Advertisement
ಶುದ್ಧ ಗಾಳಿಗಾಗಿ..ಹೊರಗಿನ ಕಲುಷಿತ ಗಾಳಿ ಮನೆಯೊಳಗೂ ಬಂದು ನೆಮ್ಮದಿಯ ಬದುಕನ್ನು ನಮಗೆ ಗೊತ್ತಿಲ್ಲದಂತೆಯೇ ಕಸಿದುಕೊಳ್ಳುತ್ತಿದೆ. ಶುದ್ಧ ಗಾಳಿಯ ಉಸಿರಾಟ ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ಇದು ವ್ಯಾಪಿಸಿದೆ. ಹೊಸದಿಲ್ಲಿಯ ವಾಯು ಮಾಲಿನ್ಯದ ಭೀಕರತೆ ಆಮ್ಲಜನಕವನ್ನು ಹಣಕೊಟ್ಟು ಕೊಂಡುಕೊಳ್ಳಬೇಕಾದ ಪರಿಸ್ಥಿತಿಯನ್ನು ತಂದೊಡ್ಡಿದೆ. ಮಂಗಳೂರಿನಲ್ಲಿಯೂ ಆಗುತ್ತಿರುವ ವಾಯು ಮಾಲಿನ್ಯದ ಪರಿಣಾಮ ಹೊಸದಿಲ್ಲಿಯ ವಾಸ್ತವತೆ ನಮಗೂ ಹತ್ತಿರದಲ್ಲೇ ಇದೆ ಎಂಬ ಎಚ್ಚರಿಕೆಯನ್ನು ತೆರೆದಿಟ್ಟಿದೆ. ಮನೆಯೊಳಗಾದರೂ ಶುದ್ಧ ಗಾಳಿ ಉಸಿರಾಡಬೇಕಾದರೆ ಏರ್ ಪ್ಯೂರಿಫೈಯರ್‌ಗಳ ಮೊರೆ ಹೊಕ್ಕಿದ್ದಾರೆ ಜನ.
ಹೆಚ್ಚಿದ ಹೊರಾಂಗಣ ಮಾಲಿನ್ಯವನ್ನು ತಡೆದು ಮನೆಯ ಕೋಣೆಯೊಳಗೆ ಶುದ್ಧ ಗಾಳಿ ನೀಡಲು ಏರ್ ಪ್ಯೂರಿಫೈಯರ್ ಸಹಾಯ ಮಾಡುತ್ತದೆ. ಪ್ಯೂರಿಫೈಯರ್‌ನ ಪರಿಣಾಮಕಾರಿ ಬಳಕೆಗೆ ಮನೆಯೊಳಗಿನ ಕಿಟಕಿ, ಬಾಗಿಲುಗಳನ್ನು ಮುಚ್ಚಿಡಬೇಕು. ಆದರೆ, ಅಡುಗೆ ಮಾಡುವಾಗ, ಮನೆಯೊಳಗಡೆ ಧೂಳಿದ್ದರೆ ಕಿಟಕಿ, ಬಾಗಿಲು ತೆರೆದಿಡಬೇಕು. ಮಾಲಿನ್ಯಕಾರಕಗಳನ್ನು ಫಿಲ್ಟರ್ ಮಾಡಿ ಶುದ್ಧಗಾಳಿ ಒದಗಿಸುತ್ತದೆ.
Related Articles
Advertisement
ಮಂಗಳೂರಿನಲ್ಲಿಲ್ಲ ಬಳಕೆಮಂಗಳೂರಿಗೆ ಸದ್ಯಕ್ಕೆ ಏರ್ ಪ್ಯೂರಿಫೈಯರ್ ಅವಶ್ಯವಿಲ್ಲವಾದರೂ, ಮುಂದಿನ ದಿನಗಳಲ್ಲಿ ಅಗತ್ಯ ಬೀಳಬಹುದು ಎಂಬುದು ವಿವಿಧ ಮಳಿಗೆಗಳ ಸಿಬಂದಿಯ ಅಭಿಪ್ರಾಯ. ಏರ್ ಪ್ಯೂರಿಫೈಯರ್ ಮಂಗಳೂರಿನಲ್ಲಿ ಬಳಕೆಯಲ್ಲಿಲ್ಲದ ಕಾರಣ ಮಂಗಳೂರಿನ ಮಾರುಕಟ್ಟೆಗೆ ಇನ್ನೂ ಕಾಲಿಟ್ಟಿಲ್ಲ. ಆದರೆ, ಹೊಸದಿಲ್ಲಿ, ಬೆಂಗಳೂರಿನಂತಹ ನಗರಗಳಲ್ಲಿ ಇದು ನಿಧಾನಕ್ಕೆ ಪರಿಚಯವಾಗುತ್ತಿದೆ. ಆನ್‌ಲೈನ್‌ನಲ್ಲಿ 2500 ರೂ. ಗಳಿಂದ ಹಿಡಿದು 25 ಸಾವಿರ ರೂ.ಗಳ ತನಕ ಬೆಲೆ ಬಾಳುವ ಏರ್ ಪ್ಯೂರಿಫೈಯರ್‌ಗಳಿವೆ. ಮಾರುಕಟ್ಟೆ ದರ ಸುಮಾರು 30 ಸಾವಿರ ರೂ. ಗಳಿಷ್ಟಿರಬಹುದು. ಸೂಕ್ತ ಆಫರ್
ಮಂಗಳೂರಿನಲ್ಲಿ ಏರ್ ಪ್ಯೂರಿಫೈಯರ್ ಬಳಕೆ ಇಲ್ಲ. ಬಳಕೆ ಇಲ್ಲ ಎನ್ನುವುದಕ್ಕಿಂತ ಅದರ ಆವಶ್ಯಕತೆ ಸದ್ಯದ ಮಟ್ಟಿಗೆ ಕಂಡು ಬಂದಿಲ್ಲ. ಹಾಗಾಗಿ ನಗರದಲ್ಲಿ ಏರ್ ಪ್ಯೂರಿಫೈಯರ್ ಖರೀದಿ-ಮಾರಾಟಕ್ಕೆ ಬೇಡಿಕೆ ಬಂದಿಲ್ಲ.
– ಅನಂತ, ಉದ್ಯಮಿ - ಧನ್ಯಾ ಬಾಳೆಕಜೆ