Advertisement

ಇನ್ನೂ ನಾಲ್ಕು ರಾಜ್ಯಗಳಲ್ಲಿ ಜಾರಿಯಾಗಿಲ್ಲ ಆಯುಷ್ಮಾನ್ ಭಾರತ ಯೋಜನೆ

10:02 AM Dec 11, 2019 | Hari Prasad |

ಹೊಸದಿಲ್ಲಿ: ಕೇಂದ್ರ ಸರಕಾರದ ಮಹಾತ್ವಾಕಾಂಕ್ಷೆಯ ಕಾರ್ಯಕ್ರಮವಾದ ಆಯುಷ್ಮಾನ್‌ ಭಾರತವನ್ನು 4 ರಾಜ್ಯಗಳು ಹೊರತುಪಡಿಸಿ ಉಳಿದ ಎಲ್ಲಾ ರಾಜ್ಯಗಳು ಅಳವಡಿಸಿಕೊಂಡಿದೆ ಎಂದು ಕೇಂದ್ರ ಸರಕಾರ ಹೇಳಿದೆ. ದಿಲ್ಲಿ, ತೆಲಂಗಾಣ, ಒಡಿಶಾ ಮತ್ತು ಪಶ್ಚಿಮಬಂಗಾಲ ರಾಜ್ಯಗಳಲ್ಲಿ ಈ ಯೋಜನೆಯಿಂದ ಇಲ್ಲಿನ ಬಡವರು ವಂಚಿತರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಹೇಳಿದ್ದಾರೆ.

Advertisement

ಈ ನಾಲ್ಕು ರಾಜ್ಯಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ರಾಜ್ಯಗಳು ಬಹಳ ಚೆನ್ನಾಗಿ ಈ ಯೋಜನೆಗಳು ಜನರಿಗೆ ಲಭಿಸುವಂತೆ ಮಾಡಿದ್ದಾರೆ. ಈ ಯೋಜನೆಯಿಂದ ಈಗಾಗಲೇ 10.75 ಕೋಟಿ ಮಂದಿ ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಈ ಯೋಜನೆಯ ಅನ್ವಯ 65.5 ಲಕ್ಷ ಮಂದಿ ಈ ಯೋಜನೆಯ ಅಡಿ ಆಸ್ಪತ್ರೆಗೆ ದಾಖಲಾಗಿ ಚಕಿತ್ಸೆ ಪಡೆದಿದ್ದಾರೆ.

ಈ ಯೋಜನೆಯಡಿ ಸುಮಾರು 65,45,733 ಮಂದಿ ಆಸ್ಪತ್ರೆಗೆ ತೆರಳಿದ್ದಾರೆ. ಅವರು ಸುಮಾರು 9,549 ಕೋಟಿ.ರೂ. ಮೌಲ್ಯದ ಚಿಕಿತ್ಸೆಯನ್ನು ಈ ಯೋಜನೆಯಡಿ ನೀಡಲಾಗಿದೆ. ಮಾತ್ರವಲ್ಲದೇ ಸುಮಾರು 20 ಸಾವಿರ ಆಸ್ಪತ್ರೆಗಳು ಈ ಯೋಜನೆಯನ್ನು ತನ್ನಲ್ಲಿ ಅಳವಡಿಸಿಕೊಂಡಿದೆ.

ಆಯುಷ್ಮಾನ್‌ ಭಾರತ ಯೋಜನೆಯ ಅನ್ವಯ ಶೇ. 60ರಷ್ಟು ದಾಖಲಾತಿಗಳು ಖಾಸಗಿ ಆಸ್ಪತ್ರೆಯಲ್ಲಿ ಹಾಗೂ ಶೇ. 40ರಷ್ಟು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ನೀಡಲಾಗಿದೆ. ಆಯುಷ್ಮಾನ್ ಯೋಜನೆಯಲ್ಲಿ 2020ರ ವೇಳೆಗೆ ಸುಮಾರು 1.20 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next