Advertisement
ಹೌದು, ಸ್ವತಃ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಯೇ ಇದನ್ನು ಒಪ್ಪಿಕೊಂಡಿದ್ದಾರೆ. ನಗರದಲ್ಲಿಶುಕ್ರವಾರ ಭಾರತೀಯ ವಾಯುಮಾಲಿನ್ಯ ನಿಯಂತ್ರಣ ಸಂಘದ (ಐಪಿಸಿಎ) ಆಶ್ರಯದಲ್ಲಿ ಆಯೋಜಿಸಿಲಾಗಿದ್ದ “ಏರ್
ಓ ಥಾನ್’ ಕಾರ್ಯಾಗಾರದಲ್ಲಿ ಮಾತನಾಡಿದ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಮಹೇಶ್
ತಿಮ್ಮಯ್ಯ, ಮಂಡಳಿಯು ನಗರದಲ್ಲಿ ಸ್ಥಾಪಿಸಿರುವ ಮಾಲಿನ್ಯ ಪರೀಕ್ಷಾ ಕೇಂದ್ರಗಳಲ್ಲಿ ವಾತಾವರಣದ ಸೂಕ್ಷ್ಮಧೂಳಿನ ಕಣಗಳ ಪ್ರಮಾಣ ಪಿಎಂ-10ರಿಂದ ಪಿಎಂ-2.5 ವರೆಗೂ ಪತ್ತೆ ಮಾಡುವ ಸೌಲಭ್ಯಗಳಿವೆ. ಅವುಗಳ ಸಹಾಯದಿಂದ ಪಿಎಂ-2.5 ಪ್ರಮಾಣದ ಧೂಳಿನ ಕಣಗಳನ್ನು ಪತ್ತೆ ಮಾಡಿ ಅಗತ್ಯ ಕ್ರಮಕೈಗೊಳ್ಳುತ್ತವೆ. ಆದರೆ, ಪಿಎಂ 2.5 ಗಿಂತಲೂ ಅತ್ಯಂತ ಸೂಕ್ಷ್ಮವಾಗಿರುವ ಪಿಎಂ-1 ಧೂಳಿನ ಕಣವನ್ನು ಕಂಡುಹಿಡಿಯಲು ಸಾಧ್ಯವಾಗುತ್ತಿಲ್ಲ. ಅದಕ್ಕೆ ಮುಖ್ಯ ಕಾರಣ
ತಂತ್ರಜ್ಞಾನದ ಕೊರತೆಯೇ ಆಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
Related Articles
ಒಳಗಿನ ಮಾಲಿನ್ಯ ಆರೋಗ್ಯದ ಮೇಲೆ ಹೆಚ್ಚು ದುಷ್ಪರಿಣಾಮ ಬೀರುತ್ತಿದೆ. ಮನೆಯ ಒಳಗಿನ ವಾತಾವರಣವನ್ನು
ಸ್ವತ್ಛವಾಗಿಡಲು ಏಷ್ಯನ್ ಪೇಯಿಂಟ್ಸ್ ತನ್ನ ಉತ್ಪನ್ನಗಳಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಜತೆಗೆ ಹಲವು ಜಾಗೃತಿ ಕಾರ್ಯಕ್ರಮಗಳು ನಡೆಸಿಕೊಡುತ್ತಿದೆ ಎಂದರು.
Advertisement
ಐಐಎಸ್‌ಸಿ ವಿಜ್ಞಾನಿ ಪ್ರೊ. ನವಕಾಂತ ಭಟ್, ವಿಪ್ರಾಸ್ಪರ್ ಕಂಪನಿಯ ಮುಖ್ಯಸ್ಥ ಪ್ರದೀಪ್ ಮೈಥನಿ ಸೇರಿದಂತೆ ಮಾಲಿನ್ಯ ನಿಯಂತ್ರಣ ಮಂಡಳಿ ತಜ್ಞರು, ವೈದ್ಯರು ಕಾರ್ಯಗಾರದಲ್ಲಿ ಭಾಗವಹಿಸಿದ್ದರು.
ಏನಿದು ಪಿಎಂ-1?ವಾತಾವರಣದಲ್ಲಿ ವಿವಿಧ ಮೂಲಗಳಿಂದ ಉತ್ಪತ್ತಿಯಾಗುವ ಧೂಳಿನ ಕಣಗಳನ್ನು ಗಾತ್ರದ ಮೇಲೆ ಎರಡು ರೀತಿಯಲ್ಲಿ ವಿಭಾಗಿಸಲಾಗುತ್ತದೆ. ಮಾಸ್ಕ್ ಧರಿಸುವುದರಿಂದ ದೇಹದೊಳಗೆ ಪ್ರವೇಶಿಸದಂತೆ ತಡೆಯಬಹುದಾದ ಇಂತಹ ಧೂಳಿನ ಕಣಗಳನ್ನು ಪಿಎಂ 10 ಎಂದು ಗುರುತಿಸಲಾಗಿದೆ. ಇನ್ನು ಯಾವುದೇ ರೀತಿಯ ಮಾಸ್ಕ್ ಧರಿಸಿದರೂ ಸಹ ನೇರವಾಗಿ ಶ್ವಾಸಕೋಶ ಸೇರುವಷ್ಟು ಸಣ್ಣ ಗಾತ್ರದ ಕಣಗಳನ್ನು ಪಿಎಂ 2.5 ಎಂದು ಗುರುತಿದ್ದು, ಇಂತಹ ಕಣಗಳು ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ. ಅವೆರಡಕ್ಕಿಂತಲೂ ಕಡಿಮೆ ಗಾತ್ರದ ಅತೀ ಸೂಕ್ಷ್ಮ ಕಣಗಳೇ ಪಿಎಂ 1. ತಂತ್ರಜ್ಞಾನ ಅಳವಡಿಕೆ ಪ್ರಯೋಜನ ಏನು? ನಗರದಲ್ಲಿ ಪಿಎಂ-1 ಗುರುತಿಸುವ ತಂತ್ರಜ್ಞಾನ ಅಳವಡಿಕೆಯಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಅಂತಹ ಕಣಗಳಿರುವ ಪ್ರದೇಶವನ್ನು ಗುರುತಿಸಬಹುದಾಗಿದೆ. ಇದರಿಂದಾಗಿ ಅಂತಹ ಪ್ರದೇಶದಲ್ಲಿ ಮಾಲಿನ್ಯ ಪ್ರಮಾಣ ಕಡಿಮೆ ಮಾಡಲು ಕ್ರಮಗಳನ್ನು ಕೈಗೊಳ್ಳಬಹುದಾಗಿದೆ. ಜತೆಗೆ ಯಾವುದರಿಂದ ಪಿಎಂ -1 ಕಣಗಳು ಉತ್ಪತ್ತಿಯಾಗುತ್ತಿವೆ ಎಂಬುದನ್ನು ಪತ್ತೆ ಹಚ್ಚಲು ತಂತ್ರಜ್ಞಾನ ಸಹಕಾರಿಯಾಗಲಿದೆ.