ಅಳ್ನಾವರ: ಸರಕು ಸಾಗಾಣಿಕೆ ವಾಹನಗಳಲ್ಲಿ ಪ್ರಯಾಣಿಸುವುದು ಅಪಾಯಕಾರಿಯಾಗಿದ್ದು, ಇಂತಹ ಪ್ರಯಾಣ ಕಾನೂನಿಗೆ ವಿರುದ್ಧವಾಗಿದೆ ಎಂದು ಧಾರವಾಡ ಸಾರಿಗೆ ನಿರೀಕ್ಷಕ ಆರ್.ಎ. ಕಿತ್ತೂರ ಹೇಳಿದರು
ಧಾರವಾಡ ಗ್ರಾಮೀಣ ಸಿಪಿಐ ಪಿ.ಬಿ. ನೀಲಗಾರ ಮಾತನಾಡಿ, ಸುಗಮವಾದ ಜೀವನ ಸಾಗಿಸಲು ಅನುಕೂಲವಾಗುವ ಉದ್ದೇಶದಿಂದ ರೂಪಿಸಿರುವ ಕಾನೂನುಗಳಿಗೆ ಬದ್ಧರಾಗಿ ಮುನ್ನಡೆದಾಗ ಮಾತ್ರ ಬದುಕಿಗೊಂದು ಅರ್ಥ ಬರುತ್ತದೆ. ನಮ್ಮ ಒಳಿತಿಗಾಗಿ ಮಾಡಿರುವ ಕಾನೂನುಗಳ ಪರಿಪಾಲನೆ ಮಾಡುವ ಬಗ್ಗೆ ನಾವು ಕಟ್ಟಳೆಗಳನ್ನು ಹಾಕಿಕೊಳ್ಳಬೇಕಾಗಿದೆ ಎಂದರು. ಸ್ಥಳೀಯ ಠಾಣೆ ಪಿಎಸ್‌ಐ ಅನಿಲಕುಮಾರ ಡಿ. ಮಾತನಾಡಿದರು. ಸಾರಿಗೆ ನಿಯಂತ್ರಕ ಕಾಪಸೆ ಹಾಗೂ ವಿವಿಧ ಗ್ರಾಮಗಳ ಸಾರ್ವಜನಿಕರು, ವಾಹನ ಚಾಲಕರು, ಮಾಲೀಕರು ಪಾಲ್ಗೊಂಡಿದ್ದರು ಪ್ರವೀಣ ಪವಾರ ಸ್ವಾಗತಿಸಿದರು. ನಾಗರಾಜ ವಂದಿಸಿದರು.
Advertisement
ಪಟ್ಟಣದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಸುರಕ್ಷತೆ ಪ್ರಯಾಣ ಕುರಿತು ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸರಕು ಸಾಗಾಣಿಕೆ ವಾಹನಗಳಲ್ಲಿ ಜನರನ್ನು ಕುಳ್ಳಿರಿಸಿಕೊಂಡು ಹೋಗಲು ಅವಕಾಶವಿಲ್ಲ. ಇಂತಹ ವಾಹನಗಳಲ್ಲಿ ಜನರು ಪ್ರಯಾಣ ಮಾಡಬಾರದು. ಜೀವಕ್ಕೆ ಅಪಾಯ ತರುವಂತಹ ಅವಘಡಗಳು ಸಂಭವಿಸುವ ಸಂಭವ ಅಧಿಕವಾಗಿರುತ್ತದೆ ಎಂದು ಹೇಳಿದರು.