Advertisement

ಮಾಸ್ಕ್ ಇಲ್ಲದೇ ಓಡಾಡಿದರೆ ಅಪಾಯ ಖಚಿತ

02:49 PM Sep 27, 2020 | Suhan S |

ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಕೋವಿಡ್ ಸೋಂಕು ಅಂತರ್ಗಾಮಿಯಾಗಿ ಸಮುದಾಯಕ್ಕೆ ಹರಡುತ್ತಾ ಸಾಗಿದ್ದರೂ ಜನರು ಸುರಕ್ಷತಾ ಕ್ರಮಗಳನ್ನು ಪಾಲಿಸುತ್ತಿಲ್ಲ. ಸದ್ಯಕ್ಕೆ ಕೊರೊನಾ ತಡೆಗೆ ಮಾಸ್ಕ್ ಒಂದೇ ಮದ್ದು ಎಂದು ಆರೋಗ್ಯಾಧಿಕಾರಿಗಳು ಎಚ್ಚರಿಕೆ ನೀಡುತ್ತಿದ್ದರೂ ಜನರು ನಿರ್ಲಕ್ಷ್ಯವಹಿಸುತ್ತಿದ್ದಾರೆ. ಮಾಸ್ಕ್ ಧರಿಸುತ್ತಿದ್ದರೂ ಅದನ್ನು ಬಾಯಿ, ಮೂಗು ಮಚ್ಚುವಂತೆ ಹಾಕಿಕೊಳ್ಳುತ್ತಿಲ್ಲ. ಕುತ್ತಿಗೆಯಲ್ಲಿ ನೇತು ಬಿದ್ದಿರುತ್ತದೆ. ಭಾರೀ ಪ್ರಮಾಣದಲ್ಲಿ ಸೋಂಕು ಹರಡಿದರೆ ಅದಕ್ಕೆ ತಕ್ಕಷ್ಟು ಹಾಸಿಗೆಗಳು, ವೆಂಟಿಲೇಟರ್‌ಗಳು, ಐಸಿಯು ಬೆಡ್‌ಗಳು ಲಭ್ಯವಿಲ್ಲ, ಜತೆಗೆ ವೈದ್ಯಕೀಯ ಸಿಬ್ಬಂದಿ ಕೊರತೆ ಕೂಡ ಇದೆ. ಹೀಗಾಗಿ ಸೋಂಕಿನ ಸಂಖ್ಯೆ ಏರಿಕೆಯಾದರೆ ಅಪಾಯ ತಪ್ಪಿದಲ್ಲ. ಈ ಕಾರಣ ಮೂಗು, ಬಾಯಿ ಮುಚ್ಚುವಂತೆ ಮಾಸ್ಕ್ ಧರಿಸುವ ಮೂಲಕ ಕೋವಿಡ್ ದಿಂದ ಪಾರಾಗಬೇಕಿದೆ.

Advertisement

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್‌ನಿಂದ ಪ್ರತಿದಿನ ಸಾವುಗಳು ಸಂಭವಿಸುತ್ತಲೇ ಇವೆ. ಸೋಂಕಿತರ ಸಂಖ್ಯೆ ಹೆಚ್ಚಾಗಿ ಕೋವಿಡ್‌ ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆ ಉಂಟಾಗುವ ಹಂತಕ್ಕೆ ಬಂದಿದೆ. ಆದರೆ, ಜನರು ಮಾತ್ರ ಕೋವಿಡ್‌ ಬಗ್ಗೆ ಯಾವುದೇ ಮುಂಜಾಗ್ರತೆ ವಹಿಸುತ್ತಿಲ್ಲ.

ಕಳೆದ 15 ದಿನಗಳಿಂದ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಸೆ.7ರಿಂದ ಸೆ.21ರವರೆಗೆ ಜಿಲ್ಲೆಯಲ್ಲಿ ಕೋವಿಡ್‌ನಿಂದ 21 ಮಂದಿ ಮೃತಪಟ್ಟಿದ್ದಾರೆ. ಪ್ರತಿನಿತ್ಯ ಜಿಲ್ಲೆಯಲ್ಲಿ ಕೋವಿಡ್‌ನಿಂದ ಒಂದು, ಎರಡು ಅಥವಾ ಮೂರು ಸಾವು ಸಂಭವಿಸುತ್ತಲೇ ಇವೆ. ಭೌತಿಕ ಅಂತರ ಇಲ್ಲವೇ ಇಲ್ಲ: ಸಾರ್ವಜನಿಕರಲ್ಲಿ ಈ ಬಗ್ಗೆ ಯಾವುದೇ ಆತಂಕವೂ ಇಲ್ಲ. ಕೋವಿಡ್‌ ಇಲ್ಲದ ಸಂದರ್ಭದಲ್ಲಿ ಹೇಗಿದ್ದರೋ ಈಗಲೂ ಹಾಗೇ ವರ್ತಿಸುತ್ತಿದ್ದಾರೆ. ಬ್ಯಾಂಕ್‌ ಗಳಿಗೆ ಹೋದರೆ ಮೊದಲಿನಿಂತೆ ಕಿಕ್ಕಿರಿದ ಸರದಿಯ ಸಾಲು. ಕನಿಷ್ಠ ಅಂತರ ಕಾಪಾಡಬೇಕೆಂಬ ಪರಿಜ್ಞಾನವಿಲ್ಲ. ಒಬ್ಬರ ಹಿಂದೆ ಒಬ್ಬರು ಅಂಟಿಕೊಂಡೇ ಕ್ಯೂನಲ್ಲಿ ನಿಂತಿರುತ್ತಾರೆ.

ಅಂಗಡಿ ಮುಂಗಟ್ಟುಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಭೌತಿಕ ಅಂತರವನ್ನೂ ಕಾಪಾಡುತ್ತಿಲ್ಲ. ಲಾಕ್‌ಡೌನ್‌ ಘೋಷಣೆಯಾದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಒಂದು ಪ್ರಕರಣವೂ ಇರಲಿಲ್ಲ. ಆಗ ಅಂಗಡಿ ಮುಂಗಟ್ಟುಗಳ ಮುಂದೆ ಬಾಕ್ಸ್‌ಗಳನ್ನು ಬರೆಯಲಾಗಿತ್ತು. ಜನರು ಆ ಬಾಕ್ಸ್‌ ಗಳಲ್ಲಿ ನಿಂತು ಅಂತರ ಕಾಪಾಡಿಕೊಂಡು ವಸ್ತುಗಳನ್ನು ಖರೀದಿ ಸುತ್ತಿದ್ದರು.ಈಗಜಿ ಲ್ಲೆಯಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ಮೂರೂವರೆ ಸಾವಿರ ದಾಟಿದೆ. ಆದರೂ ಜನರು ಜಾಗರೂಕತೆ ಅನುಸರಿಸುತ್ತಿಲ್ಲ. ಮಾಸ್ಕ್ ಧರಿಸುವುದಿಲ್ಲ: ಅನೇಕರು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುತ್ತಿಲ್ಲ. ಧರಿಸಿದರೂ ಮೂಗಿ ನಿಂದಕೆಳಗೆ ಇರುತ್ತದೆ.  ಇಲ್ಲವೇ ಕಳಪೆ ದರ್ಜೆಯ ಬಾಯಿ ಮಾತ್ರ ಮುಚ್ಚುವಷ್ಟು ಅಗಲದ ವಸ್ತ್ರವೊಂದನ್ನು ಕಟ್ಟಿಕೊಂಡಿರುತ್ತಾರೆ. ಮೆಡಿಕಲ್‌ ಸ್ಟೋರ್‌ಗಳಲ್ಲಿ, ಇಲ್ಲವೇ ಆನ್‌ಲೈನ್‌ ನಲ್ಲಿ 100 ರೂ.ಗೆ ಉತ್ತಮ ದರ್ಜೆಯ ಮಾಸ್ಕ್ಗಳು ಲಭ್ಯವಿದೆ. ಆದರೆ, ಜನರು ಅದನ್ನು ಖರೀದಿಸುವುದು ದುಡ್ಡುದಂಡ ಎಂದೇ ಭಾವಿಸಿದ್ದಾರೆ.

ರಾಜಕೀಯ ಪಕ್ಷಗಳ ಸಭೆಗಳಲ್ಲಿ ಜನಸಂದಣಿ: ರಾಜಕೀಯ ಪಕ್ಷಗಳ ಮುಖಂಡರಿಗೆ ಕೋವಿಡ್‌ ಹರಡುತ್ತಲೇ ಇದೆ. ಸಾವುಗಳು ಸಂಭವಿಸಿವೆ. ಆದರೂ ರಾಜಕೀಯ ಪಕ್ಷಗಳಿಗೆ ಇದರ ಬಗ್ಗೆ ದಿವ್ಯ ನಿರ್ಲಕ್ಷ್ಯವಿದೆ. ಜಿಲ್ಲೆಯಲ್ಲಿ ರಾಜಕೀಯ ಸಭೆಗಳು ನಡೆದರೆ ಮಾಮೂಲಿನಂತೆಯೇ ಕಾರ್ಯಕರ್ತರು ಸೇರುತ್ತಿದ್ದಾರೆ. ಅಂತರವಂತೂ ಇಲ್ಲವೇ ಇಲ್ಲ. ಪಕ್ಷವೊಂದರ ರಾಜ್ಯ ಉಪಾಧ್ಯಕ್ಷರ ಭೇಟಿ ಕಾರ್ಯಕ್ರಮ ನಗರದ ದೊಡ್ಡ ಕಲ್ಯಾಣ ಮಂಟಪದಲ್ಲಿ ನಡೆದು ಸಾವಿರಾರು ಮಂದಿ ಅದರಲ್ಲಿ ಪಾಲ್ಗೊಂಡಿದ್ದರು. ಯಾವುದೇ ಭೌತಿಕ ಅಂತರ ಪಾಲಿಸಿರಲಿಲ್ಲ. ಕೋವಿಡ್‌ ಹರಡದಂತೆ ಜನರ ತಪಾಸಣೆ ನಡೆಸುವ ಕಾರ್ಯಕ್ರಮವನ್ನು ಪಕ್ಷವೊಂದು ಹಮ್ಮಿಕೊಂಡಿದೆ. ಅನೇಕ ಊರುಗಳಲ್ಲಿ ಶಾಸಕರಿಂದಲೋ, ಪಕ್ಷದ ಮುಖಂಡರಿಂದಲೋ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ಯಾವುದೇ ಭೌತಿಕ ಅಂತರವನ್ನೂ ಕಾಪಾಡದೇ ಅಲ್ಲಿ ನೂರಾರು ಜನರು ಗುಂಪು ಗುಂಪಾಗಿ ಸೇರುತ್ತಿರುವುದು ಒಂದು ವಿಪರ್ಯಾಸದ ಸಂಗತಿ!

Advertisement

ತಿಂಗಳುವಾರು ಪ್ರಕರಣಗಳು : ಜೂನ್‌ 9ರಂದು ಜಿಲ್ಲೆಯಲ್ಲಿ ಮೊದಲ ಪ್ರಕರಣದೃಢಪಟ್ಟಿತು. ಆ ತಿಂಗಳು ಒಟ್ಟು33 ಪ್ರಕರಣಗಳು, ಜುಲೈನಲ್ಲಿ 636 ಪ್ರಕರಣಗಳು, ಆಗಸ್ಟ್‌ ನಲ್ಲಿ1,702 ಪ್ರಕರಣಗಳು ವರದಿಯಾಗಿವೆ. ಸೆ.12ರವರೆಗೆ567 ಪ್ರಕರಣಗಳು ದೃಢಪಟ್ಟಿವೆ. ಗ್ರಾಮಾಂತರ ಪ್ರದೇಶಗಳಿಂದ1,633 ಪ್ರಕರಣಗಳು ವರದಿಯಾಗಿದ್ದರೆ, ಪಟ್ಟಣಪ್ರದೇಶಗಳಿಂದ1,305 ಪ್ರಕರಣಗಳು ವರದಿಯಾಗಿವೆ. ಚಾಮರಾಜನಗರ ತಾಲೂಕಿನಿಂದ ಅತಿ ಹೆಚ್ಚು ಅಂದರೆ999 ಪ್ರಕರಣ ವರದಿಯಾಗಿದ್ದರೆ, ಹನೂರು ತಾಲೂಕಿನಿಂದ ಅತಿ ಕಡಿಮೆ, ಅಂದರೆ 156 ಪ್ರಕರಣಗಳು ವರದಿಯಾಗಿವೆ.ಕೊಳ್ಳೇಗಾಲ ತಾಲೂಕಿನಿಂದ789, ಗುಂಡ್ಲುಪೇಟೆ ತಾಲೂಕಿನಿಂದ694, ಯಳಂದೂರು ತಾಲೂಕಿನಿಂದ270, ಹೊರ ಜಿಲ್ಲೆಗಳ 30 ಪ್ರಕರಣ ವರದಿಯಾಗಿವೆ. ಸೋಂಕಿತರಲ್ಲಿ 21 ರಿಂದ 40 ವರ್ಷದವರೇ ಹೆಚ್ಚು.10 ವರ್ಷದೊಳಗಿನ126 ಜನರಿಗೆ,10 ರಿಂದ 20 ವರ್ಷದ295 ಜನರಿಗೆ,21 ರಿಂದ 40 ವರ್ಷದ1304 ಜನರಿಗೆ,41 ರಿಂದ 60 ವರ್ಷದ 760 ಜನರಿಗೆ,60 ವರ್ಷದ ಮೇಲಿನ453 ಜನರಿಗೆ ಸೋಂಕು ತಗುಲಿದೆ.

ಕೋವಿಡ್‌ ಬಾರದಂತೆ ಹೇಗಿರಬೇಕು ಎಂಬುದು ಎಲ್ಲರಿಗೂ ತಿಳಿದಿದೆ. ಎಲ್ಲವನ್ನೂ ಸರ್ಕಾರವೇ ಮಾಡಲಾಗುವುದಿಲ್ಲ. ಜನರ ಜವಾಬ್ದಾರಿಯೂ ಮುಖ್ಯ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಬಹುದು. ಆದರೆ ಸೋಂಕು ಹರಡದಂತೆ ತಡೆಯಲು ಜನರ ಸ್ವಯಂ ಜಾಗೃತಿ ಅಗತ್ಯ. ಮಾಸ್ಕ್ ಧರಿಸಬೇಕು. ಭೌತಿಕ ಅಂತರಕಾಪಾಡಬೇಕು. ಡಾ.ಎಂ.ಸಿ.ರವಿ, ಡಿಎಚ್‌ಒ

 

ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next