Advertisement

ಅಭಿವೃದಿ ಪರ ನಿಂತ ನನ್ನನ್ನು ಜನತೆ ಕೈಬಿಡಲ್ಲ

03:12 PM May 10, 2018 | Team Udayavani |

ಚಿಕ್ಕಬಳ್ಳಾಪುರ: ಈ ಚುನಾವಣೆ ತಮಗೆ ಧರ್ಮ ಯುದ್ಧವಾಗಿದೆ. ಸತ್ಯ, ಧರ್ಮದ ಪರವಾಗಿರುವ ಗೆಲುವು ಸಿಗಲಿದೆ. ಜಾತಿವಾದಿಗಳಿಗೆ, ಕ್ಷೇತ್ರದ ಅಭಿವೃದ್ಧಿ ವಿರೋಧಿಗಳಿಗೆ ಮತದಾರರು ತಕ್ಕಪಾಠ ಕಲಿಸಲಿದ್ದಾರೆ ಎಂದು ಕಾಂಗ್ರೆಸ್‌ ಅಭ್ಯರ್ಥಿ, ಶಾಸಕ ಡಾ.ಕೆ.ಸುಧಾಕರ್‌ ತಿಳಿಸಿದರು.

Advertisement

ನಿರೀಕ್ಷೆಗೂ ಮೀರಿ ಅನುದಾನ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ವಿವಿಧಡೆಗಳಲ್ಲಿ ಬುಧವಾರ ತಮ್ಮ ಚುನಾವಣಾ
ಪ್ರಚಾರ ಸಭೆಗಳನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ 70 ವರ್ಷಗಳಿಂದ ಆಗದ ಕ್ಷೇತ್ರದ ಅಭಿವೃದ್ಧಿ ಕೇವಲ 5 ವರ್ಷದಲ್ಲಿ ಆಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ನಿರೀಕ್ಷೆಗೂ ಮೀರಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡಿದೆ. ಯಾವುದೇ ಜಾತಿ, ಧರ್ಮ ಭೇದ ಮಾಡದೇ ರೈತಾಪಿ ಯುವಜನರ, ಮಹಿಳೆಯರ ಸಬಲೀಕರಣಕ್ಕಾಗಿ ಶಕ್ತಿ ಮೀರಿ ದುಡಿದಿದ್ದೇನೆ ಎಂದರು.

ನೀರಾವರಿಗೆ ಆದ್ಯತೆ: ಈ ಹಿಂದೆ ಯಾವ ಸರ್ಕಾರವು ಜಿಲ್ಲೆಯ ನೀರಾವರಿಗೆ ಕೊಡದ ಆದ್ಯತೆಯನ್ನು ಐದು ವರ್ಷದಲ್ಲಿ ಕಾಂಗ್ರೆಸ್‌ ಸರ್ಕಾರ ಬದ್ಧತೆ, ಪ್ರಾಮಾಣಿಕತೆಯಿಂದ ನೀಡಿದ್ದು, ಎತ್ತಿನ ಹೊಳೆಗೆ 13 ಸಾವಿರ ಕೋಟಿ ರೂ., ಹೆಬ್ಟಾಳ, ನಾಗವಾರ ಯೋಜನೆಗೆ 1 ಸಾವಿರ ಕೋಟಿ ರೂ. ಖರ್ಚು ಮಾಡುತ್ತಿದೆ.

ಆದರೆ, ವಿರೋಧ ಪಕ್ಷಗಳು ಕ್ಷೇತ್ರಕ್ಕೆ ಏನು ಮಾಡಿಲ್ಲ ಎಂದು ಅಪಪ್ರಚಾರದಲ್ಲಿ ತೊಡಗಿವೆ. ಅಧಿಕಾರದಲ್ಲಿರುವಾಗ ಏನು ಮಾಡಲಾಗದವರು ಇಂದು ಕ್ಷೇತ್ರದ ಪ್ರಗತಿ ಸಹಿಸದೇ ಇಲ್ಲಸಲ್ಲದ ಅಪಾದನೆಗಳನ್ನು ಮಾಡುತ್ತಿದ್ದಾರೆ. ಆದರೂ ಕ್ಷೇತ್ರ ಜನ ಅಭಿವೃದ್ಧಿ ಪರ ನಿಂತಿದ್ದಾರೆ. ಈ ಚುನಾವಣೆಯಲ್ಲಿ ತಮಗೆ ಅತ್ಯಧಿಕ ಮತಗಳನ್ನು ತಂದುಕೊಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೈಗಾರಿಕೆ ತರುವೆ: ಮುಂದಿನ ಐದು ವರ್ಷದಲ್ಲಿ ಈಗ ನೀಡಿರುವ ಎಲ್ಲಾ ಭರವಸೆಗಳ ಈಡೇರಿಕೆಗೆ ಶಕ್ತಿ ಮೀರಿ ಕೆಲಸ
ಮಾಡುತ್ತೇನೆ. ಮುಖ್ಯವಾಗಿ ಈ ಭಾಗಕ್ಕೆ ಕೈಗಾರಿಕೆಗಳನ್ನು ತಂದುಕೊಡುವುದರ ಜೊತೆಗೆ ಸಮಗ್ರ ನೀರಾವರಿ ಕಲ್ಪಿಸುವುದು ತಮ್ಮ ಧ್ಯೇಯವಾಗಿದೆ. ಕ್ಷೇತ್ರದ ಎಲ್ಲಾ ವರ್ಗದ ಜನರ ವಿಶ್ವಾಸ, ನಂಬಿಕೆ ಉಳಿಸಿಕೊಂಡು ಬಂದಿದ್ದೇನೆ. ಈ ಚುನಾವಣೆಯಲ್ಲಿ ಮತ್ತೆ ಅಭಿವೃದ್ಧಿಗೆ ಮನ್ನಣೆ ಸಿಗಲಿದೆ. ಈಗಾಗಲೇ ನೂರಾರು ಕೋಟಿ ರೂ. ವೆಚ್ಚದಲ್ಲಿ ಚಿಕ್ಕಬಳ್ಳಾಪುರ ನಗರದ ಪ್ರಗತಿಗೆ ಚಾಲನೆ ನೀಡಲಾಗಿದೆ. ಕಾಮಗಾರಿಗಳು ಪ್ರಗತಿಯಲ್ಲಿದ್ದು, ಒಂದರೆಡು ತಿಂಗಳಲ್ಲಿ ಪೂರ್ಣಗೊಳ್ಳಲಿವೆ ಎಂದರು.

Advertisement

ಕಾಂಗ್ರೆಸ್‌ ಸರ್ಕಾರ ಐದು ವರ್ಷದಲ್ಲಿ ನುಡಿದಂತೆ ನಡೆದಿದೆ. ಎಲ್ಲಾ ವರ್ಗಕ್ಕೂ ಸಾಮಾಜಿಕ ನ್ಯಾಯ ಕೊಟ್ಟಿದೆ. ಮತ್ತೂಮ್ಮೆ ಕಾಂಗ್ರೆಸ್‌ಗೆ ಮತ ನೀಡುವ ಮೂಲಕ ರಾಜ್ಯದಲ್ಲಿ ಬಿಜೆಪಿ, ಅವಕಾಶವಾದಿ ಜೆಡಿಎಸ್‌ ಪಕ್ಷವನ್ನು ತಿರಸ್ಕರಿಸಿ ಕಾಂಗ್ರೆಸ್‌ ನೇತೃತ್ವದ ಜನಪರ ಸರ್ಕಾರ ರಚನೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಜೆಡಿಎಸ್‌ನಿಂದ ಕಾಂಗ್ರೆಸ್‌ ಸೇರ್ಪಡೆ: ಚಿಕ್ಕಬಳ್ಳಾಪುರ ತಾಲೂಕಿನ ಗೊಲ್ಲಹಳ್ಳಿ ಗ್ರಾಪಂನ ಜೆಡಿಎಸ್‌ ಅಧ್ಯಕ್ಷರು ಪಕ್ಷ
ತ್ಯಜಿಸಿ ಶಾಸಕ ಡಾ. ಕೆ. ಸುಧಾಕರ್‌ ಸಮ್ಮುಖ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಜೊತೆಗೆ ಹನುಮಂತಪುರದ ಜೆಡಿಎಸ್‌ ನಾಯಕರಾದ ನಾರಾಯಣ, ದೇವರಾಜು, ನಾಗರಾಜು, ವೆಂಕಟೇಶ್‌, ಆನಂದ್‌ ಎಲ್‌. ನವೀನ, ಆನಂದ ಎ., ವೆಂಕಟೇಶ್‌, ಮೂರ್ತಿ, ನರಸಿಂಹಮೂರ್ತಿ ಎಸ್‌., ರಮೇಶ್‌ ಕೂಡ ಕಾಂಗ್ರೆಸ್‌ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಕೋಚಿಮುಲ್‌ ನಿರ್ದೇಶಕ ಕೆ.ವಿ.ನಾಗರಾಜ್‌, ಎಪಿಎಂಸಿ ನಿರ್ದೇಶಕ ಮಿಲ್ಟನ್‌ ವೆಂಕಟೇಶ್‌ ಆವಲಗುರ್ಕಿ ರಾಜಣ್ಣ ಮತ್ತಿತರರು ಉಪಸ್ಥಿತರಿದ್ದರು ಮತಬೇಟೆಗೆ ತಾರೆಯರ ಮನೆ ಮನೆ ಭೇಟಿ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಬುಧವಾರವು ಸಹ ಚಿತ್ರತಾರೆಗಳ ತಂಡ ಮನೆ ಮನೆಗೂ ಭೇಟಿ ನೀಡಿ ಶಾಸಕ ಡಾ.ಕೆ.ಸುಧಾಕರ್‌ ಪರ ಮತಯಾಚನೆ ನಡೆಸಿದರು. ಬಿಸಿಲ ಬೇಗೆಯನ್ನೂ ಲೆಕ್ಕಿಸದೇ ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ಚಿತ್ರ ಕಲಾವಿದರಾದ ದಿಗಂತ್‌, ಪ್ರಜ್ವಲ್‌ ದೇವರಾಜ್‌ ಹಾಗೂ ಹರ್ಷಿಕಾ ಪೂಣಚ್ಚ ಸೇರಿದಂತೆ ಹಲವು ಕಲಾವಿದರು ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಶಾಸಕ ಡಾ. ಕೆ. ಸುಧಾಕರ್‌ ಅವರನ್ನು ಮತ್ತೂಮ್ಮೆ ಹೆಚ್ಚಿನ ಮತಗಳ ಅಂತರಿಂದ ಗೆಲ್ಲಿಸಿಕೊಡಬೇಕೆಂದು ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next