ಛತ್ತೀಸ್ ಗಢ: ಛತ್ತೀಸ್ ಗಢ ವಿಧಾನಸಭಾ ಚುನಾವಣೆಯ ಮತಎಣಿಕೆ ಮುಂದುವರಿದಿದ್ದು, ಆರಂಭಿಕ ಹಂತದಲ್ಲಿ ಆಡಳಿತಾರೂಢ ಕಾಂಗ್ರೆಸ್ ಮುನ್ನಡೆ ಸಾಧಿಸಿತ್ತು. ಆದರೆ 11.30ರ ನಂತರ ಬಿಜೆಪಿ 50 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಇದು ಮೋದಿಜೀಯ ಗ್ಯಾರಂಟಿಗೆ ಮತದಾರರು ನೀಡಿದ ತೀರ್ಪು ಎಂದು ಬಿಜೆಪಿ ಹಿರಿಯ ಮುಖಂಡ , ಮಾಜಿ ಸಿಎಂ ರಮಣ್ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ:World Cup ಫೈನಲ್ ಸೋಲಿನ ಕಾರಣ ಕೇಳಿದ ಬಿಸಿಸಿಐ; ಕೋಚ್ ದ್ರಾವಿಡ್ ಹೇಳಿದ್ದೇನು?
11ಗಂಟೆವರೆಗೂ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿತ್ತು. ಆದರೆ ಇದೀಗ ಬಿಜೆಪಿ 50 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ 38 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಅಧಿಕಾರದ ಗದ್ದುಗೆ ಏರುವ ಕನಸು ಭಗ್ನಗೊಳ್ಳುವಂತಾಗಿದೆ.
ಛತ್ತೀಸ್ ಗಢದಲ್ಲಿ ಮತದಾರರು ಮೋದಿಜೀಯವರ ಗ್ಯಾರಂಟಿಯನ್ನು ನಂಬಿದ್ದಾರೆ. ಅದು ಫಲಿತಾಂಶದ ಟ್ರೆಂಡ್ ನಲ್ಲಿ ಸಾಬೀತಾಗಿದೆ. ಭೂಪೇಶ್ ಬಘೇಲ್ ರನ್ನು ಛತ್ತೀಸ್ ಗಢದ ಮತದಾರರು ತಿರಸ್ಕರಿಸಿದ್ದಾರೆ. ಭೂಪೇಶ್ ಬಘೇಲ್ ಅವರ ಭ್ರಷ್ಟಾಚಾರ, ಮದ್ಯ ಹಗರಣ, ಮಹದೇವ್ App ಹಗರಣದ ಕೊಡುಗೆಯ ಫಲಿತಾಂಶ ಇದಾಗಿದೆ ಎಂದು ರಮಣ್ ಸಿಂಗ್ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಭಾರತೀಯ ಜನತಾ ಪಕ್ಷ ಅಧಿಕಾರದ ಗದ್ದುಗೆ ಏರಿದರೆ, ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಂಗ್, ಇದನ್ನು ಪಕ್ಷ ತೀರ್ಮಾನಿಸಲಿದೆ. ನನಗೆ ಸಿಎಂ ಹುದ್ದೆ ಕೊಡಿ ಎಂದು ಯಾವತ್ತೂ ಕೇಳಿಲ್ಲ ಎಂದು ಹೇಳಿದರು.