Advertisement

ಒಡೆಯಲು ಬಯಸುವವರಿಗೆ ಬೆಂಬಲಿಸಲು ಗುಜರಾತ್‌ನ ಜನರು ಸಿದ್ಧರಿಲ್ಲ: ಪ್ರಧಾನಿ ಮೋದಿ

04:35 PM Nov 28, 2022 | Team Udayavani |

ಭಾವನಗರ : ಗುಜರಾತ್ ಜನರ ವಿಶ್ವಾಸವನ್ನು ಮರಳಿ ಪಡೆಯಲು ಕಾಂಗ್ರೆಸ್ ತನ್ನ ಒಡೆದು ಆಳುವ ನೀತಿಯನ್ನು ಬಿಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಭಾವನಗರ ಜಿಲ್ಲೆಯ ಪಲಿಟಾನಾ ಪಟ್ಟಣದಲ್ಲಿ ಸೋಮವಾರ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ನರ್ಮದಾ ಬಚಾವೋ ಆಂದೋಲನ ಕಾರ್ಯಕರ್ತೆ ಮೇಧಾ ಪಾಟ್ಕರ್ ಭಾಗವಹಿಸಿದ್ದಕ್ಕಾಗಿ ಮತ್ತೆ ಕಾಂಗ್ರೆಸ್ ವಿರುದ್ದ ಕಿಡಿ ಕಾರಿ, ಸೌರಾಷ್ಟ್ರದ ಒಣಗಿರುವ ಪ್ರದೇಶಕ್ಕೆ ನರ್ಮದಾ ನೀರು ತಲುಪುವುದನ್ನು ಅಡ್ಡಿಪಡಿಸಲು ಕಾಂಗ್ರೆಸ್ ಪ್ರಯತ್ನಿಸಿತ್ತು 40 ವರ್ಷಗಳ ಕಾಲ ಸರ್ದಾರ್ ಸರೋವರ ಅಣೆಕಟ್ಟು ಯೋಜನೆಯನ್ನು ಸ್ಥಗಿತಗೊಳಿಸಲು ಕಾರಣವಾದ ವ್ಯಕ್ತಿಯ ಜೊತೆ ನಡೆದುಕೊಳ್ಳುತ್ತಿರುವವರನ್ನು ಗುಜರಾತ್ ಜನತೆ ಎಂದಿಗೂ ಕ್ಷಮಿಸುವುದಿಲ್ಲ ಎಂದರು.

ಗುಜರಾತ್ ಜನರು ಕಾಂಗ್ರೆಸ್ ಅನ್ನು ತಿರಸ್ಕರಿಸಿದ್ದಾರೆ ಏಕೆಂದರೆ ಒಂದು ಪ್ರದೇಶ ಅಥವಾ ಸಮುದಾಯದ ಜನರನ್ನು ಇನ್ನೊಂದು ಪ್ರದೇಶ ಅಥವಾ ಸಮುದಾಯದ ವಿರುದ್ದ ಪ್ರಚೋದಿಸುವ ಪಕ್ಷದ ನೀತಿಯಿಂದಾಗಿ ರಾಜ್ಯವು ಸಾಕಷ್ಟು ನಷ್ಟವನ್ನು ಅನುಭವಿಸಿದೆ. ಭಾರತವನ್ನು ಒಡೆಯಲು ಬಯಸುವ ಅಂಶಗಳನ್ನು ಬೆಂಬಲಿಸುವವರಿಗೆ ಸಹಾಯ ಮಾಡಲು ಗುಜರಾತ್‌ನ ಜನರು ಸಿದ್ಧರಿಲ್ಲ ಎಂದು ಅವರು ಹೇಳಿದರು.

”ಒಡೆದು ಆಳುವುದು ಕಾಂಗ್ರೆಸ್ಸಿನ ಸಿದ್ಧಾಂತ. ಗುಜರಾತ್ ಪ್ರತ್ಯೇಕ ರಾಜ್ಯವಾಗುವ ಮೊದಲು, ಅದು ಗುಜರಾತಿಗಳು ಮತ್ತು ಮರಾಠಿಗಳನ್ನು ಪರಸ್ಪರ ವಿರುದ್ಧ ಹೋರಾಡುವಂತೆ ಮಾಡಿತು. ನಂತರ, ಕಾಂಗ್ರೆಸ್ ವಿವಿಧ ಜಾತಿಗಳು ಮತ್ತು ಸಮುದಾಯಗಳ ಜನರನ್ನು ಪರಸ್ಪರ ವಿರುದ್ಧ ಹೋರಾಡಲು ಪ್ರಚೋದಿಸಿತು. ಕಾಂಗ್ರೆಸ್‌ನ ಇಂತಹ ಪಾಪಕೃತ್ಯಗಳಿಂದ ಗುಜರಾತ್‌ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದೆ. ಗುಜರಾತ್‌ನ ಬುದ್ಧಿವಂತ ಜನರು ಕಾಂಗ್ರೆಸ್‌ನ ಈ ತಂತ್ರವನ್ನು ಅರ್ಥಮಾಡಿಕೊಂಡರು ಮತ್ತು ಅಂತಹ ವಿಭಜಕ ಶಕ್ತಿಗಳಿಗೆ ಬಾಗಿಲು ತೋರಿಸಲು ಒಗ್ಗೂಡಿದರು ಎಂದು ಪ್ರಧಾನಿ ಹೇಳಿದರು.

182 ಸದಸ್ಯ ಬಲದ ಗುಜರಾತ್ ವಿಧಾನಸಭೆಗೆ ಡಿಸೆಂಬರ್ 1 ಮತ್ತು 5 ರಂದು ಚುನಾವಣೆ ನಿಗದಿಯಾಗಿದ್ದು, ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next