Advertisement

ಜನಸಂದಣಿರಹಿತ ಸ್ಥಿತಿ, ಏಕಾಂತದಲ್ಲಿ ಪರ್ಯಾಯ ಶ್ರೀಗಳ ಪಾರಾಯಣ

09:39 PM Mar 22, 2020 | Sriram |

ಉಡುಪಿ: ಶ್ರೀಕೃಷ್ಣಮಠ ಸದಾ ಭಕ್ತ ಜನಜಂಗುಳಿಯಿಂದ ಕೂಡಿರುವ ತಾಣ. ಆದರೆ ರವಿವಾರ ಮಾತ್ರ ಪರಸ್ಥಳದ ಯಾರೊ ಬ್ಬರೂ ಭಕ್ತರು ಇದ್ದಿರಲಿಲ್ಲ. ಕೇವಲ ಮಠದ ಸಿಬಂದಿ ಮಾತ್ರ ಪೂಜೆಯ ಸಹಾಯಕ್ಕಾಗಿ ಇದ್ದರು. ಇದೇ ರೀತಿ ರಥಬೀದಿ ಸುತ್ತಮುತ್ತಲ ಪ್ರದೇಶದ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು.

Advertisement

ಶ್ರೀಕೃಷ್ಣಮಠದ ಮುಂಭಾಗದಲ್ಲಿ ಯಾವುದೇ ಸೇವೆಗಳನ್ನು ಸ್ವೀಕರಿಸುವುದಿಲ್ಲ. ರವಿವಾರ ಬಂದ್‌ ಆಗಿರುತ್ತದೆ ಎಂಬ ಸೂಚನಾ ಫ‌ಲಕವನ್ನು ಹಾಕಲಾಗಿತ್ತು.

ಏತನ್ಮಧ್ಯೆ ಪುಣೆಯಿಂದ ಬಂದ ಇಸ್ಕಾನ್‌ನ ಸುಮಾರು 15 ಭಕ್ತರು ಶ್ರೀಕೃಷ್ಣಮಠದ ಪರಿಸರದಲ್ಲಿ ಬೀಡುಬಿಟ್ಟಿದ್ದಾರೆ. ಸಂಜೆ ಶ್ರೀಕೃಷ್ಣಮಠದ ಮುಂಭಾಗದಲ್ಲಿ ಶ್ರೀಈಶಪ್ರಿಯತೀರ್ಥ ಶ್ರೀಪಾದರು ದೇಶದ ಏಕತೆಗಾಗಿ ಜಾಗಂಟೆಯನ್ನು ಬಾರಿಸುವ ಮೂಲಕ ಸಂದೇಶ ಸಾರಿದರು. ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ಅದಮಾರು ಮಠದ ಮುಂಭಾಗ ಜಾಗಂಟೆಯನ್ನು ಬಾರಿಸಿದರು. ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಮಠದ ಎದುರು ಕೈಚಪ್ಪಾಳೆ ತಟ್ಟಿ ಸಂದೇಶ ಸಾರಿದರು. ಮಠದ ಒಳಗಡೆ ವಿಶೇಷ ಪೂಜೆ ನಡೆಯಿತು.

ಪ್ರಾರ್ಥನಾ ಮಂದಿರಗಳಲ್ಲಿ ಜನ ವಿರಳ
ಚರ್ಚ್‌ಗಳಲ್ಲಿ ರವಿವಾರದ ಸಾಮೂಹಿಕ ಪ್ರಾರ್ಥನೆಯನ್ನು ರದ್ದುಗೊಳಿಸಿದ್ದರಿಂದ ಚರ್ಚ್‌ ನಲ್ಲಿ ಜನಸಂದಣಿ ಇರಲಿಲ್ಲ. ಸಿಎಸ್‌ಐ ಚರ್ಚ್‌ ನಲ್ಲಿ ಜನರ ಸಂಖ್ಯೆ ವಿರಳವಿತ್ತು.
ಬ್ರಹ್ಮಗಿರಿ ನಾಯರ್‌ಕೆರೆಯ ಹಾಶಿಮಿ ಮಸೀದಿಯಲ್ಲಿ ಪ್ರಾರ್ಥನೆಗೆ ಅವಕಾಶವಿಲ್ಲದಂತೆ ಬಂದ್‌ ಮಾಡಲಾಗಿದೆ. ಮುಂದಿನ ಸೂಚನೆ ಬರುವವರೆಗೆ ಇದು ಮುಂದುವರಿಯುತ್ತದೆ. ಮನೆಗಳಲ್ಲಿಯೇ ಪ್ರಾರ್ಥನೆಯನ್ನು ಮನೆ ಯಿಂದಲೇ ನಡೆಸುವಂತೆ ಮಸೀದಿ ಆಡಳಿತ ಮಂಡಳಿ ತಿಳಿಸಿದೆ.

ಏಕಾಂತ ಪಾರಾಯಣ
ಪರ್ಯಾಯ ಅವಧಿಯಲ್ಲಿ ಸದಾ ಕೆಲಸ, ಪಾಠ, ಪೂಜೆಗಳಲ್ಲಿ ನಿರತರಾಗಿರುತ್ತಿದ್ದ ಶ್ರೀಅದಮಾರು ಮಠದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಮಹಾಪೂಜೆ ಮುಗಿದ ಬಳಿಕ ಗರ್ಭಗುಡಿ ಎದುರಿನ ಚಂದ್ರಶಾಲೆಯಲ್ಲಿ ಏಕಾಂತದಲ್ಲಿ ಪಾರಾಯಣ ನಿರತರಾದರು. ಶ್ರೀಕೃಷ್ಣಮಠದಲ್ಲಿ ಇಂತಹ ಏಕಾಂತ ದಿನ ಸಿಗುವುದೇ ದುರ್ಲಭ.

Advertisement
Advertisement

Udayavani is now on Telegram. Click here to join our channel and stay updated with the latest news.

Next