ಪ್ರಶ್ನೆ; ಮೈತ್ರಿ ಬಿಕ್ಕಟ್ಟು ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆಯೇ..?
ಪ್ರಶ್ನೆ: ಮೋದಿ ಅಲೆ ಎದುರಿಸಲು ನಿಮ್ಮ ತಂತ್ರಗಾರಿಕೆ ಏನು.?
ಉತ್ತರ: ಕ್ಷೇತ್ರದಲ್ಲಿ ಈ ಬಾರಿ ಯಾವುದೇ ಅಲೆಯಿಲ್ಲ. ಅದು ಬಿಜೆಪಿ ಯವರ ಭ್ರಮೆ. ನಾವು ಕಾಂಗ್ರೆಸ್ ಹಾಗೂ ಈಗ ಮೈತ್ರಿಕೂಟ ಸರಕಾರದ ಅಭಿವೃದ್ಧಿ ಕಾರ್ಯಗಳನ್ನು ನಂಬಿದ್ದೇವೆ. ಮೋದಿ ಅಲೆ ನಂಬಿಕೊಂಡು ಸಂಸದರಾದವರು ಏನೂ ಕೆಲಸ ಮಾಡಿಲ್ಲ ಎಂಬ ಅಸಮಾಧಾನ ಜನರಲ್ಲಿದೆ. ಹೀಗಾಗಿ ಈ ಬಾರಿ ಬಿಜೆಪಿಗೆ ತಕ್ಕ ಉತ್ತರ ನೀಡುವ ತಂತ್ರಗಾರಿಕೆ ನಮ್ಮ ಬಳಿ ಇದೆ. ನಾವು ಮತದಾರರ ಮನೆಗಳಿಗೆ ಕೆಲಸದ ಮೂಲಕ ತಲುಪಿದ್ದೇವೆ, ಬಿಜೆಪಿ ಬಳಿ ಸುಳ್ಳು ಭರವಸೆಗಳು ಮಾತ್ರ ಇವೆ. ಎಲ್ಲ ನಾಯಕರು ಸಹಕಾರ ನೀಡುತ್ತಿರುವುದರಿಂದ ನಮಗೆ ಯಾವುದೇ ಹೆದರಿಕೆ ಇಲ್ಲ. ಕ್ಷೇತ್ರದ ಜನ ಮುಖ್ಯವಾಗಿ ಬದಲಾವಣೆ ಬಯಸಿದ್ದಾರೆ.
ಪ್ರಶ್ನೆ: ಪ್ರತ್ಯೇಕ ಲಿಂಗಾಯತ ಧರ್ಮ ಈ ಬಾರಿಯ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆಯೇ..?
Advertisement
ಉತ್ತರ: ಕಾಂಗ್ರೆಸ್ ಹಾಗೂ ಜೆಡಿಎಸ್ ಮೃತ್ರಿಕೂಟದ ನಾಯಕರು ಒಂದಾಗಿ ಕೆಲಸ ಮಾಡುತ್ತಿದ್ದೇವೆ. ನಮ್ಮಲ್ಲಿ ಯಾವುದೇ ಬಿಕ್ಕಟ್ಟು ಅಥವಾ ಭಿನ್ನಮತ ಇಲ್ಲ. ಎಲ್ಲರೂ ಒಂದಾಗಿ ಪ್ರಚಾರ ನಡೆಸಿದ್ದೇವೆ. ಮೈತ್ರಿಕೂಟದ ಪ್ರತಿ ನಾಯಕರು ಪ್ರಚಾರ ಕಾರ್ಯದಲ್ಲಿ ಸಹಕಾರ ನೀಡುತ್ತಿದ್ದಾರೆ. ಜೆಡಿಎಸ್‌ದ ಸುಮಾರು 70 ಸಾವಿರಕ್ಕೂ ಅಧಿಕ ಮತಗಳಿವೆ. ಇವೆಲ್ಲವೂ ನಮಗೆ ಪ್ಲಸ್.
Related Articles
Advertisement
ಉತ್ತರ: ಕ್ಷೇತ್ರದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ವಿಷಯವೇ ಇಲ್ಲ, ಜನರಿಗೆ ಅವರ ಸಮಸ್ಯೆ ನಿವಾರಣೆಯಾಗುವುದು ಬೇಕಿದೆ. ಹೀಗಿರುವಾಗ ಜಾತಿ ಹಾಗೂ ಧರ್ಮದ ವಿಷಯ ಪ್ರಸ್ತಾಪವಾಗುವದೇ ಇಲ್ಲ. ಕೆಲವರು ಮಾತ್ರ ಇದನ್ನು ವಿಷಯ ಮಾಡುತ್ತಿದ್ದಾರೆ.
ಪ್ರಶ್ನೆ: ರಾಹುಲ್, ದೇವೇಗೌಡ ಹಾಗೂ ಸಿದ್ದರಾಮಯ್ಯ ಪ್ರಚಾರ ನಿಮಗೆಷ್ಟು ವರವಾಗಲಿದೆ..?
ಉತ್ತರ: ಖಂಡಿತ ಅನುಕೂಲವಾಗಲಿದೆ. ಈ ಭಾಗದಲ್ಲಿ ಸಿದ್ದರಾಮಯ್ಯ ಅವರ ಬಗ್ಗೆ ಜನರಿಗೆ ಬಹಳ ಅಭಿಮಾನ ಇದೆ. ಅವರ ಸಾಧನೆಯ ಬಗ್ಗೆ ತೃಪ್ತಿ ಇದೆ. ಬಡವರಿಗೆ ಸಾಕಷ್ಟು ಸಹಾಯ ಮಾಡಿದ್ದಾರೆ ಎಂಬ ಅಭಿಮಾನ ಇದೆ. ಸಿದ್ದರಾಮಯ್ಯ ಅವರ ಭೇಟಿಯೇ ಬಹಳ ಪರಿಣಾಮ ಬೀರಲಿದೆ. ರಾಹುಲ್ ಗಾಂಧಿ ಮೇಲೆ ಬಹಳ ಆಸೆ ಇಟ್ಟುಕೊಂಡಿದ್ದಾರೆ. ಈಗ ನನ್ನ ಗೆಲುವಿಗೆ ಈ ನಾಯಕರ ಪ್ರಚಾರ ಸಹಾಯಮಾಡಲಿದೆ.
ಪ್ರಶ್ನೆ; ಕ್ಷೇತ್ರದ ಅಭಿವೃದ್ಧಿ ಬಗ್ಗೆ ನಿಮ್ಮ ನೀಲನಕ್ಷೆ ಏನು..?
ಉತ್ತರ: ಕ್ಷೇತ್ರದ ಪ್ರತಿ ಪ್ರದೇಶ ನೀರಾವರಿಯಾಗಬೇಕು ಎಂಬುದು ನಮ್ಮ ಮೊದಲ ಆಸೆ. ಇದಕ್ಕಿಂತ ಮುಖ್ಯವಾಗಿ ಇಲ್ಲಿಯ ಜನರ ಬಹಳ ವರ್ಷಗಳ ಬೇಡಿಕೆ ಕಳಸಾ ಬಂಡೂರಿ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಎಲ್ಲ ರೀತಿಯ ಪ್ರಯತ್ನ ಮಾಡುವೆ. ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಬೇಕಿದೆ. ಸವದತ್ತಿ ಯಲ್ಲಮ್ಮ ದೇವಸ್ಥಾನ ಕ್ಷೇತ್ರಕ್ಕೆ ಹಾಗೂ ಧಾರವಾಡದಿಂದ ಕಿತ್ತೂರ ಮಾರ್ಗವಾಗಿ ಬೆಳಗಾವಿಗೆ ರೈಲು ಮಾರ್ಗ ನಿರ್ಮಾಣಕ್ಕೆ ಪ್ರಯತ್ನ ಮಾಡುತ್ತೇನೆ.