Advertisement

“ಲಿಪ್ ಚಾಲೆಂಜ್’ಅಂತೆ ಏನ್ ಟ್ರೆಂಡ್ ಗುರು ಇದು…

09:24 AM Sep 12, 2019 | mahesh |

ಈ ಸಾಮಾಜಿಕ ಜಾಲತಾಣ ಬಂದ ಮೇಲೆ ಇಡೀ ಜಗತ್ತೇ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿದೆ. ಕೆಲವರು ಸುದ್ದಿಯಾಗಲೇಬೇಕು ಎಂದು ಸುದ್ದಿ ಮಾಡುವವರರಾದರೆ, ಹಲವರು ಯಾರ ಸುದ್ದಿಯೂ ಬೇಡ ಎಂದು ಗುಟ್ಟಾಗಿ ತಮ್ಮಷ್ಟಕ್ಕೇ ಇರುವವರು. ಆದರೆ ಈ ಸೋಶಿಯಲ್ ಮೀಡಿಯಾ ಬಂದ ಬಳಿಕ ಸುದ್ದಿಯಾಗುವವರೂ, ಸುದ್ದಿಯನ್ನು ಬಯಸದವರೂ ಎಲ್ಲರೂ ಸುದ್ದಿಯೇ.

Advertisement

ಸೋಶಿಯಲ್ ಟ್ರೆಂಡ್ ರೂಪದಲ್ಲಿ ನಮ್ಮಲ್ಲಿ ಹಲವು ಪ್ರಯೋಗಗಳು ನಡೆದಿದ್ದು, ಕಾಲ ಕಾಲಕ್ಕೆ ಬಂದು, ಮಾಯವಾಗಿ ಬಿಟ್ಟಿದೆ. ಯೋಗ ಚಾಲೆಂಜ್, ಬುಕ್ ಚಾಲೆಂಜ್ ಫಿಟ್ ಚಾಲೆಂಜ್, ವಾಟರ್ ಚಾಲೆಂಜ್, ಚಲಿಸುವ ಕಾರಿನಿಂದ ಇಳಿಯುವ ಚಾಲೆಂಜ್ ಮೊದಲಾದ ಚಾಲೆಂಜ್ಗಳನ್ನು ನಾವು ನೋಡಿದ್ದೇವೆ, ಕೆಲವನ್ನು ಪ್ರಯತ್ನಿಸಿಯೂ ಆಗಿದೆ. ಇರಲಿ ಬಿಡಿ ನಮ್ಮದೂ ಒಂದು ಇರ್ಲಿ ಎಂದು ಕೆಲವರೂ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟರೆ ಕೆಲವು ಪ್ರೈವಸೀ ರಕ್ಷಣೆಯ ಮೊರೆ ಹೋಗಿ ಸುಮ್ಮನಾದವರೂ ಇದ್ದಾರೆ.

ಈ ಎಲ್ಲದರ ನಡುವೆ ವಿಚಿತ್ರ ಟ್ರೆಂಡ್ ಒಂದು ಶುರಾಗಿದ್ದು, ಟಿಕ್ಟಾಕ್ ಮತ್ತು ಟ್ವೀಟರ್ಗೂ ಲಗ್ಗೆ ಇಟ್ಟಿದೆ. ಇದೆನಪ್ಪಾ ಅಂದ್ರೆ ಲಿಪ್ ಚಾಲೆಂಜ್. ಸುಂದರ ತುಟಿಗಳು ಬೇಕು ಎಂದು ಹಪಹಪಿಸುವರು ಕೆಲವರಾಗಿದ್ದರೆ, ಇದ್ದ ತುಟಿಯನ್ನು ಬಣ್ಣ ಹಚ್ಚಿ ಸುಂದರಗೊಳಿಸುವವರು ಕೆಲವರು. ಈ ಬಣ್ಣಗಳೂ ನಾನಾ ತರಹದಲ್ಲಿವೆ. ಇದೀಗ ವಿದೇಶಗಳಲ್ಲಿನ ಟ್ರೆಂಡ್ ಏನಪ್ಪಾ ಅಂದ್ರೆ ತುಟಿಯ ಮೇಲ್ಭಾಗವನ್ನು ಮೂಗಿನ ಚೂರು ಕೆಳಗೆ ಗಮ್ ಬಳಸಿ ಅಂಟಿಸಲಾಗುತ್ತಿದೆ. ಹೀಗೆ ಅಂಟಿದ ತುಟಿಗಳು ವಿಸ್ತಾರವಾಗಿ ಕಾಣುತ್ತಿದ್ದು ಅವುಗಳಿಗೆ ಲಿಪ್ಸ್ಟಿಕ್ ಹಚ್ಚಲಾಗುತ್ತಿದೆ. ಈ ರೀತಿಯ ಪ್ರಯೋಗ ಮಾಡಿದ ವೀಡಿಯೋಗಳನ್ನು ಟ್ವೀಟರ್ ಮತ್ತು ಟಿಕ್ಟಾಕ್ನಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಯಾಕೆ ಇದು?
ಸದ್ಯ ಲಿಪ್ ಟ್ರೆಂಡ್ ಎಂದು ಕರೆಯಲಾಗುವ ಇದನ್ನು ಸಪುರ ತುಟಿ ಇರುವವರು ಈ ರೀತಿ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಗಮ್ ಮೂಲಕ ತುಟಿಯ ಮೇಲ್ಭಾಗವನ್ನು ಮೂಗಿನ ಕೆಳಗಿನ ಭಾಗದ ಚರ್ಮಕ್ಕೆ ಅಂಟುವಂತೆ ಮಾಡಲಾಗುತ್ತಿದೆ. ಬಳಿಕ ತುಟಿಗೆ ಲಿಪ್ಸ್ಟಿಕ್ ಹಚ್ಚಲಾಗುತ್ತಿದ್ದು, ಇದರಿಂದ ತುಟಿ ದಪ್ಪವಾಗಿ ಕಾಣುತ್ತದೆ. ಈ ರೀತಿ ಮಾಡುವುದರಿಂದ ಅವರಿಗೆ ಮಾತನಾಡಲು ಯಾವುದೇ ಕಷ್ಟವಾಗುವುದಿಲ್ಲ ಏಕೆಂದರೆ ವಿದೇಶಗಳಲ್ಲಿ “ಮ’ಕಾರಗಳ ಬಳಕೆ ಕಡಿಮೆ ಇದೆ. ಸದ್ಯಕ್ಕೆ ಈ ಟ್ರೆಂಡ್ ವಿದೇಶಗಳ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಕಾಣಸಿಗುತ್ತಿದೆ. ಒಟ್ಟಾರೆಯಾಗಿ ಇಂತಹ ಚಾಲೆಂಜ್ಗಳು ಸಖತ್ ಕಾಮೆಡಿ ಹೈಪ್ ಕ್ರಿಯೇಟ್ ಮಾಡುತ್ತಿವೆ.

 

Advertisement

Advertisement

Udayavani is now on Telegram. Click here to join our channel and stay updated with the latest news.

Next