್ಲ ಜನರನ್ನು ಪ್ರೀತಿಸುವ, ಅಭಿವೃದ್ಧಿಯತ್ತ ಕ್ಷೇತ್ರವನ್ನು ಮುನ್ನಡೆಸುವ ವಿ.ಸುನಿಲ್‌ ಅವರನ್ನು ಗೆಲ್ಲಿಸುವ ಶಪಥ ಮಾಡಬೇಕು ಎಂದು ಕರೆ ನಿಡಿದರು. ಸುಧಾಕರ ಹೆಗ್ಡೆ, ಶಿವಪುರ ಸುರೇಶ್‌ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಮಾರಿಯಮ್ಮ ದೇವರ ಮೇಲೆ ಇವರಿಗ್ಯಾಕೆ ಕಣ್ಣು?
ಕಾರ್ಕಳ ನಗರದ ಅಧಿದೇವತೆ ಶ್ರೀ ಮಾರಿಯಮ್ಮ ದೇವರ ಭವ್ಯ ದೇಗುಲ ನಿರ್ಮಾಣದ ಬಗ್ಗೆಯೂ ಕಾರ್ಕಳ ಕಾಂಗ್ರೆಸ್ಸಿನ ದೃಷ್ಟಿ ಬಿದ್ದಿದೆ. ದೇವಸ್ಥಾನದ ಜೀರ್ಣೋದ್ಧಾರ, ಬ್ರಹ್ಮಕಲಶದ ಬಗ್ಗೆ ಟೀಕೆಗಳನ್ನು ಮಾಡುತ್ತ ಧಾರ್ಮಿಕ ನಂಬಿಕೆಯನ್ನೆ ಪ್ರಶ್ನಿಸುವ ಮಟ್ಟಕ್ಕೆ ಕಾಂಗ್ರೆಸ್ಸಿಗರ ರಾಜಕೀಯ ಮನಸ್ತಿತಿ ಬೆಳೆದಿದೆ.

ದೇವಸ್ಥಾನ ನಿರ್ಮಾಣ, ಉತ್ಸವಗಳ ಬಗ್ಗೆಯೇ ಟೀಕಿಸುವ ಕಾಂಗ್ರೆಸ್ಸಿನ ಬಗ್ಗೆ ಕ್ಷೇತ್ರದ ಜನ ಎಚ್ಚರ ವಹಿಸಬೇಕು. ಇವರನ್ನು ಬೆಂಬಲಿಸಿದರೆ ಹಿಂದೂ ಧಾರ್ಮಿಕ ಕೇಂದ್ರಗÙಳಿಗೆ ಅಧೋಗತಿ ಬರಬಹುದು. ಹಿಂದೂ ಧಾರ್ಮಿಕ ಕೇಂದ್ರಗಳ ಮೇಲೆ ಇವರಿಗ್ಯಾಕೆ ಇಷ್ಟೊಂದು ಕಣ್ಣು ಎಂದು ಅವರು ಪ್ರಶ್ನಿಸಿರುವ ಅವರು ಈ ಬಗ್ಗೆ ಸಮಸ್ತ ಕ್ಷೇತ್ರದ ಜನತೆ ಎಚ್ಚರವಹಿಸಿ. ಇಂತಹವರನ್ನು ಬೆಂಬಲಿಸದೆ ದೂರವಿರಿಸಬೇಕು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next