Advertisement
ಕೇರಳದ ಅಭಿವೃದ್ಧಿ ಜೊತೆಗೆ ಫ್ಯಾಸಿಸಂ ಶಕ್ತಿಗೆದುರಾಗಿ, ಕೋಮುವಾದಕ್ಕೆ , ಕೊಲೆ ರಾಜಕೀಯಕ್ಕೆದುರಾಗಿ ನಾವೆಲ್ಲ ಒಮ್ಮತದಿಂದ ಯುಡಿಎಫ್‌ಗಾಗಿ ಕೆಲಸಮಾಡಬೇಕಾಗಿದೆ ಎಂದು ಹೇಳಿದರು.
ಎಲ್ಲ ಧರ್ಮದವರೂ ಪವಿತ್ರವೆಂದು ಗೌರವಯುತ ಸ್ಥಾನದಲ್ಲಿ, ವಿದೇಶಿಯನ್ನರೂ ಕೂಡಾ ಆರಾಧಿಸುವ ಕ್ಷೇತ್ರ ಶಬರಿಮಲೆ. ಅಂತಹ ಶಬರಿಮಲೆ ಅಯ್ಯಪ್ಪ ಸ್ವಾಮಿ ಅಖಂಡ ಬ್ರಹ್ಮಚಾರಿಯಾಗಿದ್ದು ಅಲ್ಲಿನ ಆಚಾರ ವಿಚಾರವನ್ನು ಉಳಿಸುವುದು ಕೂಡ ಐಕ್ಯ ರಂಗದ ಶ್ಲಾಘನೀಯ ಕೆಲಸ.
Related Articles
Advertisement
ಬಿ.ಎಸ್. ಗಾಂಭೀರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಯುಡಿಎಫ್ ಜಿಲ್ಲಾ ಸಂಚಾಲಕ ಎಂ.ಸಿ. ಕಮರುದ್ದೀನ್, ಆಶ್ರಫ್ ಆಲಿ, ಮಂಜುನಾಥ ಆಳ್ವ, ಎಂ.ಅಬ್ಟಾಸ್, ಸೋಮಶೇಖರ್ ಜೆ.ಎಸ್, ಪಿ.ವಿ. ಸುರೇಶ್, ಆಶ್ರಫ್ ಕಾರ್ಲೆ, ಹಮೀದ್ ಆಲಿ, ಎಣ್ಮಕಜೆ ಪಂಚಾಯತ್ ಅಧ್ಯಕ್ಷೆ ಶಾರದಾ ವೈ, ಆಯಿಷಾ ಎ.ಎ, ಸಿದ್ದೀಕ್ ಖಂಡಿಗೆ, ಸಿದ್ದೀಕ್ ವಳಮೊಗರು, ಅಬ್ದುಲ್ ರಹಿಮಾನ್, ವಿಲ್‌ಫ್ರೆಡ್ ಡಿ’ಸೋಜ, ಎ.ಕೆ. ಶೆರೀಫ್, ಐತ್ತಪ್ಪ ಕುಲಾಲ್, ಆಮು ಅಡ್ಕಸ್ಥಳ, ಗೀತಾ ಎಂ, ಪುಷ್ಪಾ, ಜಯಶ್ರೀ ಕುಲಾಲ್, ನವೀನ್ ನಾಯಕ್, ಎಸ್ ಅಬ್ದುಲ್ಲಾ ಉಪಸ್ಥಿತರಿದ್ದರು. ಪಿ ಅಬೂಬಕ್ಕರ್ ಸ್ವಾಗತಿಸಿ, ರವೀಂದ್ರನಾಥ ನಾಯಕ್ ವಂದಿಸಿದರು.
ನಂತರ ನಡೆದ ಚುನಾವಣೆ ಸಮಿತಿ ರೂಪೀಕರಣದಲ್ಲಿ ಚೆಯರ್‌ವೆುàನ್ ಆಗಿ ಬಿ.ಅಬೂಬಕ್ಕರ್, ಕನ್ವೀನರ್ ಆಗಿ ಬಿ.ಯಸ್.ಗಾಂಭೀರರನ್ನೊಳಗೊಂಡ 501 ಮಂದಿ ಸದಸ್ಯರ ಸಮಿತಿಯನ್ನು ರಚಿಸಲಾಯಿತು.
ಕೊಡುಗೆ ಅಪಾರಕಾಸರಗೋಡಿನ ಜನತೆ ಹೃದಯವೈಶಾಲ್ಯತೆ ಅಪಾರವಾದುದು. ಕಲೆ, ಸಂಸ್ಕೃತಿ,ಧಾರ್ಮಿ ಕತೆ, ಸಾಮರಸ್ಯೆಕ್ಕೆ, ಭಾಷಾ ಸೌಹಾರ್ದ ತೆಗೆ ಕಾಸರಗೋಡಿನ ಕೊಡುಗೆ ಅಪಾರ ವಾದುದು. ಶಿಕ್ಷಣ ಕ್ಷೇತ್ರದಲ್ಲೂ ಇಲ್ಲಿನವರ ಸಾಧನೆ ಉತ್ತಮವಾಗಿದೆ ಎಂದು ರಾಜ್‌ಮೋಹನ್ ಉಣ್ಣಿತ್ತಾನ್ ಹೇಳಿದರು.