ಹುಬ್ಬಳ್ಳಿ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಲಾಕ್ ಡೌನ್ ವಿಧಿಸಿದ್ದರೂ, ಇಲ್ಲಿನ ಜನರು ಮತ್ತು ವ್ಯಾಪಾರಸ್ಥರು ಗಂಭೀರವಾಗಿ ಪರಿಗಣಿಸಿದಂತಿಲ್ಲ. ಕೋವಿಡ್ ಸೋಂಕು ಬಂದರೂ ನಮ್ಮ ವ್ಯಾಪಾರ ನಡೆಯಬೇಕು ಎನ್ನುವಂತಿದೆ ಇಲ್ಲಿನ ಪರಿಸ್ಥಿತಿ.
ಲಾಕ್ ಡೌನ್ ಇರುವ ಕಾರಣ ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ ಅವಕಾಶ ನೀಡಲಾಗಿದೆ. ಆದರೆ ಮಾರುಕಟ್ಟೆ, ರಸ್ತೆ ತುಂಬೆಲ್ಲಾ ಜನಸಾಗರವೇ ತುಂಬಿದೆ.
ಮಾಮೂಲಿ ದಿನದಂತೆ ರಸ್ತೆಯಲ್ಲಿ ವಾಹನಗಳು ಸಂಚಾರ ನಡೆಸುತ್ತಿದೆ. ಮಾರುಕಟ್ಟೆಗೆ ಜನರು ಮಾಮೂಲಿಗಿಂತ ಹೆಚ್ಚೇ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಇಲ್ಲಿನ ಜನತಾ ಬಜಾರ್ ನಲ್ಲಿ ಪೊಲೀಸರು ಜನರನ್ನು ಚದುರಿಸಿದರು.
ಅನಗತ್ಯವಾಗಿ ಹೊರಬಂದವರಿಗೆ, ಅಗತ್ಯವಲ್ಲದ ಅಂಗಡಿ ಮಾಲೀಕರಿಗೆ, ಸಾಮಾಜಿಕ ಅಂತರ ಮರೆತು ವ್ಯಾಪಾರ ಮಾಡುತ್ತಿದ್ದ ವ್ಯಾಪಾರಸ್ಥರಿಗೆ ಪೊಲೀಸರು ಲಾಠಿ ಏಟು ರುಚಿ ತೋರಿಸಿದರು.
ಅಂಗಡಿಗಳನ್ನ ಬಂದ್ ಮಾಡಿಸಿದ ಪೊಲೀಸರು. ಬ್ಯಾರಿಕೇಡ್ ಗಳನ್ನ ಹಾಕಿ ರಸ್ತೆಗಳನ್ನ ಬ್ಲಾಕ್ ಮಾಡಿದರು. ಪೊಲೀಸರು ಲಾಠಿ ಬೀಸುತ್ತಿದ್ದಂತೆ ಜನರು, ವ್ಯಾಪಾರಸ್ಥರು ಸ್ಥಳದಲ್ಲಿ ಚದುರಿದರು.