ಮಂಡ್ಯ: ಬೆಂಗಳೂರು-ಮೈಸೂರು ಹೆದ್ದಾರಿ ಉದ್ಘಾಟನೆ ಹಿನ್ನೆಲೆಯಲ್ಲಿ ಸಮಾವೇಶಕ್ಕೆ ಜನರು ವಿವಿಧೆಡೆಗಳಿಂದ ಆಗಮಿಸುತ್ತಿದ್ದಾರೆ.
ಮಂಡ್ಯ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಾದ ಮೈಸೂರು, ರಾಮನಗರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಕೇಂದ್ರ-ರಾಜ್ಯ ಸರ್ಕಾರಗಳ ಫಲಾನುಭವಿಗಳು ರಾಜ್ಯದ 9 ಜಿಲ್ಲೆಗಳಿಂದ ಬರುತ್ತಿದ್ದಾರೆ.
ಜನರನ್ನು ಕರೆತರಲು ವಿವಿಧ ಭಾಗಗಳಿಗೆ ಸುಮಾರು 4 ಸಾವಿರ ಬಸ್ ಗಳ ನಿಯೋಜನೆ ಮಾಡಲಾಗಿತ್ತು. ಅದರಂತೆ ಬಸ್ ಗಳಲ್ಲಿ ಜನರನ್ನು ಕರೆತರಲಾಗುತ್ತಿದೆ.
ಇದನ್ನೂ ಓದಿ:ಬಿಜೆಪಿಯು ಕಾಂಗ್ರೆಸ್ ಪಕ್ಷದ ದಾರಿಯಲ್ಲೇ ಸಾಗುತ್ತಿದೆ…; ಅಖಿಲೇಶ್ ಯಾದವ್
Related Articles
ಸಮಾವೇಶ ನಡೆಯುವ ಹಿಂಭಾಗದ ಕುದುರಗುಂಡಿ ಕಾಲೋನಿಯ ಬಳಿ ನಿಯೋಜಿಸಲಾಗಿರುವ ಪಾರ್ಕಿಂಗ್ ಜಾಗಕ್ಕೆ ಬಸ್ ಗಳು ಬರುತ್ತಿವೆ. ಅಲ್ಲಿಂದ ಜನರು ಸಮಾವೇಶದ ವೇದಿಕೆ ಮುಂಭಾಗಕ್ಕೆ ಆಗಮಿಸುತ್ತಿದ್ದಾರೆ.
ಬರುವ ಎಲ್ಲರನ್ನು ಪೊಲೀಸ್ ಸಿಬ್ಬಂದಿಗಳು, ಭದ್ರತಾ ಪಡೆ ಸಿಬ್ಬಂದಿಗಳು ಪ್ರತಿಯೊಬ್ಬರನ್ನು ಪರಿಶೀಲಿಸಿ ಒಳಗೆ ಬಿಡಲಾಗುತ್ತಿದೆ. ವೇದಿಕೆ ಮುಂಭಾಗ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಆಸನಗಳ ವ್ಯವಸ್ಥೆ ಮಾಡಲಾಗಿದೆ. ಜನರನ್ನು ವೇದಿಕೆಗೆ ಮುಂಭಾಗಕ್ಕೆ ಕರೆತರಲು ಬಿಜೆಪಿ ಕಾರ್ಯಕರ್ತರು, ಸ್ವಯಂ ಸೇವಕರು ಮುಂದಾಗಿದ್ದಾರೆ.