ಚನ್ನಪಟ್ಟಣ: ಹಿರಿಯರನ್ನು ಪೂಜ್ಯ ಭಾವನೆಯಿಂದ ಗೌರವಿಸಿದಾಗ ಮಾತ್ರ ನಾವು ಸಂಸ್ಕಾರವಂತರಾಗಲು ಸಾಧ್ಯ ಎಂದು ತಾಲೂಕು ವೈದ್ಯಾಧಿಕಾರಿ ಟಿ.ರಾಜು ತಿಳಿಸಿದರು.
ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯಕುಟುಂಬ ಕಲ್ಯಣ ಇಲಾಖೆ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಆಶ್ರಯದಲ್ಲಿ ಸಾರ್ವಜನಿಕ ಆಸ್ಪತ್ರೆ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಹೃದಯ ದಿನ ಹಾಗೂ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಉದ್ಘಾಟಿಸಿ ಕೋವಿಡ್ ಗೆದ್ದ ಹಿರಿಯರನ್ನು ಅಭಿನಂದಿಸಿ ಮಾತನಾಡಿದರು.
ಕೋವಿಡ್ ರೋಗದ ಬಗ್ಗೆ ಆತಂಕ, ಹಿಂಜರಿಕೆ ಹಾಗೂ ಭಯ ಪಡಬೇಕಾದ ಅವಶ್ಯಕತೆ ಇಲ್ಲ. ರೋಗದ ಲಕ್ಷಣ ಕಂಡು ಬಂದರೆ ಕೂಡಲೇ ಸ್ಥಳೀಯ ಆಸ್ಪತ್ರೆ ಅಥವಾ ತಾಲೂಕು ಕೇಂದ್ರದ ಆಸ್ಪತ್ರೆಗಳಲ್ಲಿ ಪರೀಕ್ಷೆಗೆ ಒಳಪಡಿಸಿಕೊಳ್ಳಬೇಕು. ನಿರ್ಲಕ್ಷ್ಯದಿಂದ ಅನಾವಶ್ಯಕ ಮಾತ್ರೆಗಳನ್ನು ಸೇವಿಸಿ ಆರೋಗ್ಯ ಹಾಳು ಮಾಡಿಕೊಳ್ಳಬಾರದು ಎಂದರು.
ಕೋವಿಡ್ ಕಾಣಿಸಿಕೊಂಡರೆ ಕ್ವಾರಂಟೈನ್‌ಗೆ ಗೊಳಗಾಗಬೇಕಾಗುತ್ತದೆ ಎಂದು ಎಷ್ಟೋ ಮಂದಿ ತಮ್ಮಲ್ಲಿ ಕೋವಿಡ್ ಪಾಸಿಟಿವ್ ಇದ್ದರೂ ಪರೀಕ್ಷೆಗೆ ಒಳಗಾಗದೇ ಕುಟುಂಬದವರಿಗೂ ವಿಸ್ತರಣೆ ಮಾಡಿ ಅನಾರೋಗ್ಯದಲ್ಲಿರುವವರ ಸಾವಿಗೆ ಪರೋಕ್ಷವಾಗಿ ಕಾರಣರಾಗುತ್ತಾರೆ. ಹೀಗಾಗಿ ಮೊದಲು ನಾವು ಜಾಗೃತರಾಗಬೇಕೆಂದರು.
ಸೂಕ್ತ ಚಿಕಿತ್ಸೆ ಪಡೆಯಿರಿ: ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಮಂಜೇಶ್‌ಕುಮಾರ್ ಮಾತನಾಡಿ, ಸರ್ಕಾರ ಕೋವಿಡ್ ರೋಗಿಗಳಿಗಾಗಿಯೇ ಪ್ರತ್ಯೇಕ ಚಿಕಿತ್ಸೆ ನೀಡಲಾಗುತ್ತಿದ್ದು, ಕೊರೊನಾ ರೋಗಕ್ಕಿಂತ ಭಯವೇ ನಿಮ್ಮನ್ನು ಮತ್ತಷ್ಟು ಅನಾರೋಗ್ಯಕ್ಕೆ ತಳ್ಳುವುದರಿಂದ ಭಯ ಬಿಟ್ಟು ವೈದ್ಯರ ಮಾರ್ಗದರ್ಶನದಲ್ಲಿ ಸೂಕ್ತ ಚಿಕಿತ್ಸೆ ಪಡೆಯಬೇಕೆಂದರು. ವೃದ್ಧರಿಗೆ ಪಾಸಿಟಿವ್ ಬಂದರೆ ಮುಗಿಯಿತು ಎಂಬುದು ಸತ್ಯಕ್ಕೆ ದೂರವಾದ ಮಾತು ಕೋವಿಡ್ ಪಾಸಿಟಿವ್ ಕಾಣಿಸಿಕೊಂಡ ವೃದ್ಧರಾದ ಎ.ವಿ.ಹಳ್ಳಿ ಸಿದ್ದೇಗೌಡ, ಮಾಕಳಿ ಚಿಕ್ಕೇಗೌಡ ತಿಮ್ಮಸಂದ್ರದ ರಾಮೇಗೌಡ ಎಂಬುವರು ಸೂಕ ¤ವಾದ ಚಿಕಿತ್ಸೆ ಪಡೆದು ಗುಣಮುಖರಾಗಿರುವುದೇ ಸಾಕ್ಷಿಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಎಚ್ಚರಿಕೆ ಅವಶ್ಯಕ: ಇದೇ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ವೃದ್ಧರು ಕೋವಿಡ್ಗೆ ಭಯ ಪಡುವ ಅವಶ್ಯಕತೆ ಇಲ್ಲಾ. ಆದರೆ ಎಚ್ಚರಿಕೆ ಅವಶ್ಯಕವಾಗಿದೆ. ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು ಆಗಾಗ್ಗೆಕೈಗಳನ್ನು ಸ್ವತ್ಛಗೊಳಿಸಿಕೊಳ್ಳಬೇಕು ಎಂದರು. ಕೋವಿಡ್ ಆಸ್ಪತ್ರೆಯಲ್ಲಿ ವೈದ್ಯಕೀಯ ವರ್ಗ ಎಲ್ಲರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಕೋವಿಡ್ ಭಯ ಬಿಡಬೇಕು. ಆರೋಗ್ಯದಲ್ಲಿ ವ್ಯತ್ಯಾಸವಾದರೆ ಮೊದಲು ವೈದ್ಯರಲ್ಲಿ ತಪಾಸಣೆಗೊಳಪಡಬೇಕು ಎಂದು ತಿಳಿಸಿದರು.
ಆರೋಗ್ಯಾಧಿಕಾರಿ ಡಾ.ವಿಜಯನರಸಿಂಹ, ಡಾ.ಜಗದೀಶ್,ಡಾ.ರಾಜ್‌ಕುಮಾರ್,ಡಾ.ಪುನೀತ್, ಡಾ.ಮನೋಜಂ, ಆಸ್ಪತ್ರೆಯ ಶುಶ್ರೂಷಕೀಯರಅಧಿಕ್ಷಕಿ ಸರಸ್ವತಿ ಆರೋಗ್ಯ ಸಹಾಯಕರಾದ ಪುಟ್ಟಸ್ವಾಮಿಗೌಡ, ಸ್ವಾಮಿ, ಸುಧಾನಾಯಕ್ ಇದ್ದರು.