Advertisement
ನಡುನೆತ್ತಿಯಿಂದ ನೇಸರ ಜಾರುತ್ತಿದ್ದಂತೆಯೇ ಉಡುಪಿಯ ಐತಿಹಾಸಿಕ ಸ್ಥಳ ಜೋಡುಕಟ್ಟೆ ಕೇಸರಿಮಯವಾಗಿ ಲಕ್ಷ ಹಿಂದೂ ಬಾಂಧವರ ಸಮಾಗಮಕ್ಕೆ ಸಾಕ್ಷಿಯಾಯಿತು. ಉಡುಪಿಯ ಭವ್ಯ ಇತಿಹಾಸದ ಪುಟದಲ್ಲಿ ಸ್ವರ್ಣಾಕ್ಷರದಲ್ಲಿ ಬರೆದಿಡಬಹುದಾದ ಸನ್ನಿವೇಶವೊಂದು ಹಿಂದೂ ಸಮಾಜೋತ್ಸವದ ಶೋಭಾಯಾತ್ರೆಯ ರೂಪದಲ್ಲಿ ಸೃಷ್ಟಿಯಾಯಿತು.
Related Articles
ಕೆಲವು ಸಂತರು ಜೋಡುಕಟ್ಟೆಯಲ್ಲೇ ಶೋಭಾಯಾತ್ರೆಯಲ್ಲಿ ಪಾಲ್ಗೊಂಡರೆ ಅನೇಕರು “ಧರ್ಮಸಂಸದ್’ ಸ್ಥಳವಾದ ಕಲ್ಸಂಕದಲ್ಲಿ ಸೇರಿದರು. ಮಿಕ್ಕುಳಿದವರು ಸಮಾಜೋತ್ಸವ ಸ್ಥಳಕ್ಕೆ ಆಗಮಿಸಿದರು. ಪೇಜಾವರ ಹಿರಿಯ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಗಾಲಿಕುರ್ಚಿಯಲ್ಲೇ ಸಾಗಿ ಬಂದರು. ಕಿರಿಯ ಶ್ರೀ ವಿಶ್ವಪ್ರಸನ್ನತೀರ್ಥರು ಅಶ್ವಾರೋಹಿಯಾಗಿ ಬಂದರು.
Advertisement
ಶೋಭಾಯಾತ್ರೆ ಕಣ್ತುಂಬಿಕೊಳ್ಳಲು ರಸ್ತೆಯ ಇಕ್ಕೆಲಗಳಲ್ಲಿ, ಮಹಡಿಗಳ ಮೇಲೆ ಕಾತರದಿಂದ ಕಾಯುತ್ತಿದ್ದ ಜನತೆ ಜನರಾಶಿ ಕಂಡು ಬೆರಗಾದರು. ಸರಿ ಸುಮಾರು 5 ಕಿ.ಮೀ. ಸಾಗಿದ ಶೋಭಾ ಯಾತ್ರೆ ಇಡೀ ಉಡುಪಿಯನ್ನೇ ತನ್ನತ್ತ ಕೇಂದ್ರೀಕರಿಸಿಕೊಂಡಿತು.
ಆಬಾಲವೃದ್ಧರ ಉತ್ಸಾಹ, ಉಲ್ಲಾಸಯುವಕ ಯುವತಿಯರೇ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರಾದರೂ ಮಕ್ಕಳು, ಹಿರಿಯರು ಸೇರಿ ದಂತೆ ಬಹುತೇಕ ಎಲ್ಲ ವಯೋಮಾನದವರೂ ಶೋಭಾ ಯಾತ್ರೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಮಹಿಳೆ ಯರ ಸಂಖ್ಯೆ ಕೂಡ ಅಧಿಕವಾಗಿತ್ತು. “ಬಜರಂಗ್…ಬಜರಂಗ್’, “ಜೈ ಜೈ ಹನುಮಾನ್…’ ಮೊದಲಾದ ಡಿ.ಜೆ ಹಾಡು ಗಳಿಗೆ ಯುವಕ ಯುವತಿಯರು ಹೆಜ್ಜೆ ಹಾಕಿದರು. ಶೋಭಾ ಯಾತ್ರೆಯ ಹಾದಿಯಲ್ಲಿ ಸಾವಿರ ಸಾವಿರ ಸಂಖ್ಯೆ ಯಲ್ಲಿ ಭಗವಾಧ್ವಜಗಳನ್ನು ವಿತರಿಸಲಾಯಿತು. ಸಾಗಿದಷ್ಟು ಸಾಲು
ಜೋಡುಕಟ್ಟೆಯಿಂದ ಶಿರಿಬೀಡು ವರೆಗೆ ಒಂದೇ ರಸ್ತೆಯಲ್ಲಿ, ಅಲ್ಲಿಂದ ಮುಂದಕ್ಕೆ ಎಂಜಿಎಂ ಮೈದಾನ ವರೆಗೆ ಎರಡೂ ವಿಶಾಲ ರಸ್ತೆಗಳಲ್ಲಿ ಶೋಭಾಯಾತ್ರೆ ಸಾಗಿತು. ಶೋಭಾಯಾತ್ರೆಯ ತುದಿಭಾಗ ಮೈದಾನ ತಲುಪಿದರೂ ಅದರ ಕೊನೆ ಮಾತ್ರ ಜೋಡುಕಟ್ಟೆಯಲ್ಲೇ ಉಳಿದಿತ್ತು. ಅಷ್ಟುದ್ದದ ಸಾಲು ಭವ್ಯ ಶೋಭಾಯಾತ್ರೆಯದ್ದಾಗಿತ್ತು. ನಾವೆಲ್ಲ ಒಂದು, ನಾವೆಲ್ಲ ಹಿಂದೂ
“ಧರ್ಮಸಂಸದ್’ ಅಸ್ಪೃಶ್ಯತೆ ವಿರುದ್ಧ ಸಮರ ಸಾರುವ ಸಂದೇಶ ಹೊರಡಿಸಿದೆ. ಅಂತೆಯೇ ಶೋಭಾಯಾತ್ರೆಯಲ್ಲಿಯೂ ಸಮಾನತೆಯ ಘೋಷಗಳು ಮೊಳಗಿದವು. “ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು’ ಎನ್ನುತ್ತಾ ಯುವಪಡೆ ಮುನ್ನುಗ್ಗುತ್ತಿತ್ತು. ಇದರ ಜತೆಗೆ “ರಾಮನ ಪಾದದ ಮೇಲಾಣೆ ಮಂದಿರ ನಿರ್ಮಾಣ ಅಲ್ಲೇನೆ’, “ಹಿಂದೂ ಎನ್ನಲು ಭಯವೇಕೆ?’, “ಬೋಲೋ ಭಾರತ್ ಮಾತಾಕಿ ಜೈ’, “ಕಟ್ಟುವೆವು ಕಟ್ಟುವೆವು ರಾಮಮಂದಿರ ಕಟ್ಟುವೆವು’ ಎಂಬ ಘೋಷಣೆಗಳು ಮುಗಿಲು ಮುಟ್ಟುವಂತಿತ್ತು. ಕೆಲವೊಂದು ಯುವಕರ ಗುಂಪುಗಳು ಪಾಕಿಸ್ಥಾನದ ವಿರುದ್ಧವೂ ದನಿ ಎತ್ತಿದವು. ಹಿಂದುತ್ವ, ರಾಷ್ಟ್ರೀಯತೆ, ಸೌಹಾರ್ದ, ಸ್ವಚ್ಛತೆ
ಹಿಂದುತ್ವದ ಘೋಷಣೆ ದಟ್ಟವಾಗಿತ್ತು. ಶೋಭಾಯಾತ್ರೆ ಹಾದಿ ಯಲ್ಲಿ ಅಳವಡಿಸಿದ ಬ್ಯಾನರ್‌ಗಳಲ್ಲಿ ರಾಷ್ಟ್ರೀಯತೆ ಮತ್ತು ಪರಿಸರ ಸಂರಕ್ಷಣೆ ಯನ್ನು ಕೂಡ ಉಲ್ಲೇ ಖೀಸ ಲಾಗಿತ್ತು. ಮುಸ್ಲಿಂ ಬಾಂಧವರು ತಂಪು ಪಾನೀಯ ನೀಡುವ ಮೂಲಕ ಸೌಹಾರ್ದದ ಬೆಸುಗೆಯಾಯಿತು. ಶೋಭಾಯಾತ್ರೆ ಆರಂಭ ವಾಗುವ ಮೊದಲು ದಾರಿಯುದ್ದಕ್ಕೂ ನೀರು ಚಿಮುಕಿಸಿ ಸ್ವತ್ಛಗೊಳಿಸ ಲಾಯಿತು. ಶೋಭಾಯಾತ್ರೆ ಸಾಗಿದ ಕೂಡಲೇ ರಸ್ತೆಯ ಕಸಗಳನ್ನು ಹೆಕ್ಕಿ ಸ್ವತ್ಛಗೊಳಿಸಲಾಯಿತು.