ಮುಂಬಯಿ, ಜ. 12: ಪ್ರತೀ ವರ್ಷವೂ ಜರಗುವ ಶ್ರೀ ಪದ್ಮಾವತಿ ಶ್ರೀನಿವಾಸ ಮಂಗಳ ಮಹೋತ್ಸವವು ಒಂದು ಧಾರ್ಮಿಕ ವೈಭವದ ಕಾರ್ಯಕ್ರಮವಾಗಿರದೆ, ಸಮಾಜದ ವಿವಿಧ ಸ್ತರಗಳಲ್ಲಿನ ಎಲ್ಲಾ ಜನರನ್ನು ಒಂದೇ ವೇದಿಕೆಯಡಿ ತರುವ ಉತ್ತಮ ಉದ್ದೇಶ ಹಾಗೂ ಪ್ರೇರಣೆಯನ್ನು ಹೊಂದಿದೆ ಎಂದು ಡಾ| ವಿರಾರ್ ಶಂಕರ್ ಬಿ. ಶೆಟ್ಟಿ ಅವರು ಅಭಿಪ್ರಾಯಿಸಿದರು.
ಬೊಯಿಸರ್‌ನ ಸ್ವಾಮಿ ನಿತ್ಯಾನಂದ ಮಂದಿರದಲ್ಲಿ ಜ. 9 ರಂದು ಮಂಗಳಾರತಿಯ ನಂತರ ಜರಗಿದ ಜ. 18 ರಂದು ನಲಸೋಪರದಲ್ಲಿ ಜರಗಲಿರುವ ಶ್ರೀನಿವಾಸ ಮಂಗಳ್ಳೋತ್ಸವದ ಪೂರ್ವಭಾವೀ ಸಭೆಯಲ್ಲಿ ಬೊಯಿಸರ್, ಪಾಲ್ಘ ರ್ ಹಾಗೂ ಡಹಾಣೂ ಪರಿಸರದಲ್ಲಿನ ಭಕ್ತಾದಿಗಳ ಆಮಂತ್ರಣ ಪತ್ರಿಕೆ ಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಮಾತಾನಾಡಿದ ಅವರು, ಈ ಮೊದಲು ಬೊಯಿಸರ್‌ನ ಚಿಕ್ಕು ವಾಡಿ ಸರ್ಕಸ್ ಗ್ರೌಂಡ್‌ನಲ್ಲಿ ಜರಗಿದ್ದ ಪದ್ಮಾವತಿ ಶ್ರೀನಿವಾಸ ಮಂಗಳ ಮಹೋತ್ಸವವನ್ನು ಯಶಸ್ವಿಯಾಗಿ ನಡೆಸಲಾಗಿದೆ.
ಆ ಕಾರ್ಯಕ್ರಮವು ನಾವು ಊಹಿಸದ ರೀತಿಯಲ್ಲಿ ಒಂದೂವರೆ ಲಕ್ಷಕ್ಕೂ ಮೀರಿದ ಭಕ್ತಾದಿಗಳು ಪಾಲ್ಗೊಂಡ ಅಭೂತಪೂರ್ವ ಕಾರ್ಯಕ್ರಮ ಎನಿಸಿದೆ. ಜನವರಿ 18ರಂದು ನಡೆಯಲಿರುವ ಕಾರ್ಯಕ್ರಮದಲ್ಲಿಯೂ ಎಲ್ಲರೂ ಪಾಲ್ಗೊಳ್ಳಬೇಕು. ಸಮೃದ್ಧಿ ಹಾಗೂ ಐಶ್ವರ್ಯದ ಪ್ರತೀಕ ಎನಿಸಿದ ತಿರುಮಲ ತಿರುಪತಿ ದೇವಸ್ಥಾನವು ಭೂಲೋಕದ ಒಂದು ಜಾಗೃತ ದೇವಸ್ಥಾನವಾಗಿದ್ದು, ವಿವಿಧ ಕಾರಣ ಗಳಿಂದ ತಿರುಪತಿಯ ತನಕ ಪ್ರವಾಸ ಮಾಡಲು ಅನನು ಕೂಲವಾಗಿರುವ ಭಕ್ತರಿಗೆ ತಮ್ಮ ಸ್ಥಳದಲ್ಲಿಯೇ ಶ್ರೀ ಬಾಲಾಜೀಯ ದರ್ಶನ ಲಾಭದ ಅನುಕೂಲತೆಯನ್ನು ಕಲ್ಪಿಸುವ ಈ ಪುಣ್ಯಕಾರ್ಯದಲ್ಲಿ ಭಕ್ತರೆಲ್ಲರೂ ತುಂಬು ಹೃದಯದ ಹಕಾರ ನೀಡಬೇಕು ಎಂದರು.
ಕಳೆದ 7ವರ್ಷಗಳಿಂದ ಪಶ್ಚಿಮ ಕರಾವಳಿಯ ಪಾಲ್ಘರ್ ಜಿಲ್ಲೆಯಲ್ಲಿನ ವಿವಿಧ ಭಾಗಗಳಲ್ಲಿ ಶಾಸ್ತ್ರೋಕ್ತ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ವಿಜೃಂಭಣೆಯ ಶ್ರೀನಿವಾಸ ಕಲ್ಯಾಣೋತ್ಸವ ನೆರವೇರಿಸಿಕೊಂಡು ಬರುವ ವಿರಾರ್‌ನ ಶ್ರೀ ಸಾಯಿಧಾಮ ಮಂದಿರ ಟ್ರಸ್ಟ್ ಇವರು ಭಕ್ತಾದಿಗಳು ಹಾಗೂ ವಿವಿಧ ಸಂಸ್ಥೆಗಳ ಸಹಕಾರದೊಂದಿಗೆ ಜನಪ್ರಿಯ ಕನ್ನಡಿಗ ಹಾಗೂ ಧಾರ್ಮಿಕ ಮುಂದಾಳು ವಿರಾರ್ ಶಂಕರ್ ಬಿ. ಶೆಟ್ಟಿ ಇವರ ನೇತೃತ್ವದಲ್ಲಿ ಜ. 18ರಂದು ಶೋಭಾಯಾತ್ರೆ, ಮಂಗಳ ಮಹೋತ್ಸವ ಇನ್ನಿತರ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಅರ್ಥಪೂರ್ಣವಾಗಿ ಜರಗಲಿದೆ. ಶ್ರೀ ಸಾಯಿಧಾಮ ಮಂದಿರ ಟ್ರಸ್ಟ್ ಅಧ್ಯಕ್ಷ ಹಾಗೂ ಶಾಸಕರಾದ ಹಿತೇಂದ್ರಜೀ ಠಾಕೂರ್, ಸ್ಥಳೀಯ ಶಾಸಕ ಕ್ಷಿತಿಜ್ ಠಾಕೂರ್, ಬೊಯಿಸರ್‌ನ ಶಾಸಕ
ರಾಜೇಶ್ ಪಾಟೀಲ್, ಸ್ಥಳೀಯ ಮಾಜಿ ಮೇಯರ್ ರಾಜೀವ್ ಪಾಟೀಲ್, ಮಾಜಿ ಉಪ ಮೇಯರ್ ಉಮೇಶ್ ನಾಯ್ಕ್ ಇವರ ಉಪಸ್ಥಿತಿಯಲ್ಲಿ ಕಾರ್ಯ ಕ್ರಮ ಜರಗಲಿದೆ. ಈ ಮಂಗಳ ಮಹೋತ್ಸವದಲ್ಲಿ ತಿರುಪತಿ ತಿರುಮಲ ದೇವ ಸ್ಥಾನಮ್ ವತಿಯಿಂದ ಶ್ರೀದೇವಿ, ಭೂ ದೇವಿ ಹಾಗೂ ಶ್ರೀ ಬಾಲಾಜಿ ದೇವರ ಮೂರ್ತಿಗಳೊಂದಿಗೆ ಆಗಮಿ ಸಲಿರುವ ಪುರೋಹಿತರು ಹಾಗೂ ವಿದ್ವಾನ್ ಪಂಡಿತರು ದಿನದ ಎಲ್ಲ ಧಾರ್ಮಿಕವಿಧಿ ವಿಧಾನಗಳನ್ನು ನೆರವೇರಿಸಲಿದ್ದು ಭಾಗವಹಿಸಲಿರುವ ಭಾವಿಕ ಭಕ್ತಾದಿಗಳಿಗೆ ಲಡ್ಡು ಪ್ರಸಾದದ ಭಾಗ್ಯ ಲಭಿಸಲಿದೆ. ನಲಸೋಪರ ಪೂರ್ವದಲ್ಲಿನ ಅಲ್ಕಾಪುರಿ ಫಾಯರ್ ಬ್ರಿಗೇಡ್ ಬಳಿಯ ಯಶ
ವಂತ್ ವೀವಾ ಟೌನ್ ಶಿಪ್‌ನಲ್ಲಿ ಜರಗಲಿರುವ ಈ ಭವ್ಯ ಕಾರ್ಯಕ್ರಮ ದಲ್ಲಿ ಬೆಳಿಗ್ಗೆ 6ರಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ಅಪರಾಹ್ನ 3ರಿಂದ 6ರ ತನಕ ಭವ್ಯ ಶೋಭಾಯಾತ್ರೆ ಜರಗಲಿದೆ ಎಂದು ತಿಳಿಸಲಾಯಿತು.
ಚಿತ್ರ-ವರದಿ: ರವಿಶಂಕರ್ ಡಹಾಣೂರೋಡ್