Advertisement

ಬಿಹಾರದ ಜನರು ಜಗತ್ತಿಗೆ ಪ್ರಜಾಪ್ರಭುತ್ವದ ಪಾಠವನ್ನು ಕಲಿಸಿದ್ದಾರೆ: ಪ್ರಧಾನಿ ಮೋದಿ

07:54 AM Nov 11, 2020 | Mithun PG |

ಬಿಹಾರ: ಉತ್ತರಭಾರತದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿರುವ ಬಿಹಾರ ಮತ್ತೆ ಎನ್ ಡಿಎ ಪಾಲಾಗಿದ್ದು 125 ಸ್ಥಾನಗಳು ಲಭಿಸಿವೆ. ಈ ಕುರಿತು ಹರ್ಷ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ ಬಿಹಾರದ ಜನತೆಗೆ ಧನ್ಯವಾದ ತಿಳಿಸಿದ್ದಾರೆ.

Advertisement

ಬಿಹಾರದ ಜನರು ಜಗತ್ತಿಗೆ ಪ್ರಜಾಪ್ರಭುತ್ವದ ಪಾಠವನ್ನು ಕಲಿಸಿದ್ದಾರೆ. ಮಾತ್ರವಲ್ಲದೆ ಪ್ರಜಾಪ್ರಭುತ್ವವನ್ನು ಹೇಗೆ ಬಲಪಡಿಸಬೇಕು ಎಂಬುದನ್ನು ತಿಳಿಸಿದ್ದಾರೆ. ಬಿಹಾರದ ಬಡವರು, ಸೌಲಭ್ಯ ವಂಚಿತರು ಮತ್ತು ಮಹಿಳೆಯರು ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ, ತಮ್ಮ ನ್ಯಾಯಯುತ ನಿರ್ಧಾರವನ್ನು ಪ್ರಕಟಿಸಿದ್ದಾರೆ ಎಂದರು.

ಬಿಹಾರದ ಪ್ರತಿಯೊಬ್ಬ ಮತದಾರರು ತಾವು ಮಹತ್ವಾಕಾಂಕ್ಷೆಯವರು ಮತ್ತು ಅವರ ಏಕೈಕ ಆದ್ಯತೆಯೆಂದರೆ ಅಭಿವೃದ್ಧಿ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. 15 ವರ್ಷಗಳ ನಂತರವೂ ಎನ್‌ಡಿಎ ಗೆ ಜನತೆ ಆಶಿರ್ವಾದ ನೀಡಿರುವುದನ್ನು ಗಮನಿಸಿದರೇ ನಮ್ಮ ಆಡಳಿತ ಅವರಿಗೆ ತೃಪ್ತಿ ತಂದಿದೆ ಎಂದು  ತೋರಿಸುತ್ತದೆ. ಬಿಹಾರದ ಯುವಶಕ್ತಿ ಎನ್‌ಡಿಎಯ ಧ್ಯೇಯದಲ್ಲಿ ಹೆಚ್ಚಾಗಿ ನಂಬಿಕೆ ಇಟ್ಟಿದ್ದಾರೆ. ಇದು ನಮ್ಮ ಸರ್ಕಾರಕ್ಕೆ  ಮೊದಲಿಗಿಂತ ಹೆಚ್ಚು ಶ್ರಮಿಸಲು ಉತ್ತೇಜನ ನೀಡಿದೆ.

ಇದನ್ನೂ ಓದಿ: ಎನ್‌ಡಿಎಗೆ “ಬಿಹಾರ” : ಸರಳ ಬಹುಮತ ಸಾಧಿಸಿದ ನಿತೀಶ್‌ ನೇತೃತ್ವದ ಎನ್‌ಡಿಎ

ಬಿಹಾರದ ಸಹೋದರಿಯರು ಮತ್ತು ಹೆಣ್ಣುಮಕ್ಕಳು ಈ ಬಾರಿ ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದು, ಸ್ವಾವಲಂಬಿ ಬಿಹಾರದಲ್ಲಿ ತಮ್ಮ ಪಾತ್ರ ಎಷ್ಟು ಮಹತ್ವದ್ದು ಎಂಬುದನ್ನು ಸಾಬೀತುಪಡಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಮಹಿಳಾ ಶಕ್ತಿಗೆ ಹೊಸ ವಿಶ್ವಾಸವನ್ನು ತುಂಬಲು ಸರ್ಕಾರ ಶ್ರಮಿಸುತ್ತಿದೆ.  ಈ ವಿಶ್ವಾಸವು ಬಿಹಾರವನ್ನು ಮುನ್ನಡೆಸಲು ನಮಗೆ ಬಲವನ್ನು ನೀಡುತ್ತದೆ.

Advertisement

ಬಿಹಾರದ ಗ್ರಾಮ-ಬಡವರು, ರೈತ-ಕಾರ್ಮಿಕರು, ವ್ಯಾಪಾರಿ, ಅಂಗಡಿಯವರು, ಪ್ರತಿ ಸಮುದಾಯವು ಎನ್‌ಡಿಎಯ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಭಾ ವಿಶ್ವಾಸ್’ ಎಂಬ ಕೇಂದ್ರ ಮಂತ್ರದ ಮೇಲೆ ನಂಬಿಕೆ ಇಟ್ಟಿದೆ. ಪ್ರತಿಯೊಬ್ಬ ನಾಗರಿಕನಿಗೂ ನಾನು ಭರವಸೆ ನೀಡಲು ಬಯಸುತ್ತೇನೆ. ಪ್ರತಿಯೊಬ್ಬ ವ್ಯಕ್ತಿಯ ಸಮತೋಲಿತ ಅಭಿವೃದ್ಧಿಗೆ ನಾವು ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:  5ನೇ ಐಪಿಎಲ್‌ ಟ್ರೋಫಿಗೆ ಮುತ್ತಿಕ್ಕಿದ ಮುಂಬೈ

Advertisement

Udayavani is now on Telegram. Click here to join our channel and stay updated with the latest news.

Next