Advertisement

ಸಾಮಾಜಿಕ ಅಂತರ ಪಾಲಿಸದ ಜನತೆ

09:18 AM Jul 24, 2020 | Suhan S |

ಬನಹಟ್ಟಿ: ಇಲ್ಲಿಯ ಮಾರುಕಟ್ಟೆಯು ಮಾಸ್ಕ್ ಹಾಗೂ ಸಾಮಾಜಿಕ ಅಂತರವಿಲ್ಲದೆ ಜನತೆ ನಿರ್ಲಕ್ಷ್ಯದಿಂದ ಬೇಕಾಬಿಟ್ಟಿಯಾಗಿ ಸಂಚರಿಸುತ್ತಿರುವುದನ್ನು ಗಮನಿಸಿದ ಅಧಿಕಾರಿಗಳು ದಿಢೀರ್‌ನೇ ಆಗಮಿಸಿ ಗುಂಪು ಗುಂಪಾಗಿದ್ದ ಜನರು ಹಾಗೂ ವ್ಯಾಪಾರಸ್ಥರನ್ನು ಚದುರಿಸುವಲ್ಲಿ ಯಶಸ್ವಿಯಾದರು.

Advertisement

ರಬಕವಿ-ಬನಹಟ್ಟಿ ತಾಲೂಕಿನ ತೇರದಾಳ, ರಬಕವಿ, ಬನಹಟ್ಟಿ, ಹಿಪ್ಪರಗಿ, ಚಿಮ್ಮಡ ಗ್ರಾಮಗಳು ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಕೋವಿಡ್ ಸಮುದಾಯದತ್ತ ಹರಡುವ ಭೀತಿ ಭಯಂಕರವಾಗಿದೆ. ಕಳೆದೆರೆಡು ದಿನಗಳಿಂದ ಯಾವುದೇ ಶಂಕೆಯಿಲ್ಲದೆ ವ್ಯಕ್ತಿಗಳಿಗೆ ಸೋಂಕು ತಗುಲುತ್ತಿದ್ದರೆ, ಕೆಲ ಸಾರಿ ಹಾಗೂ ಐಎಲ್‌ಐ ಕೇಸ್‌ಗಳಿಂದ ಆಸ್ಪತ್ರೆಗಳಿಗೆ ತೆರಳಿದ ನಂತರ ರ್ಯಾಪಿಡ್‌ ಪರೀಕ್ಷೆಯ ನಂತರ ರೋಗಿಗಳಲ್ಲಿ ಕೋವಿಡ್ ಇರುವುದು ಪತ್ತೆಯಾಗುತ್ತಿದೆ. ಇದರಿಂದ ಆಸ್ಪತ್ರೆಗಳಲ್ಲಿನ ಸಿಬ್ಬಂದಿಗೂ ಸೋಂಕು ತಗುಲಿದ ಉದಾಹರಣೆಗಳು ತಾಲೂಕಿನಲ್ಲಿ ನಡೆದಿವೆ.

ತೇರದಾಳ, ರಬಕವಿ ಹಾಗೂ ಬನಹಟ್ಟಿ ಪಟ್ಟಣದ ಮಧ್ಯ ಭಾಗಗಳಲ್ಲಿಯೇ ಕಂಟೇನ್ಮೆಂಟ್‌ ವಲಯಗಳಾಗಿದ್ದು, ಜನತೆ ತೀವ್ರ ಎಚ್ಚರದಿಂದ ಮಾಸ್ಕ್ ಹಾಗೂ ಸಾಮಾಜಿಕ ಅಂತರದಿಂದ ಕಾರ್ಯ ನಿರ್ವಹಣೆ ಮಾಡಬೇಕಿದೆ. ಕೆಲ ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಸಾಂಸ್ಥಿಕ ಕ್ವಾರಂಟೈನ್‌ ಮಾಡಲಾಗುತ್ತಿದ್ದರೂ, ಇವರನ್ನು ಬಿಟ್ಟು ಸಮುದಾಯದತ್ತ ಸೋಂಕು ಪಸರಿಸುತ್ತಿರುವುದು ಆತಂಕ ಮೂಡಿಸಿದೆ.

ಅರ್ಧ ಲಾಕ್‌ಡೌನ್‌: ಈಗಾಗಲೇ ತಾಲೂಕಿನಾದ್ಯಂತ ಅರ್ಧ ಲಾಕ್‌ಡೌನ್‌ ಮುಂದುವರಿದಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಸಂಪೂರ್ಣ ಲಾಕ್‌ಡೌನ್‌ ಅನಿವಾರ್ಯವಾಗಿದೆ. ಸಂತೆ ತಂದ ಆತಂಕ: ಬನಹಟ್ಟಿಯಲ್ಲಿ ಬೆಳಗ್ಗೆಯಿಂದ ನಡೆಯುವ ಸಂತೆಯಲ್ಲಿ ಯಾರೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜನಜಂಗುಳಿಯಿಂದ ಸೇರುತ್ತಿರುವುದು ಕೋವಿಡ್ ಭೀತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಸಂತೆಗೆ ಬರುವ ಜನತೆಗೆ ಅಧಿಕಾರಿಗಳು ಮನವಿ ಮಾಡಿದರೂ ಸಹಿತ ಸಂಬಂಧವೇ ಇಲ್ಲದಂತೆ ಕಾರ್ಯನಿರ್ವಹಿಸುತ್ತಿರುವುದು ಬೇಸರದ ಸಂಗತಿ. ತಹಶೀಲ್ದಾರ್‌ ಪ್ರಶಾಂತ ಚನಗೊಂಡ, ಪೌರಾಯುಕ್ತ ಶ್ರೀನಿವಾಸ ಜಾಧವ, ಸಿಪಿಐ ಕರುಣೇಶಗೌಡ, ಕಂದಾಯ ನಿರೀಕ್ಷಕ ಬಸವರಾಜ ತಾಳಿಕೋಟಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next