Advertisement
ಮೈತ್ರಿಕೂಟದಲ್ಲಿ ಪ್ರಮುಖ ಪಕ್ಷವಾಗಿರುವ ಆರ್‌ಜೆಡಿ ನಾಯಕರಂತೂ ಸಂಸದ ದಯಾನಿಧಿ ಮಾರನ್ ಹೇಳಿಕೆಯಿಂದ ಕ್ರುದ್ಧಗೊಂಡಿದ್ದಾರೆ. ನಿಗದಿತ ಸಮುದಾಯದವರೇ ಇಂಥ ಕೆಲಸ ಮಾಡುತ್ತಿದ್ದಾರೆಯೇ ಎಂದು ಬಿಹಾರ ಡಿಸಿಎಂ ತೇಜಸ್ವಿ ಯಾದವ್ ಪ್ರಶ್ನಿಸಿದ್ದಾರೆ. ಲೋಕಸಭೆ ಚುನಾವಣೆಗೆ ಮೈತ್ರಿಕೂಟದ ಮುಂದಿನ ಸಭೆಯಲ್ಲಿ ಚರ್ಚೆಗೆ ಸಿದ್ಧತೆ ನಡೆಯುತ್ತಿರುವಂತೆಯೇ ಹೊಸ ಹೇಳಿಕೆ ತಲ್ಲಣಕ್ಕೆ ಕಾರಣವಾಗಿದೆ.
Related Articles
Advertisement
ಹೇಳಿಕೆಗೆ ಬಿಜೆಪಿಯೂ ಟೀಕೆ: ಡಿಎಂಕೆ ನಾಯಕನ ಹೇಳಿಕೆಗೆ ಬಿಹಾರದ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಇಂಡಿಯಾ ಒಕ್ಕೂಟದ ಮಿತ್ರ ಪಕ್ಷ ಜೆಡಿಯು ಬಿಹಾರದಲ್ಲಿ ಅಧಿಕಾರದಲ್ಲಿದೆ. ಹೀಗಾಗಿ, ರಾಜ್ಯದ ದುಃಸ್ಥಿತಿಯಲ್ಲಿ ಇರುವುದರಿಂದ ಬಿಹಾರ ದವರು ಇತರ ರಾಜ್ಯಕ್ಕೆ ಕೆಲಸಕ್ಕಾಗಿ ಹೋಗುವ ಸ್ಥಿತಿ ಇದೆ. ಹಿಂದುಸ್ತಾನ ಒಂದೇ ಯಾರು ಎಲ್ಲಿ ಬೇಕಾದರೂ ಕೆಲಸ ಮಾಡಬಹುದು, ಬಿಹಾರದ ವರನ್ನು ಅವಮಾನಿಸದಿರಿ’ ಎಂದು ಮಾಜಿ ಸಚಿವ ರವಿಶಂಕರ ಪ್ರಸಾದ್ ತಿರುಗೇಟು ನೀಡಿದ್ದಾರೆ.
ಬಿಜೆಪಿಯನಾಯಕ ಶೆಹಜಾದ್ ಪೂನಾವಾಲಾ ಟ್ವೀಟ್ ಮಾಡಿ ಡಿಎಂಕೆ ನಾಯಕರಿಗೆ ವಿವಾದ ಎಬ್ಬಿ ಸುವುದೇ ಹವ್ಯಾಸ. ಆರಂಭದಲ್ಲಿ ಸನಾತನ ಧರ್ಮ ಬಗ್ಗೆ ಮಾತನಾಡಿದರು. ಇದರ ಹೊರತಾಗಿ ಯೂ ಕೈ ನಾಯಕರು ಏಕೆ ಮೌನವಾಗಿದ್ದಾರೆ ಎಂದಿದ್ದಾರೆ.
ಡಿಎಂಕೆ, ಆರ್‌ಜೆಡಿ ಸಾಮಾಜಿಕ ನ್ಯಾಯದ ಮಾತಾಡುತ್ತಿವೆ. ಅಂಥ ಪಕ್ಷದ ನಾಯಕರಿಂದ ಇಂಥ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ. ಅದನ್ನು ನಾವು ಖಂಡಿಸುತ್ತೇವೆ.
ತೇಜಸ್ವಿ ಯಾದವ್, ಬಿಹಾರ ಡಿಸಿಎಂ
ಬಿಹಾರದಲ್ಲಿನ ದುಃಸ್ಥಿತಿಯಿಂದಾಗಿ ನಮ್ಮ ರಾಜ್ಯದವರು ಬೇರೆ ಸ್ಥಳಕ್ಕೆ ಕೆಲಸಕ್ಕೆ ಹೋಗಬೇಕಾದ ಸ್ಥಿತಿ ಇದೆ. ಹಾಗೆಂದು ನಮ್ಮವರನ್ನು ಅವಮಾನ ಮಾಡುವುದು ಬೇಡ.
ರವಿಶಂಕರ್ ಪ್ರಸಾದ, ಮಾಜಿ ಸಚಿವ
ನಮ್ಮ ಪಕ್ಷ ಸಮಾನ ಸಮಾಜ ವ್ಯವಸ್ಥೆಗೆ ಬೆಂಬಲ ನೀಡುತ್ತದೆ. ತಮಿಳುನಾಡು ಹೆಚ್ಚು, ಮತ್ತೂಂದು ರಾಜ್ಯ ಕನಿಷ್ಠ ಎಂಬ ಭಾವನೆ ನಮ್ಮದಲ್ಲ. ಮಾರನ್ ಆ ರೀತಿ ಮಾತಾಡುವವರೇ ಅಲ್ಲ. ಬಿಜೆಪಿಯವರು ಹಳೆಯ ಹೇಳಿಕೆಯನ್ನು ಜಾಲತಾಣಗಳಲ್ಲಿ ವೈರಲ್ ಮಾಡಿ ಅಪಪ್ರಚಾರ ಮಾಡಿದ್ದಾರೆ.
ಜೆ.ಸಿ.ರವೀಂದ್ರನ್, ಡಿಎಂಕೆ ವಕ್ತಾರ